ADVERTISEMENT

ಅಣಕು ಪ್ರಾತ್ಯಕ್ಷಿಕೆ– ಜನ ಜಾಗೃತಿ

ಮಂಗಳೂರು-–- ಬೆಂಗಳೂರು ಇಂಧನ ಸಾಗಣೆ ಪೈಪ್‌ಲೈನ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 9:29 IST
Last Updated 10 ಮಾರ್ಚ್ 2017, 9:29 IST

ಬಂಟ್ವಾಳ: ತಾಲ್ಲೂಕಿನ ಅರಳ ಗ್ರಾಮದ ಮೂಲಕ ಹಾದು ಹೋಗಿರುವ ಮಂಗಳೂರು-ಹಾಸನ- ಬೆಂಗಳೂರು ಇಂಧನ ಸಾಗಣೆ ಪೈಪ್‌ಲೈನ್‌ ಸಮೀಪ ಬುಧವಾರ ಮಧ್ಯಾಹ್ನ ಮಣ್ಣಿನಡಿ ಪ್ರತ್ಯೇಕ ಪೈಪ್ ಅಳವಡಿಸಿ ಅದಕ್ಕೆ ಸುರಂಗ ಕೊರೆದು ಯಾವುದೇ ಹಾನಿ ಉಂಟಾಗದಂತೆ ದುರಸ್ತಿಗೊಳಿಸುವ ಕುರಿತು ‘ಅಣಕು ಪ್ರದರ್ಶನ’ ನಡೆಯಿತು.

ಹೆಲ್ಮೆಟ್‌ ಹಾಕಿಕೊಂಡಿದ್ದ ಅಧಿಕಾ ರಿಗಳು, ಸಿಬ್ಬಂದಿ ಓಡಾಡುತ್ತಿದ್ದರೆ, ಇನ್ನೊಂದು ಕಡೆಗೆ ಬಂಟ್ವಾಳ ಮತ್ತು ಮಂಗಳೂರು ಪೆಟ್ರೋನೆಟ್ ಸಂಸ್ಥೆಗೆ ಸೇರಿದ ಅಗ್ನಿಶಾಮಕ ದಳ ತಂಡವು ಸಿದ್ಧ ವಾಗಿ ನಿಂತುಕೊಂಡಿತ್ತು.

ಮಂಗಳೂರು ಪೆಟ್ರೋನೆಟ್ ಸಂಸ್ಥೆ ಮೇಲ್ವಿಚಾರಕ ಎ. ರಾಜನ್, ಉಪ ವ್ಯವಸ್ಥಾಪಕ ಮಹೇಶ ಹೆಗ್ಡೆ, ಎಚ್‌ಪಿಸಿಎಲ್‌ ಅಧಿಕಾರಿ ಪ್ರಪುಲ್ ರಂಗರಿಯಾ, ಉಪ ಅಧಿಕಾರಿ ಕ್ಷೀರ ಸಾಗರ್ ಮತ್ತಿತರ ಅಧಿಕಾರಿಗಳು ಪೈಪ್ ಜೋಡಣೆ ಮಾಡುತ್ತಿದ್ದ ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದರು.

ಈ ನಡುವೆ ಧ್ವನಿವರ್ಧಕ ಮತ್ತು ಹಸಿರು ಬಾವುಟದ ಮೂಲಕ ಕೆಲವೊಂದು ಅಧಿಕಾರಿಗಳು ಎಚ್ಚರಿಕೆ ಮತ್ತು ದುರಸ್ತಿ ಪೂರ್ಣಗೊಂಡ ಬಗ್ಗೆ ಜಮಾಯಿಸಿದ್ದ ಜನತೆಗೆ ಸಂದೇಶ ನೀಡುತ್ತಿದ್ದರು.

ಪೆಟ್ರೋನೆಟ್ ಅಧಿಕಾರಿಗಳಾದ ವಿವೇಕ್ ಹಾಸನ, ರವೀಂದ್ರ ನೆರಿಯಾ, ಬಂಟ್ವಾಳ ಗ್ರಾಮಾಂತರ ಠಾಣೆ ಎಎಸೈ ಭಾಸ್ಕರ, ಅಗ್ನಿಶಾಮಕ ಠಾಣಾಧಿಕಾರಿ ಸುಂದರ್, ಪಂಜಿಕಲ್ಲು ಸರ್ಕಾರಿ  ಪ್ರಾಥ ಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ.ರಾಮ್ ರಾಜೇಶ್, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ, ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ಆಶ್ರಫ್, ಕಂದಾಯ ನಿರೀಕ್ಷಕ ನವೀನ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.