ADVERTISEMENT

‘ಏಕಮುಖ ರಸ್ತೆ ಬೇಡ, ನಿರ್ಣಯ ಅನುಷ್ಠಾನಕ್ಕೆ ಬದ್ಧ’

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 6:27 IST
Last Updated 7 ಏಪ್ರಿಲ್ 2017, 6:27 IST

ಉಪ್ಪಿನಂಗಡಿ: ‘ಇಲ್ಲಿನ ಪೇಟೆಯ ಏಕೈಕ ಬಜಾರ್ ರಸ್ತೆಯಾಗಿರುವ ಬ್ಯಾಂಕ್‌ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡುವುದು ಸರಿ ಅಲ್ಲ, ಯಾವುದೇ ಕಾರಣಕ್ಕೂ ಇದನ್ನು ಏಕಮುಖ ರಸ್ತೆ ಮಾಡಬಾರದು ಮತ್ತು ಈ ಹಿಂದಿನ ನಿರ್ಣಯಕ್ಕೆ ನಾವು ಬದ್ಧ’ ಎಂಬ ಸಮ್ಮತಿಯಂತೆ ಈ ಹಿಂದೆ ಮಾಡಲಾದ ಪಟ್ಟಿಯಂತೆ ಸಂಚಾರ ವ್ಯವಸ್ಥೆ ಪಾಲನೆ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಅಧ್ಯಕ್ಷತೆ ಯಲ್ಲಿ ಗುರುವಾರ ಉಪ್ಪಿನಂಗಡಿ ವರ್ತ ಕರು, ಸಂಘ ಸಂಸ್ಥೆಯ ಪದಾಧಿಕಾರಿಗ ಳನ್ನು ಒಳಗೊಂಡಂತೆ ಕರೆಯಲಾದ ಸಭೆ ಯಲ್ಲಿ ಈ ನಿರ್ಣಯ ಅಂಗೀಕರಿಸ ಲಾಯಿತು.

ಸಭೆಯಲ್ಲಿ ವರ್ತಕರು ವಿಷಯ ಪ್ರಸ್ತಾಪಿಸಿ ಉಪ್ಪಿನಂಗಡಿ ಪೇಟೆಗೆ ಬರು ವುದಕ್ಕೆ ಬ್ಯಾಂಕ್‌ ರಸ್ತೆ ಒಂದೇ ಇರು ವಂತಹದ್ದು, ಇಲ್ಲಿಗೆ ಬೇರೆ ಪರ್ಯಾಯ ರಸ್ತೆ ಇಲ್ಲದ ಕಾರಣ ಈ ರಸ್ತೆಯನ್ನು ಏಕಮುಖ ರಸ್ತೆ ಮಾಡಬಾರದು ಎಂಬ ಒಕ್ಕೊರಲ ಆಗ್ರಹ ವ್ಯಕ್ತವಾಯಿತು. ಅದ ರಂತೆ ಸಭೆ ತೀರ್ಮಾನಿಸಲಾಗಿ ನಿರ್ಣಯ ಅಂಗೀಕರಿಸಲಾಯಿತು.

ADVERTISEMENT

ಹಿಂದಿನ ನಿರ್ಣಯ ಅನುಷ್ಠಾನ: ಬ್ಯಾಂಕ್ ರಸ್ತೆ ಮತ್ತು ಪೇಟೆಯಲ್ಲಿ ವಾಹನ ನಿಲುಗಡೆ ಬಗ್ಗೆ ಈ ಹಿಂದೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಅದನ್ನು ಪಾಲನೆ ಮಾಡಿದರೆ ಬಹುತೇಕ ಸಮಸ್ಯೆಗಳು ನಿವಾರಣೆ ಆಗಬಹುದು ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಈ ಹಿಂದಿನ ನಿರ್ಣಯ ಮತ್ತು ಅದರಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಮತ್ತು ಅದಕ್ಕೆ ವ್ಯತಿರಿಕ್ತವಾಗಿ ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು.

