ADVERTISEMENT

ಆಧಾರ್‌ ಜೋಡಿಸದೆ ಇದ್ದಲ್ಲಿ ಪಾವತಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2016, 6:37 IST
Last Updated 30 ಡಿಸೆಂಬರ್ 2016, 6:37 IST

ಮಂಗಳೂರು:  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(ಎಂನರೇಗಾ) ಉದ್ಯೋಗ ಕಾರ್ಡ್‌ ಹೊಂದಿರುವವರ ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಜೋಡಿಸುವಲ್ಲಿ ಬ್ಯಾಂಕ್‌ಗಳು ವಿಫಲ ವಾಗಿರುವುದು ಬೇಸರದ ಸಂಗತಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯಿತಿ ಸಿಇಒ ಎಂ.ಆರ್‌. ರವಿ ಹೇಳಿದರು.

ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2017–18ರ ಸಾಲಿನ ಉತ್ಪಾದಕ ಕ್ಷೇತ್ರದ ಸಾಲ ಬಿಡು ಗಡೆ ಸಂದರ್ಭದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೇವಲ ಉದ್ಯೋಗ ಕಾರ್ಡ್‌ ಹೊಂದಿರು ವವರ ಪೈಕಿ ಕೇವಲ ಶೇ 55 ರಷ್ಟು ಮಂದಿಯ ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಜೋಡಿಸಲಾಗಿದೆ. ಆಧಾರ್‌ ಜೋಡಣೆ ಆಗದೇ ಇರುವ, ಉದ್ಯೋಗ ಕಾರ್ಡ್‌ ಹೊಂದಿರುವವರ ಖಾತೆಗೆ 2017ರ ಜನವರಿ 1ರಿಂದ ವೇತನ ವರ್ಗಾಯಿಸಲಾಗುವುದಿಲ್ಲ ಎಂದು ಹೇಳಿದರು.

ಎಂನರೇಗಾ ಯೋಜನೆಯಡಿ ದುಡಿಮೆ ಮಾಡಿದವರಿಗೆ ಅಧಿಕಾರಿಗಳು ವೇತನ ಬಿಡುಗಡೆ ಮಾಡಲು ಸಾಧ್ಯವಾ ಗದೇ ಇದ್ದಲ್ಲಿ ಬ್ಯಾಂಕ್‌ಗಳೇ ಹೊಣೆಗಾರ ರಾಗಬೇಕಾಗುತ್ತದೆ. ಆಯಾ ಬ್ಯಾಂಕ್‌ಗಳ ಅಧ್ಯಕ್ಷರ ಜತೆ ಈ ಕುರಿತು ಮಾತನಾಡ ಲಾಗುವುದು ಎಂದು ಅವರು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕ್‌ಗಳು ಸಾಲ ಮತ್ತು ಠೇವಣಿ ಅನುಪಾತ  (ಸಿಡಿ ಅನುಪಾತ) ಅಂತರವನ್ನು ಕಡಿಮೆ ಮಾಡಬೇಕು ಎಂದು ಸಭೆಯಲ್ಲಿ ಸಲಹೆ ಮಾಡಲಾಯಿತು.
ಸಿಂಡಿಕೇಟ್‌ ಬ್ಯಾಂಕ್‌ ಡಿಜಿಎಂ ಎನ್‌. ಎಸ್‌. ಸೋಮಯಾಜಿ ಮಾತನಾಡಿ, ಸೆ. 30ಕ್ಕೆ ಅನ್ವಯವಾಗುವಂತೆ, ಸಿಡಿ ಅನು ಪಾತ ಶೇ 57 : 44 ಇದೆ. ಇದು 2015ರ ಇದೇ ಅವಧಿಯ ಸಿಡಿ ಅನುಪಾತಕ್ಕಿಂತ ಶೇ 3ರಷ್ಟು ಹೆಚ್ಚಾಗಿದೆ. ಆದರೆ ಇದು ಕನಿಷ್ಠ ಶೇ 60ರಷ್ಟು ಇರಬೇಕು ಎಂದರು.

ಬ್ಯಾಂಕ್‌ಗಳಲ್ಲಿ ವಹಿವಾಟು 55, 226.75 ಕೋಟಿ ಆಗಿದೆ. ಠೇವಣಿಯಲ್ಲಿ ಶೇ 1.24ರಷ್ಟು ಹೆಚ್ಚಳ ಗೋಚರಿಸಿದೆ. ಸೆ. 30ಕ್ಕೆ ಅಂತ್ಯವಾಗುವ ತ್ರೈಮಾಸಿಕದಲ್ಲಿ ಒಟ್ಟು 5,191.76 ಕೋಟಿ ಹಣ ವಿತರಣೆ ಯಾಗಿದೆ. ಎಂಎಸ್‌ಎಂಇ ಅಡಿಯಲ್ಲಿ ₹ 992.29 ಕೋಟಿ ಹಣ ವಿತರಣೆ ಆಗಿದೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶದಲ್ಲಿ ಹಣರಹಿತ ವಹಿವಾಟಿನ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು. ಇದಕ್ಕಾಗಿ ಒಂದೊಂದು ಬ್ಯಾಂಕ್‌ಗಳು ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ವಿಜಯ ಬ್ಯಾಂಕ್‌ ಈಗಾಗಲೇ  ಈಶ್ವರ ಮಂಗಲ, ಕಲ್ಲಡ್ಕ, ಆರಂತೋಡು ಸೇರಿದಂತೆ 8 ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಕಾರ್ಡ್‌ ಮೂಲಕ ಹಣ ಪಡೆಯುವ ಯಂತ್ರ ವಿತರಣೆ, ಅಲ್ಲಲ್ಲಿ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಬ್ಯಾಂಕ್‌ ಪ್ರತಿನಿಧಿ ತಿಳಿಸಿದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ರಾಘವ ಯಜಮಾನ್ಯ ಮಾತನಾಡಿ, ಬ್ಯಾಂಕ್‌ಗಳು ಕೆಲವು ಹಳ್ಳಿಗಳನ್ನು ದತ್ತು ಪಡೆದು ಸೌರ ಶಕ್ತಿಯ ಬಗ್ಗೆ ಮಾಹಿತಿ ನೀಡಬೇಕು. ಸ್ಟಾಂಡ್‌ ಅಪ್‌ ಇಂಡಿಯಾ ಯೋಜನೆಯಡಿ, 585 ಪ್ರಸ್ತಾವನೆಗ ಳನ್ನು ವಿವಿಧ ಬ್ಯಾಂಕ್‌ಗಳು ಸ್ವೀಕರಿಸಿವೆ. ಈ ಪೈಕಿ 42 ಪ್ರಸ್ತಾವನೆಗಳನ್ನು ವಿಲೇ ವಾರಿ ಮಾಡಲಾಗಿದ್ದು 3.85 ಕೋಟಿ ಹಣ ಬಿಡುಗಡೆಯಾಗಿದೆ. ಸಾಮಾಜಿಕ ಪ್ರಗತಿಯ ದೃಷ್ಟಿಯಿಂದ ಪ್ರತಿ ಬ್ಯಾಂಕ್‌ ಕನಿಷ್ಠ ಒಬ್ಬರು ಎಸ್‌ಸಿ, ಎಸ್‌್ಟಿ ಪಂಗಡದ ವ್ಯಕ್ತಿಗಳಿಗೆ ಮತ್ತು ಒಬ್ಬರು ಮಹಿಳೆಗೆ ಸಾಲ ಕೊಡಲೇಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.