ADVERTISEMENT

ಏ.24ರಿಂದ ಪಾಲಿಕೆ ಎದುರು ಚಳವಳಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:52 IST
Last Updated 20 ಏಪ್ರಿಲ್ 2017, 7:52 IST

ಮಂಗಳೂರು: ನಿವೇಶನ ರಹಿತರಿಗಾಗಿ ಮನೆ ನಿರ್ಮಿಸುವ ಕಾಮಗಾರಿ ಪ್ರಾರಂಭದ ದಿನಾಂಕ ಘೋಷಣೆ, ನಿವೇಶನ ಹಂಚಿಕೆಗೆ ಆಯ್ಕೆ ಮಾಡಿರುವ ಪಟ್ಟಿಯಲ್ಲಿರುವ ಅನರ್ಹರ ಹೆಸರನ್ನು ತೆಗೆದುಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಏಪ್ರಿಲ್‌ 24ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮಂಗಳೂರು ನಗರದ ನಿವೇಶನರಹಿತರ ಹೋರಾಟ ಸಮಿತಿ ನಿರ್ಧರಿಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಸಂತೋಷ್‌ ಶಕ್ತಿನಗರ, ‘ಶಕ್ತಿ ನಗರ, ಇಡ್ಯಾ ಮತ್ತು ಸುರತ್ಕಲ್‌ನಲ್ಲಿ ನಿವೇಶನ, ಮನೆಗಳ ಹಂಚಿಕೆಗಾಗಿ ಸಿದ್ಧಪ ಡಿಸಿರುವ ಫಲಾನುಭವಿಗಳ ಆಯ್ಕೆಪಟ್ಟಿ ಯಲ್ಲಿ ದೋಷವಿದೆ. ಸಮಿತಿಗೆ ನೀಡಿದ ಭರವಸೆಯನ್ನು ಬದಿಗೊತ್ತಿ, ಅನರ್ಹ ವ್ಯಕ್ತಿಗಳನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ತಕ್ಷಣವೇ ಆ ಪಟ್ಟಿಯನ್ನು ರದ್ದು ಮಾಡುವಂತೆ ಒತ್ತಾಯಿಸಿ ಹೋರಾಟ ಆರಂಭಿಸಲಾ ಗುವುದು’ ಎಂದರು.

ನಿವೇಶನ ಹಂಚಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಅನುಸರಿಸಿದ ಕ್ರಮಗ ಳಲ್ಲೇ ಲೋಪವಿದೆ. ಮಹಾನಗರ ಪಾಲಿಕೆ ಸಿಬ್ಬಂದಿ, ಹೆಚ್ಚು ಆದಾಯ ಇರುವ ವ್ಯಕ್ತಿಗಳನ್ನೂ ಫಲಾನುಭವಿಗ ಳನ್ನಾಗಿ ಆಯ್ಕೆ ಮಾಡಲಾಗಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗಿದೆ. 2,000 ನಿವೇಶನಗಳ ಹಂಚಿಕೆಗಾಗಿ ಸಿದ್ಧಪ ಡಿಸಿರುವ ಆಯ್ಕೆಪಟ್ಟಿಯಲ್ಲಿ 300ಕ್ಕೂ ಹೆಚ್ಚು ಅನರ್ಹ ವ್ಯಕ್ತಿಗಳನ್ನು ಗುರುತಿಸ ಲಾಗಿದೆ. ಇದಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್‌.ಲೋಬೊ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ.ಎ. ಮೊಯಿ ದ್ದೀನ್‌ ಬಾವಾ ನೇತೃತ್ವದ ಸಮಿತಿ ಗಳೇ ಕಾರಣ ಎಂದು ಆರೋಪಿಸಿದರು.

ADVERTISEMENT

ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನೀಲ್‌ ಕುಮಾರ್ ಬಜಾಲ್, ಜಿಲ್ಲಾ ಸಮಿತಿ ಸದಸ್ಯ ಯೋಗೀಶ್‌ ಜೆಪ್ಪಿನಮೊಗರು, ಪ್ರೇಮನಾಥ್‌ ಜೆಲ್ಲಿಗುಡ್ಡೆ, ಖಜಾಂಚಿ ಪ್ರಭಾವತಿ ಬೋಳಾರ, ಕಾರ್ಯದರ್ಶಿ ನೂತನ್‌ ಕೊಂಚಾಡಿ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.