ADVERTISEMENT

ಆಳ್ವಾಸ್‌ ವರ್ಣ ವಿರಾಸತ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:45 IST
Last Updated 12 ಜನವರಿ 2017, 9:45 IST
ಮೂಡುಬಿದಿರೆ: ‘ಚಿತ್ರಕಲೆಯು ಜೀವ ನದ ಅವಿಭಾಜ್ಯ ಅಂಗ. ಮಗುವಿನಿಂ ದಲೇ ಕಲೆ ಆರಂಭವಾಗುತ್ತದೆ. ಮಗು ರೇಖೆಯನ್ನು ಗೀಚುವ ಮೂಲಕ ಕಲಾ ಸಕ್ತಿಯನ್ನು ಬೆಳೆಸುತ್ತದೆ. ಶಿಕ್ಷಣ ಮತ್ತು ಚಿತ್ರಕಲೆಗೆ ಅವಿನಾಭಾವ ಸಂಬಂಧ ಇದೆ. ಪ್ರತಿಯೊಂದು ಕ್ಷೇತ್ರದಲ್ಲೂ ಚಿತ್ರಕಲೆ ಪರಿ ಣಾಮ ಬೀರುತ್ತದೆ’ ಎಂದು ಗುರುಕುಲ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಮ್ಯಾನೇ ಜಿಂಗ್ ಟ್ರಸ್ಟಿ ಅನುಪಮಾ ಹೆಗ್ಡೆ ಹೇಳಿದರು.
 
ರಾಷ್ಟ್ರ ಮಟ್ಟದ ಆಳ್ವಾಸ್ ವರ್ಣ ವಿರಾಸತ್‌ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ಸಂಸ್ಕೃತಿ ಮತ್ತು ಕಲೆ ಅಳಿದಿದೆ ಎನ್ನುವ ಮಾತು ಭಾಗಶಃ ತಪ್ಪು, ಆದರೆ ಆಳ್ವಾಸ್‌ನಲ್ಲಿ ಅದರ ವೈಭವ ಇದೆ. ಇಂತಹ ಶಿಬಿರಗಳು ಆನೇಕ ಕಲಾವಿದರಿಗೆ ಭವಿಷ್ಯ ನೀಡು ತ್ತದೆ’ ಎಂದು ಅಭಿಪ್ರಾಯಪಟ್ಟರು.
 
ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತ ಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ‘ಭಾರತೀಯ ಕಲೆ ಮತ್ತು  ಸಂಸ್ಕೃತಿ ಅತ್ಯಂತ ಪ್ರಾಚೀನವಾ ದುದು. ಪ್ರತಿಯೊಬ್ಬರಲ್ಲೂ ಆಲೋಚನಾ ಶಕ್ತಿ ಇದೆ. ಆಲೋಚನಾ ಶಕ್ತಿ ಕೌಶಲ ಶಕ್ತಿ ಯಾಗಿ ರೂಪುಗೊಂಡರೆ ಶಿಲ್ಪ ಅಥವಾ ವರ್ಣಶಕ್ತಿಯ ರೂಪದಲ್ಲಿ ವ್ಯಕ್ತವಾಗು ತ್ತದೆ. ಎಲ್ಲ ಕಲೆಯ ಬಗ್ಗೆ ಆಸಕ್ತಿ ವಹಿಸ ಬೇಕಾಗಿದೆ. ಅದು ಒಬ್ಬರಲ್ಲಿ ಬೇರೂರದೆ ಅದರ ಇಂಪು ಪ್ರತಿಯೊಬ್ಬರ ಮನಸ್ಸಿ ನಲ್ಲೂ ಪಸರಿಸಬೇಕಾಗಿದೆ’ ಎಂದರು. 
 
ವರ್ಣ ಚಿತ್ರಕಲಾಕಾರ ದೇವದಾಸ ಶೆಟ್ಟಿ ಅವರ ಕಲಾ ಜೀವನದ ಬಗ್ಗೆ ಬರೆದ ‘ಮಾಸ್ಟರ್ ಸ್ಟ್ರೋಕ್’ ಎನ್ನುವ ಪುಸ್ತಕ ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಬಿಡು ಗಡೆಗೊಳಿಸಿದರು. 20 ಕಲಾವಿದರನ್ನು ಸ್ವಾಗತಿಸಲಾಯಿತು. ಸಲಹಾ ಸಮಿತಿ ಸದ ಸ್ಯರಾದ ಕೋಟಿ ಪ್ರಸಾದ್‌ ಆಳ್ವ, ಗಣೇಶ್‌ ಸೋಮಯಾಜಿ, ಆಳ್ವಾಸ್ ಶಿಕ್ಷಣ ಪ್ರತಿ ಷ್ಠಾನ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ವಿದ್ಯಾರ್ಥಿನಿ ತೇಜಸ್ವಿನಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.