ADVERTISEMENT

ಮೈಮರೆತರೆ ಆಪತ್ತು ಕಟ್ಟಿಟ್ಟ ಬುತ್ತಿ

ಹೊಳಲ್ಕೆರೆ ರಸ್ತೆಯಲ್ಲಿ ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 8:55 IST
Last Updated 3 ಆಗಸ್ಟ್ 2015, 8:55 IST

ಚಿತ್ರದುರ್ಗ: ಅಂಕು – ಡೊಂಕಾದ ರಸ್ತೆ, ರಸ್ತೆ ಬದಿಯಲ್ಲಿ ಹಾಕಲಾಗಿರುವ ಜಲ್ಲಿ ಕಲ್ಲುಗಳು. ಇಲ್ಲಿ ಸಂಚರಿಸುವಾಗ ಮೈಯೆಲ್ಲ ಕಣ್ಣಾಗಿರಬೇಕು. ಒಂದು ವೇಳೆ ಈ ರಸ್ತೆಯಲ್ಲಿ ರಾತ್ರಿ ಹೊತ್ತು ಸಂಚರಿಸು ವಾಗ ದ್ವಿಚಕ್ರ ವಾಹನ ಸವಾರರು ಕೊಂಚ ಯಾಮಾರಿದರೆ ಅಥವಾ ಮೈಮರೆತರೆ ಆಪತ್ತು ಕಟ್ಟಿಟ್ಟ ಬುತ್ತಿ. ಇದು ನಗರದ ಹೊಳಲ್ಕೆರೆ ರಸ್ತೆಯ ಸದ್ಯದ ಪರಿಸ್ಥಿತಿ....

ಸಂಚಾರಕ್ಕೆ ಹರಸಾಹಸ: ಈ ರಸ್ತೆ ಮೊದಲಿನಿಂದಲೂ ವಿಪರೀತ ವಾಹನ ಗಳು ಸಂಚರಿಸುವ ಮಾರ್ಗವಾಗಿದೆ. ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ, ಹೊಸದುರ್ಗಕ್ಕೆ ತೆರಳುವ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಈ ಮಾರ್ಗವಾಗಿಯೇ ಸಂಚರಿಸುತ್ತವೆ.

ಇಲ್ಲಿ ದೊಡ್ಡ ವಾಹನಗಳು ಸಂಚರಿಸುವಾಗ ಸಣ್ಣ ವಾಹನಗಳ ಸವಾರರು ಹರಸಾಹಸ ಪಡಬೇಕಿದೆ. ಸುಗಮ ಸಂಚಾರಕ್ಕೆ ಅನುಕೂಲವಾ ಗುವಂತಹ ರಸ್ತೆ ನಿರ್ಮಾಣವಾಗದಿ ರುವುದೇ ಇದಕ್ಕೆ ಬಹುಮುಖ್ಯ ಕಾರಣ. ಒಳಚರಂಡಿ ಕಾಮಗಾರಿ ಬಹುತೇಕ ಮುಗಿದಿದ್ದರು ಕೂಡ ರಸ್ತೆ ನಿರ್ಮಾಣಕ್ಕೆ ಸಂಬಂಧ ಪಟ್ಟವರು ಮುಂದಾಗಿಲ್ಲ. ಈಗಲಾದರು ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿ ಅಶೋಕ್‌.

ಅನೇಕರು ಪೆಟ್ಟು ತಿಂದಿದ್ದಾರೆ:  ಒಳಚರಂಡಿ ಕಾಮಗಾರಿ ಮತ್ತು ಮಳೆ ಸುರಿದ ಸಂದರ್ಭದಲ್ಲಿ ಈ ಮಾರ್ಗದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಇಲ್ಲಿನ ಪೆಟ್ರೋಲ್‌ ಬಂಕ್‌ವರೆಗೂ ರಸ್ತೆ ತಗ್ಗು ಗುಂಡಿ ಬಿದ್ದಿದ್ದು, ಗುಂಡಿ ಹೊಂಡದಂತಾಗಿದೆ. ‘ಯಾವಾಗ ಪೂರ್ಣಗೊಳಿಸುತ್ತೀರಾ’ ಎಂದು ಇಲ್ಲಿ ಕೆಲಸ ಮಾಡುತ್ತಿ ರುವವರನ್ನು ಕೇಳಿದರೆ, ‘ನಮಗೆ ಗೊತ್ತಿಲ್ಲ ಸ್ವಾಮಿ’ ಎಂಬ ಉತ್ತರ ನೀಡುತ್ತಾರೆ.

ಮೂರು ತಿಂಗಳ ಕೆಳಗೆ ನೂತನ ರಸ್ತೆ ನಿರ್ಮಾಣದ ಉದ್ದೇಶದಿಂದ  ಈಗಿರುವ ರಸ್ತೆ ಪಕ್ಕದಲ್ಲಿ ದೊಡ್ಡ ಗುಂಡಿಗಳನ್ನು ತೆಗೆಯಲಾಗಿತ್ತು. ಸುಮಾರು ದಿನಗಳ ಹಿಂದಷ್ಟೇ ಜಲ್ಲಿ ಕಲ್ಲುಗಳನ್ನು ಹಾಕಲಾ ಗಿದೆ. ತುದಿಯಲ್ಲಿ ಸಂಚರಿಸುವ ಸಂದರ್ಭ ದಲ್ಲಿ ದ್ವಿಚಕ್ರ ವಾಹನ ಸವಾರರಲ್ಲಿ ಈಗಾಗಲೇ ಸುಮಾರು ಮಂದಿ ಪೆಟ್ಟು ತಿಂದು ನೋವು ಅನುಭವಿಸಿದ್ದಾರೆ. ಈ ವಾರದಲ್ಲೇ ಮೂರ್‌್ನಾಲ್ಕು ಮಂದಿ ಈ ತೊಂದರೆ ಅನುಭವಿಸಿದ್ದಾರೆ. ಈಗಲಾ ದರೂ ರಸ್ತೆ ನಿರ್ಮಾಣಕ್ಕೆ ಮುಂದಾಗು ವರೇ ಎಂದು ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಪ್ರಶ್ನಿಸಿದ್ದಾರೆ.

ಒಳಚರಂಡಿ ಮತ್ತು ರಸ್ತೆ ನಿರ್ಮಾಣ ಕ್ಕಾಗಿ ವಿದ್ಯುತ್‌ ಕಂಬಗಳ ಸ್ಥಳಾಂತರ ಮಾಡುತ್ತಿದ್ದು, ನಾಗರಿಕರು ಸಹಕರಿಸ ಬೇಕು ಎಂಬುದಾಗಿ ಬೆಸ್ಕಾಂ ಅಧಿಕಾರಿ ಗಳು ಹೇಳುತ್ತಿದ್ದಾರೆ ಹೊರತು ಕಂಬ ಗಳನ್ನು ಸ್ಥಳಾಂತರಿಸುತ್ತಿಲ್ಲ. ಈ ಭಾಗದ ಜನರ ಕಷ್ಟ ಹೇಳತೀರದಾಗಿದೆ ಎನ್ನುತ್ತಾರೆ ಬಹುತೇಕ ನಾಗರಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.