ADVERTISEMENT

‘ಕುಡಿಯುವ ನೀರಿನ ತೊಂದರೆ ಉದ್ಭವಿಸದು’

ಮಾಧ್ಯಮ ಸಂವಾದದಲ್ಲಿ ಮೇಯರ್ ಕವಿತಾ ಸನಿಲ್ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:50 IST
Last Updated 22 ಮಾರ್ಚ್ 2017, 6:50 IST

ಮಂಗಳೂರು: ನಗರದಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸದಂತೆ ಮಹಾನಗರ ಪಾಲಿಕೆ ಅಗತ್ಯ ಕ್ರಮ ಕೈಗೊಂಡಿದ್ದು, ಈ ಬಾರಿಯ ಬೇಸಿಗೆ ಯಲ್ಲಿ ಜನರಿಗೆ ತೊಂದರೆ ಆಗದು ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಮಂಗಳ ವಾರ ಮಾಧ್ಯಮ ಸಂವಾದದಲ್ಲಿ ಮಾತ ನಾಡಿದ ಅವರು, ತುಂಬೆ ಹೊಸ ಅಣೆ ಕಟ್ಟೆಯಲ್ಲಿ ಈ ವರ್ಷವೇ 5 ಮೀಟರ್‌ ನೀರು ಸಂಗ್ರಹಿಸಲಾಗುತ್ತಿದೆ. ಎಎಂಆರ್‌ ಜಲಾಶಯದಲ್ಲೂ ನೀರು ಲಭ್ಯವಿದೆ. ಇದನ್ನು ಬಳಸಿಕೊಂಡು, ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಸಲಾ ಗುವುದು ಎಂದರು.

ಈಗಾಗಲೇ 36 ಗಂಟೆಗೊಮ್ಮೆ ನೀರು ಪೂರೈಸಲು ನಿರ್ಧರಿಸಲಾಗಿದೆ. ಬಂಟ್ವಾಳ, ಸೇರಿದಂತೆ ಜಿಲ್ಲೆಯಲ್ಲಿ ಸ್ವಲ್ಪ ಮಳೆಯಾಗುತ್ತಿದೆ. ದೇವರ ಕೃಪೆಯಿಂದ ಉತ್ತಮ ಮಳೆ ಬಂದಲ್ಲಿ, ನೀರಿನ ಸಮಸ್ಯೆ ಸಂಪೂರ್ಣ ನಿವಾರಣೆ ಆಗಲಿದೆ. ಸದ್ಯಕ್ಕೆ ಲಭ್ಯವಿರುವ ನೀರು, ಮೇ 25ರವರೆಗೆ ಸಾಕಾಗಲಿದೆ ಎಂದು ತಿಳಿಸಿದರು.

ತುಂಬೆ ಹೊಸ ಅಣೆಕಟ್ಟೆಯಲ್ಲಿ 7 ಮೀಟರ್‌ ನೀರು ಸಂಗ್ರಹಿಸಲು ಅಗತ್ಯವಿ ರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಮಾ ನಾಥ ರೈ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡ ಲಾಗುವುದು.

ಸಂತ್ರಸ್ತ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕೋ ಇಲ್ಲವೇ ಬಾಡಿಗೆ ರೂಪದಲ್ಲಿ ಪರಿಹಾರ ನೀಡ ಬೇಕೋ ಎನ್ನುವ ಕುರಿತು ಚರ್ಚಿಸಲಾ ಗುತ್ತಿದೆ ಎಂದು ವಿವರಿಸಿದರು.

ಇ–ಶೌಚಾಲಯ: ನಗರದ ಮೂರು ಸ್ಥಳಗಳಲ್ಲಿ 5 ಇ–ಶೌಚಾಲಯಗಳನ್ನು 15 ದಿನದಲ್ಲಿ ಸಾರ್ವಜನಿಕರ ಸೇವೆಗೆ ಒದ ಗಿಸಲಾಗುವುದು. ಕದ್ರಿ ಪಾರ್ಕ್‌, ಲಾಲ್‌ ಬಾಗ್‌ ಬಳಿ ತಲಾ ಎರಡು ಹಾಗೂ ಹಂಪ ನಕಟ್ಟೆ ಸಿಗ್ನಲ್‌ ಬಳಿ ಒಂದು ಇ–ಶೌಚಾಲ ಯಗಳನ್ನು ಆರಂಭಿಸಲಾಗುವುದು.

ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆಯನ್ನು ಆನ್‌ ಲೈನ್‌ ಮೂಲಕ ಪಾವತಿಸುವ ವ್ಯವಸ್ಥೆ ಯನ್ನು ನಾಲ್ಕು ತಿಂಗಳಲ್ಲಿ ಜಾರಿಗೆ ತರಲಾ ಗುವುದು ಎಂದು ಹೇಳಿದರು. ಪಾಲಿಕೆ ಸಚೇತಕ ಎಂ. ಶಶಿಧರ್‌ ಹೆಗ್ಡೆ, ಪತ್ರಕರ್ತರ ಸಂಘದ ಅಧ್ಯಕ್ಷ ಜಗ ನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯ ದರ್ಶಿ ಶ್ರೀನಿವಾಸ್‌ ಇಂದಾಜೆ ಇದ್ದರು.

ADVERTISEMENT

ಮೆಸ್ಕಾಂಗೆ ನೋಟಿಸ್
ನಗರದ ಎಲ್ಲೆಡೆ ಕೇಬಲ್ ಅಳವಡಿಕೆಗಾಗಿ ರಸ್ತೆ, ಒಳಚರಂಡಿ, ಫುಟ್ ಪಾತನ್ನು ಅವ್ಯಾಹತವಾಗಿ ಅಗೆದು ಹಾಕುತ್ತಿದ್ದು, ಈ ಬಗ್ಗೆ ಮೆಸ್ಕಾಂಗೆ ನೋಟಿಸ್‌ ನೀಡಲಾಗಿದೆ ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

ರಸ್ತೆ ಅಗೆಯುವ ಮೊದಲು ಪಾಲಿಕೆಯಿಂದ ಅನುಮತಿ ಪಡೆಯಬೇಕು. ಆದರೆ ಅನುಮತಿ ಪಡೆಯದೇ ರಸ್ತೆ ಅಗೆತ ಮಾಡಲಾಗುತ್ತಿದೆ. ಈ ಅನುಮತಿ ಪಡೆಯುವ ಶುಲ್ಕವಾಗಿ ಮೆಸ್ಕಾಂನಿಂದ ಪಾಲಿಕೆಗೆ ₹59 ಲಕ್ಷ ಬಾಕಿ ಉಳಿದಿದೆ. ಈ ಕುರಿತು ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.