ADVERTISEMENT

‘ಧರ್ಮ, ಸಂಸ್ಕೃತಿ, ಸದೃಢ ಸಮಾಜದ ಬೇರು’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:53 IST
Last Updated 23 ಏಪ್ರಿಲ್ 2017, 9:53 IST

ಉಪ್ಪಿನಂಗಡಿ: ‘ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ಬಿಟ್ಟು ದೇಶ ಉಳಿಯ ಲಾರದು. ಇವುಗಳೇ ಸುದೃಢ ಸಮಾಜದ ಮೂಲ ಬೇರುಗಳು. ಇಂತಹ ಬೇರಿಗೆ ಶಕ್ತಿ ನೀಡುವ ಕಾರ್ಯ ಶಿಶು ಮಂದಿರ ದಂತಹ ಸಂಸ್ಕಾರ ಕೇಂದ್ರಗಳಿಂದ ನಡೆಯಲಿದೆ’ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಶನಿವಾರ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ನಂದಗೋಕುಲ ಶಿಶು ಮಂದಿರ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣ ನೀಡುವ ಮೂಲಕ ಸುಭದ್ರ ಭಾರತದ ಸುದೃಢ ಪ್ರಜೆಗಳನ್ನಾಗಿಸುವ ಕಾರ್ಯ ನಡೆಯಬೇಕು, ಈ ನಿಟ್ಟಿನಲ್ಲಿ ನಂದಗೋಕುಲ ಶಿಶುಮಂದಿರ ಸ್ಥಾಪನೆ ಒಂದು ಮಹತ್ವದ ಹೆಜ್ಜೆ’ ಎಂದರು.ನಂದಗೋಕುಲ ಶಿಶು ಮಂದಿರ ಸಮಿತಿ ಅಧ್ಯಕ್ಷ ಎಂ. ಜಗದೀಶ್ ರಾವ್ ಮಣಿಕ್ಕಳ ಅಧ್ಯಕ್ಷತೆ ವಹಿಸಿದ್ದರು. ಕಾಳಿಕಾಂಬಾ ಭಜನಾ ಮಂಡಳಿ ಮಾಜಿ ಅಧ್ಯಕ್ಷ ಹರೀಶ್ ನಾಯಕ್ ಮಾತನಾಡಿ, ‘ಸಮಾಜಕ್ಕೆ ಶಕ್ತಿ ನೀಡುವ ಕಾರ್ಯವಾಗಿ ಶಿಶು ಮಂದಿರಗಳು ಪರಿಣಾಮ ಬೀರುತ್ತಿವೆ’ ಎಂದರು.

ಈ ಸಂದರ್ಭದಲ್ಲಿ ಶಿಶು ಮಂದಿರಕ್ಕೆ ಸ್ಥಳದಾನ ನೀಡಿದ ಸತೀಶ್ ರಾವ್ ಹಾಗೂ ಉಷಾ ಸತೀಶ್ ರಾವ್ ದಂಪತಿಯನ್ನು ಗೌರವಿಸಲಾ ಯಿತು. ಶಿಶು ಮಂದಿರ ಸಮಿತಿ ಗೌರವಾಧ್ಯಕ್ಷ ಕೈಲಾರ್ ರಾಜಗೋಪಾಲ ಭಟ್ ಉಪಸ್ಥಿತರಿದ್ದರು.ಶಿಶು ಮಂದಿರದ ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮ ಸ್ವಾಗತಿಸಿ, ಸುನಿಲ್ ದಡ್ಡು ವಂದಿಸಿದರು. ಸುರೇಶ್ ಗೌಂಡತ್ತಿಗೆ, ವಿಮಲ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.