10 ದಿನಗಳಲ್ಲಿ ಸಮಸ್ಯೆ ಪರಿಹಾರ: ಉಪ್ಪಿನಂಗಡಿ ಸಬ್ ಇನ್‌ಸ್ಪೆಕ್ಟರ್‌ ನಂದ ಕುಮಾರ್ ಮಾತನಾಡಿ, ‘ವರ್ತಕರು ಇಲಾಖೆಯೊಂದಿಗೆ ಸಹಕಾರ ನೀಡಿದರೆ ಇಲ್ಲಿನ ಸಮಸ್ಯೆಗೆ 10 ದಿನಗಳ ಒಳಗಾಗಿ ಪರಿಹಾರ ಕಂಡುಕೊಳ್ಳಲಾಗುವುದು. ಯಾರೇ ನೊಂದವರು, ಅಸಹಾಯಕರು ಯಾವುದೇ ಸಮಸ್ಯೆಗಳು ಇದ್ದಲ್ಲಿ ನೇರ ವಾಗಿ ಠಾಣೆಗೆ ಬಂದು ಪರಿಹಾರ ಕಂಡುಕೊಳ್ಳಬೇಕು’ ಎಂದರು.

ಬಂಟ್ವಾಳ ಸಂಚಾರಿ ಠಾಣೆ ಎಸ್.ಐ. ಚಂದ್ರಶೇಖರಯ್ಯ ಮಾತನಾಡಿ, ‘ಎಸ್. ಪಿ.ಯವರ ಸೂಚನೆ ಮೇರೆಗೆ 2 ಬಾರಿ ಇಲ್ಲಿನ ಬ್ಯಾಂಕ್‌  ರಸ್ತೆ ಸಮಸ್ಯೆ, ಇಲ್ಲಿನ ಸಂ ಚಾರ ದಟ್ಟಣೆ ಬಗ್ಗೆ ಪರಿಶೀಲನೆ ಮಾಡಿ ದ್ದೇನೆ. ಹಳೆ ಬಸ್‌ಸ್ಟಾಂಡ್‌ನಿಂದ ಗಾಂಧಿ ಪಾರ್ಕ್‌ ತನಕ ಒನ್‌ ವೇ ವೇ ಮಾಡು ವುದು ಸೂಕ್ತ’ ಎಂದರು.

ವರ್ತಕ ಸಂಘದ ಮಾಜಿ ಅಧ್ಯಕ್ಷ ಯು.ಜಿ. ರಾಧಾ, ಸದಸ್ಯರಾದ ಜಯಂತ ಪೊರೋಳಿ, ರೂಪೇಶ್ ರೈ, ಕೈಲಾರ್ ರಾಜ್‌ಗೋಪಾಲ ಭಟ್, ಕೆ.ಡಿ.ಪಿ. ಸದಸ್ಯ ಅಶ್ರಫ್ ಬಸ್ತಿಕ್ಕಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಅತ್ರಮಜಲು, ಯು.ಟಿ. ತೌಶೀಫ್, ಸುನಿಲ್ ದಡ್ಡು, ಸಿ.ಎ. ಬ್ಯಾಂಕ್‌ ಅಧ್ಯಕ್ಷ ಯಶವಂತ ಗೌಡ ಮಾತ ನಾಡಿ ಸಲಹೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣ, ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯ ಜಿ. ಕೃಷ್ಣ ರಾವ್ ಅರ್ತಿಲ, ಸಾರಿಗೆ ಇಲಾಖೆಯ ಜನಾರ್ದನ ಗೌಡ, ಕೆಎಸ್‍ಆರ್‍ಟಿಸಿಯ ಕರುಣಾಕರ ಇದ್ದರು.

ಪಿಡಿಒ ಅಬ್ದುಲ್ಲ ಅಸಫ್ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.