ADVERTISEMENT

ಈಡೇರಿದ ಬಹುದಿನದ ಬೇಡಿಕೆ: ಬೃಹತ್ ನೀರು ಸರಬರಾಜು ಯೋಜನೆಗೆ ಪ್ರಾಯೋಗಿಕ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:59 IST
Last Updated 25 ಏಪ್ರಿಲ್ 2017, 6:59 IST
ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಬೃಹತ್ ನೀರು ಸರಬರಾಜು ಯೋಜನೆಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು, ಕುಮಾರಧಾರ ತಟದಲ್ಲಿರುವ ಜಾಕ್‌ವೆಲ್ ಹಾಗೂ ಪಂಪ್‌ಹೌಸ್‌ನಲ್ಲಿ ಸ್ವಿಚ್‌ ಅನ್ನು ಒತ್ತಿ  ಚಾಲನೆ ನೀಡಿದರು.
ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಬೃಹತ್ ನೀರು ಸರಬರಾಜು ಯೋಜನೆಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು, ಕುಮಾರಧಾರ ತಟದಲ್ಲಿರುವ ಜಾಕ್‌ವೆಲ್ ಹಾಗೂ ಪಂಪ್‌ಹೌಸ್‌ನಲ್ಲಿ ಸ್ವಿಚ್‌ ಅನ್ನು ಒತ್ತಿ ಚಾಲನೆ ನೀಡಿದರು.   

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ₹180 ಕೋಟಿ ಮಾಸ್ಟರ್ ಪ್ಲಾನ್ ಯೋಜನೆಯ ಅತ್ಯವಶ್ಯಕ ಹಾಗೂ ಬೃಹತ್ ಯೋಜನೆಯಾದ ಶುದ್ಧ ಕುಡಿ ಯುವ ನೀರು ಯೋಜನೆಯ ಅಡಿ ಯಲ್ಲಿ ಅಂದಾಜು ₹7.6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೀರು ಸರಬರಾಜು ಯೋಜನೆಗೆ ಸೋಮವಾರ ಪ್ರಾಯೋಗಿಕ ಚಾಲನೆ ನೀಡಲಾಯಿತು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ನಿತ್ಯಾ ನಂದ ಮುಂಡೋಡಿ ಅವರು, ಕುಮಾರ ಧಾರ ತಟದಲ್ಲಿರುವ ಜಾಕ್‌ವೆಲ್ ಹಾಗೂ ಪಂಪ್‌ಹೌಸ್‌ನಲ್ಲಿ ಸ್ವಿಚ್‌ ಅನ್ನು ಒತ್ತಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ದೇಶದಲ್ಲೇ ಪುರಾಣ ಪ್ರಸಿದ್ಧಿ ಪಡೆದ ಶ್ರೀ ಕ್ಷೇತ್ರ ಭಕ್ತಾದಿಗಳ ಅನುಕೂಲ ಹಾಗೂ ಸೌಲಭ್ಯಕ್ಕೆ ರೂಪಿಸಲಾದ ಮಾಸ್ಟರ್ ಪ್ಲಾನ್‌ ಯೋಜನೆಯ ಬೃಹತ್ ನೀರು ಸರಬರಾಜು ಯೋಜನೆಗೆ ಇಂದು ಚಾಲನೆ ನೀಡಲಾಗಿದ್ದು, ಬಹುದಿನಗಳ ಬೇಡಿಕೆ ಈಡೇರಿದಂತಾಯಿತು. ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಸಾರ್ವ ಜನಿಕರಿಗೆ ಇದು ಹೆಚ್ಚು ಉಪಯೋಗ ವಾಗಲಿ’ ಎಂದು ಶುಭ ಹಾರೈಸಿದರು.

ADVERTISEMENT

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿನೇಶ್ ಬಿ.ಎನ್., ಜಿಲ್ಲಾ ಧಾರ್ಮಿಕ ಸದಸ್ಯೆ ವಿಮಲಾ ರಂಗಯ್ಯ, ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯ ಸಹಾಯಕ ಎಂಜಿನಿಯರ್ ಗಣೇಶ್ ನಾಯಕ್, ತಾಂತ್ರಿಕ ಸಹಾಯಕ ಶಂಶುದ್ದೀನ್, ದೇವಳದ ಎಂಜಿನಿಯರ್ ಉದಯಕುಮಾರ್, ದೇವಳದ ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಮೆಸ್ಕಾಂ ಶಾಖಾಧಿಕಾರಿ ಶರಣಗೌಡ, ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನದಾಸ ರೈ, ಭಾರತಿ, ಸುಬ್ರಹ್ಮಣ್ಯ ಐನೆಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರಕುಮಾರ್ ರುದ್ರಪಾದ, ಉದ್ಯಮಿಗಳಾದ ಎ. ಸುಬ್ರಹ್ಮಣ್ಯ ರಾವ್, ರವೀಂದ್ರ ನೂಚಿಲ, ಉದಯ ಕುಮಾರ್ ನೂಚಿಲ, ಗೋಪಾಲ ಎಣ್ಣೆಮಜಲು, ದೇವಳದ ಸಿಬ್ಬಂದಿ ಹಾಗೂ ಸ್ಥಳೀಯರು, ಗಣ್ಯರು  ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು.

48 ಲಕ್ಷ ಲೀಟರ್‌ ನೀರು ಶುದ್ಧೀಕರಣ
ಕುಮಾರಧಾರ ತಟದಲ್ಲಿ ನಿರ್ಮಿಸಲಾದ ಜಾಕ್‌ವೆಲ್ ಹಾಗೂ 75 ಎಚ್.ಪಿ. ಮೋಟಾರ್ ಇರುವ ಡೀಪ್‌ವೆಲ್ ಟರ್ಬೈನ್ ಪಂಪ್ ಹೌಸ್‌ನಿಂದ, 406 ವ್ಯಾಸದ ಎಂ.ಎಸ್. ಪೈಪ್ ಮೂಲಕ ವಿದ್ಯಾನಗರ ಗುಡ್ಡದಲ್ಲಿರುವ 48 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣದ ಘಟಕಕ್ಕೆ ನಿತ್ಯ ನೀರನ್ನು ಹರಿಸಲಾಗುತ್ತದೆ.

ನೀರು ಶುದ್ಧೀಕರಣ ಘಟಕದಲ್ಲಿ ಮೊದ ಲಿಗೆ ಏರೀಯೇಟರ್ ಮೂಲಕ ಪಂಪ್ ಆಗಿ, ಅಲ್ಲಿಂದ ಚಾನಲ್ ಮೂಲಕ ಸೆಟ್ಲಿಂಗ್ ಟ್ಯಾಂಕ್‌ಗೆ ಹರಿದು ಬರಲಿದೆ. ಅಲ್ಲಿ ನೀರು ಶುದ್ಧೀಕರಣಗೊಳ್ಳುತ್ತದೆ. ಶುದ್ಧೀಕರಿಸಿದ ನೀರನ್ನು ನಿವೇಶನದಲ್ಲಿರುವ ಸಂಪಿನಲ್ಲಿ ಸಂಗ್ರಹ ಮಾಡಲಾಗುತ್ತದೆ. ನಂತರ ಸಂಪಿನಿಂದ ಗುರುತ್ವಾಕರ್ಷಣ ಕೊಳವೆ ಮುಖಾಂತರ ಸುಬ್ರಹ್ಮಣ್ಯ ಪೇಟೆಯ ಅಂಗಡಿ ಗುಡ್ಡೆಯಲ್ಲಿರುವ 15 ಲಕ್ಷ ನೀರು ಸಾಮ ರ್ಥ್ಯದ ಮೇಲ್ಮಟ್ಟದ ಜಲ ಸಂಗ್ರಹ ಗಾರಕ್ಕೆ ಕಳುಹಿಸಿಕೊಡಲಾ ಗುತ್ತದೆ. ಅಲ್ಲಿಂದ ಶ್ರೀ ದೇವಳ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿತರಣೆಯಾಗುವುದು.  75 ಎಚ್.ಪಿ ಸಾಮಾರ್ಥ್ಯದ ಎರಡು ಮೋಟಾರ್‌ಗಳನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.