ADVERTISEMENT

ರೈತರ ಬದುಕು ಸುಧಾರಣೆ ಆಗಿಲ್ಲ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 5:13 IST
Last Updated 9 ಜನವರಿ 2017, 5:13 IST

ಚಿತ್ರದುರ್ಗ:  ‘ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಕೃಷಿಯಲ್ಲಿ ತೊಡಗಿರುವ ರೈತರ ಜೀವನ ಮಾತ್ರ ಹಾಗೇ ಇದೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇಂಗಳದಾಳ್ ಗ್ರಾಮದಲ್ಲಿ ಭಾನುವಾರ ಅಖಂಡ ಕರ್ನಾಟಕ ರೈತ ಸಂಘದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ‘ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಎಷ್ಟೇ ಕಷ್ಟ ಬಂದರೂ ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದೇವೆ.  ಅದನ್ನು ಗೌರವಿಸೋಣ. ರೈತರ ಹಿತಕ್ಕಾಗಿಯೇ ಅನೇಕ ಕಾಯ್ದೆಗಳಿವೆ. ಆದರೆ, ಅವು ಗಳನ್ನು ಸರ್ಕಾರ ಸಮರ್ಪಕವಾಗಿ ಜಾರಿ ಗೊಳಿಸಿಲ್ಲ’ ಎಂದರು.

‘ರೈತರ ಪರವಾಗಿರುವ ಯೋಗ್ಯ ರನ್ನು ಚುನಾಯಿಸಬೇಕು. ಅಂಥ ಜನಪ್ರತಿನಿಧಿಗಳಿಂದ ರೈತರ ಉದ್ಧಾರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಶಿವಣ್ಣ ಮಾತನಾಡಿ, ‘ಸರ್ಕಾರಗಳು ರೈತರ ಸಮಸ್ಯೆ ಆಲಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ನೀಡುವ ಪುಡಿಗಾಸಿಗಾಗಿ ಮತಗಳನ್ನು ಮಾರಿಕೊಳ್ಳದೇ ಸ್ವಾಭಿ ಮಾನಿಗಳಾಗಿ ಬದುಕು ರೂಪಿಸಿ ಕೊಳ್ಳಬೇಕು’  ಎಂದು ಸಲಹೆ ನೀಡಿ ದರು. ಇಂಗಳದಾಳು ಗ್ರಾಮದ ಪಟೇಲ್ ಪಾಪಯ್ಯ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಕೆ.ಜಿ.ಭೀಮಾರೆಡ್ಡಿ, ಎಂ.ಸಿದ್ದಪ್ಪ, ಗುರುಸಿದ್ದಪ್ಪ, ಗಿರೀಶ್‌ರೆಡ್ಡಿ, ಎಸ್.ಮುರುಗೇಶ್, ಪಾಲಯ್ಯ ಇದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಪಿ.ಓ.ತಿಮ್ಮಯ್ಯ ರೈತ ಗೀತೆ ಹಾಡಿದರು. ಜಿ.ತಿಪ್ಪೇಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.