ADVERTISEMENT

ಕರವೇ ಹೆಸರು ದುರುಪಯೋಗ ಸಲ್ಲದು

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ನಾರಾಯಣ ಗೌಡ ಮನವಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:42 IST
Last Updated 21 ಜನವರಿ 2017, 5:42 IST
ಕರವೇ ಹೆಸರು ದುರುಪಯೋಗ ಸಲ್ಲದು
ಕರವೇ ಹೆಸರು ದುರುಪಯೋಗ ಸಲ್ಲದು   

ಚಿತ್ರದುರ್ಗ: ‘ಕರ್ನಾಟಕ ರಕ್ಷಣಾ ವೇದಿಕೆಯನ್ನು ಯಾರೂ ದುರು ಪಯೋಗ ಮಾಡಿಕೊಳ್ಳಬೇಡಿ, ನಾವೆಲ್ಲರೂ ಸೇರಿ ಕನ್ನಡ ಮನಸ್ಸನ್ನು ಕಟ್ಟುವ ಕೆಲಸ ಮಾಡೋಣ’ ಎಂದು ಕರ್ನಾಟಕ ರಕ್ಷಣಾ ವೇದಿಕ ರಾಜ್ಯ ಘಟಕದ ಅಧ್ಯಕ್ಷ ಟಿ.ನಾರಾಯಣ ಗೌಡ  ಕಿವಿಮಾತು ಹೇಳಿದರು.

  ನಗರದ ಜಗಳೂರು ಮಹಲಿಂಗಪ್ಪ ಟವರ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಕಾರ್ಯಕರ್ತರು  ಸಮಾಜದ ನಡುವೆ ಉತ್ತಮ ಬಾಂಧವ್ಯ ಇಟ್ಟು ಕೊಳ್ಳಿ.

ಕರ್ನಾಟಕ ಇತಿಹಾಸ ಬಹಳ ದೊಡ್ಡದು. ಕನ್ನಡ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಬೇಕು. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವಿದೆ. ಆದರೆ ಅನ್ಯ ಭಾಷೆಗಳಿಗೆ ಸಿಗುವ ಸೌಲಭ್ಯಗಳು, ಸ್ಥಾನ ಮಾನಗಳು ಕನ್ನಡ ಭಾಷೆಗೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾವು ಕನ್ನಡ ನೆಲ ಜಲದ ವಿಚಾರಗಳಿಗೆ ಹೋರಾಡುತ್ತಿದ್ದೇವೆ. ಕೆಲವು ಸಂಘಟನೆಗಳು ಜಾತಿ, ಸ್ವಾರ್ಥಕ್ಕಾಗಿ ಮೇಲೆ ಹುಟ್ಟಿಕೊಂಡಿವೆ. ಕರ್ನಾಟಕದಲ್ಲಿ ಕನ್ನಡಿಗನಿಗೆ ಸಾರ್ವ ಭೌಮ ಸ್ಥಾನ ಸಿಗಬೇಕು. ಅದಕ್ಕಾಗಿ ಹೋರಾಟ ಮಾಡೋಣ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಮೇಶ್‌ ಮಾತನಾಡಿ, ‘ಚಿತ್ರದುರ್ಗ ಎಲ್ಲಾ ತಾಲ್ಲೂಕು ಘಟಕಗಳ ಕಾರ್ಯಕರ್ತರು ಸಂಘಟನೆ ಮಾಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ  ಸಂಘಟನೆ ಯನ್ನು  ಬಲಪಡಿಸೋಣ’ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಹೇಮಲತಾ, ಸಾಂಸ್ಕೃತಿಕ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ್‌ಗೌಡ್ರು, ಜಿಲ್ಲಾ ಸಂಚಾಲಕ, ಸಿ.ಎನ್.ಆರ್.ಪ್ರಕಾಶ್‌, ಜಿಲ್ಲಾ ಮಹಿಳಾ ಘಟಕದ ರೇಣುಕರವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT