ADVERTISEMENT

ಹಿರಿಯೂರು:ಅಪಾಯದ ಸ್ಥಿತಿಯಲ್ಲಿ ಮರದ ವಿದ್ಯುತ್ ಕಂಬ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 9:21 IST
Last Updated 22 ಸೆಪ್ಟೆಂಬರ್ 2017, 9:21 IST

ಹಿರಿಯೂರು: ಹುಳು ಹಿಡಿದಿರುವ ಮರದ ಕಂಬ, ಅದಕ್ಕೆ ಜೋಡಿಸಿ ಎಳೆದಿರುವ ವಿದ್ಯುತ್ ತಂತಿಗಳು ಗಾಳಿಯಲ್ಲಿ ತೂರಾಡುತ್ತಿವೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಆತಂಕ ಅಲ್ಲಿನ ಚಿಕ್ಕ ಓಣಿಯಲ್ಲಿ ನಡೆದಾಡುವವರನ್ನು ಸದಾ ಭಯದಲ್ಲಿ ಇರುವಂತೆ ಮಾಡಿದೆ.

ಇಂತಹ ಒಂದು ದೃಶ್ಯ ಕಣ್ಣಿಗೆ ಬೀಳುವುದು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಜೂಲಯ್ಯನಹಟ್ಟಿಯಲ್ಲಿ. ದಶಕಗಳ ಹಿಂದೆ ಬೆಸ್ಕಾಂ ಇಲಾಖೆ ಸರ್ವೆ ಮರ ಬಳಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಅದು ಮುರಿದು ಬೀಳುವ ಹಂತಕ್ಕೆ ಹೋಗಿದ್ದರೂ ಬದಲಾಯಿಸುವ ಪ್ರಯತ್ನಕ್ಕೆ ಹೋಗಿಲ್ಲ.

ಗ್ರಾಮಕ್ಕೆ ವಿದ್ಯುತ್ ಬಂದಿದ್ದೇ 15–20 ವರ್ಷದ ಹಿಂದೆ. ಆದರೆ ಈಗ ಕರೆಂಟ್ ಕಂಬಗಳು ಗ್ರಾಮಸ್ಥರಲ್ಲಿ ಭಯ ಹುಟ್ಟಿಸುತ್ತಿವೆ. ಕಂಬದಿಂದ ಮನೆಗಳಿಗೆ ಎಳೆದುಕೊಂಡಿರುವ ತಂತಿಗಳು ಕೂಡ ಶಿಥಿಲವಾಗಿದ್ದು, ಗಾಳಿ ಮಳೆಗೆ ಕಂಬ ಉರುಳಿ ಬಿದ್ದರೆ ಅಪಾಯ ಖಚಿತ ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ಪಾಂಡುರಂಗಪ್ಪ, ಕರಿಯಪ್ಪ, ಚಂದ್ರಪ್ಪ, ಗೋವಿಂದರಾಜು ಹೇಳುತ್ತಾರೆ.

ADVERTISEMENT

ಬೆಸ್ಕಾಂ ಇಲಾಖೆಯವರು ತಕ್ಷಣ ಮರದ ಕಂಬಗಳನ್ನು ಬದಲಿಸಿ, ಕಾಂಕ್ರೀಟ್ ಕಂಬಗಳನ್ನು ಅಳವಡಿಸಬೇಕು. ಶಿಥಿಲ ತಂತಿ ಬದಲಾಯಿಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.