ADVERTISEMENT

ಕಟೀಲು ಮೇಳದ ಆಟಕ್ಕೆ ತೆರೆ

ಪತ್ತನಾಜೆಯ ಆಟದೊಂದಿಗೆ ಮೇಳ ಉಲಾಯಿ

​ಪ್ರಜಾವಾಣಿ ವಾರ್ತೆ
Published 26 ಮೇ 2018, 11:06 IST
Last Updated 26 ಮೇ 2018, 11:06 IST
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳ ಈ ವರ್ಷದ ಕೊನೆಯ ಪ್ರದರ್ಶನದ ಸಂದರಭದಲ್ಲಿ ದೇವರ ಮೂರ್ತಿಗಳನ್ನು ಸರಸ್ವತಿ ಸದನದಲ್ಲಿ ಶುಕ್ರವಾರ ಅಲಂಕಾರದೊಂದಿಗೆ ಪೂಜಿಸಲಾಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳ ಈ ವರ್ಷದ ಕೊನೆಯ ಪ್ರದರ್ಶನದ ಸಂದರಭದಲ್ಲಿ ದೇವರ ಮೂರ್ತಿಗಳನ್ನು ಸರಸ್ವತಿ ಸದನದಲ್ಲಿ ಶುಕ್ರವಾರ ಅಲಂಕಾರದೊಂದಿಗೆ ಪೂಜಿಸಲಾಯಿತು.   

ಮೂಲ್ಕಿ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳು ಶುಕ್ರವಾರ ತನ್ನ ಕೊನೆಯ ಪ್ರದರ್ಶನವನ್ನು ಕ್ಷೇತ್ರದಲ್ಲಿನ ರಂಗಸ್ಥಳದಲ್ಲಿ ನೀಡಿ ಪತ್ತನಾಜೆಯ ತೆರೆಯನ್ನು ಎಳೆದಿದೆ.

ಆರೂ ಮೇಳದ ದೇವರ ಪೂಜೆಯಲ್ಲಿ ಮೇಳದ ದೇವರಿಗೆ ಹೆಚ್ಚಿನ ಮಹತ್ವವಿದೆ. ಆರೂ ಮೇಳಗಳಲ್ಲೂ ದೇವರು (ರಾಮಲಕ್ಷ್ಮಣ ಕಿರೀಟ) ಬಂಗಾರದ್ದೇ ಆಗಿರುವುದು ವಿಶೇಷವಾಗಿದೆ. ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೇಳದ ಯಜಮಾನರು, ದೇವಳದ ಪ್ರಮುಖರು, ಅರ್ಚಕ ವೃಂದ ಹಾಗೂ ಕಲಾವಿದರು ಭಾಗವಹಿಸಿದ್ದಾರೆ.

ದೇವಸ್ಥಾನದಲ್ಲಿ ಇಂದು ಪತ್ತನಾಜೆಯ ಆಟದೊಂದಿಗೆ (ಮೇಳ ಉಲಾಯಿ)ಮೇಳ ಒಳಗಾಗಲಿದೆ ಎಂಬ ಮಾತಿನಂತೆ ಅತ್ಯಂತ ಹೆಚ್ಚು ಯಕ್ಷಗಾನ ಮೇಳಗಳನ್ನು ಹೊಂದಿರುವ ದೇವಸ್ಥಾನ ಎಂದು ಕಟೀಲು ಗುರುತಿಸಿಕೊಂಡಿರುವುದರಿಂದ ಇಲ್ಲಿನ ಕೊನೆಯ ಪ್ರದರ್ಶನಕ್ಕೂ ಜಾತ್ರೆಯಂತೆ ಭಕ್ತರು ಸೇರುತ್ತಾರೆ.

ADVERTISEMENT

‌ರಥ ಬೀದಿಯಲ್ಲಿ ಆರೂ ಮೇಳಗಳ ಕಲಾವಿದರಿಂದ ಪೀಠಿಕೆಯ ಯಕ್ಷಗಾನ ಆರಂಭಗೊಂಡಿತು. ಪ್ರಸಂಗ ಪೀಠಿಕೆಯಿಂದ ನಂತರ ಒಂದೇ ರಂಗಸ್ಥಳದಲ್ಲಿ ಕಲಾವಿದರು ಬಣ್ಣ ಹಚ್ಚಿ ಸಂಪ್ರದಾಯವನ್ನು ಮುಂದು ವರಿಸಿದ್ದಾರೆ. 2016ರ ನವೆಂಬರ್ 13ರಿಂದ ಆರಂಭಗೊಂಡ ಮೇಳ ಒಟ್ಟು 1146 ಬಯಲಾಟ ನಡೆದಿದೆ.

ಪ್ರತೀ ಮೇಳವು 191 ಪ್ರದರ್ಶನ ನೀಡಿದೆ. ಇದರಲ್ಲಿ ಒಂದು ಮತ್ತು ಐದನೇ ಮೇಳವು 101, ದ್ವಿತೀಯ ಮತ್ತು ತೃತೀಯ ಮೇಳವು 99, ನಾಲ್ಕನೇ ಮೇಳವು 102, ಆರನೇ ಮೇಳವು 100 ಪ್ರದರ್ಶನದಲ್ಲಿ ಒಟ್ಟು 602 ದೇವೀ ಮಾಹಾಮತ್ಮ್ಯೆ ಪ್ರಸಂಗವೇ ಆಗಿರುವುದು ಈ ಬಾರಿಯ ವಿಶೇಷವಾಗಿದೆ. ಲಲಿತೋಪಾಖ್ಯಾನ ಪ್ರಸಂಗವು ಸಹ ದೇವಿಮಹಾತ್ಮೆಯಂತೆಯೇ ಎರಡನೇ ಸ್ಥಾನದಲ್ಲಿದೆ.

2ನೇ ಮೇಳವು ಯಶೋಮತಿ ಏಕಾವಳೀ, ಶಿಖಂಡಿ ಪರಿಣಯ, ಮದಲಸಾ ಪರಿಣಯದಂತಹ ಪ್ರಸಂಗಗಳನ್ನು ಪ್ರದರ್ಶಿಸಿವೆ. ಕಟೀಲು ಕ್ಷೇತ್ರದಲ್ಲಿ ನೂರಕ್ಕಿಂತಲೂ ಹೆಚ್ಚು ಬಯಲಾಟಗಳು ಇರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.