ADVERTISEMENT

ನೀರಿನ ಕೃತಕ ಅಭಾವ ಸೃಷ್ಟಿ

ಡಿವೈಎಫ್‌ಐ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆರೋಪ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:56 IST
Last Updated 23 ಮಾರ್ಚ್ 2017, 5:56 IST

ಮಂಗಳೂರು: ತುಂಬೆ ಅಣೆಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿ ದ್ದರೂ, ಮಂಗಳೂರು ಮಹಾನಗರ ಪಾಲಿಕೆ ಆಡಳಿತವು ನಗರದಲ್ಲಿ ಕುಡಿ ಯುವ ನೀರಿನ ಕೃತಕ ಅಭಾವವನ್ನು ಸೃಷ್ಟಿಸಿ ಜನರಲ್ಲಿ ಭಯ ಹುಟ್ಟಿಸುತ್ತಿದೆ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

‘ತುಂಬೆಯ ಹಳೆ ಅಣೆಕಟ್ಟೆಯಲ್ಲಿ ಸಂಪೂರ್ಣ ನೀರು ತುಂಬಿದ್ದು, ಹೊಸ ಅಣೆಕಟ್ಟೆಗೆ ಹರಿಯುತ್ತಿದೆ. ಹೊಸ ಅಣೆ ಕಟ್ಟೆಯಲ್ಲಿ ಐದು ಮೀಟರ್‌ ಎತ್ತರದಷ್ಟು ನೀರಿದೆ. ಹಳೆಯ ಅಣೆಕಟ್ಟೆಯಲ್ಲಿ ಎರ ಡೂವರೆ ಮೀಟರ್‌ ನೀರು ಇದ್ದ ದಿನಗಳಲ್ಲಿ ನಗರಕ್ಕೆ ಜೂನ್‌ವರೆಗೂ ಸುಸೂ ತ್ರವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು.

ಇನ್ನೂ 80 ದಿನಗ ಳಿಗೆ ಸಾಕಾಗುವಷ್ಟು ನೀರು ಅಣೆಕಟ್ಟೆ ಯಲ್ಲಿ ಲಭ್ಯವಿದೆ. ಆದರೆ, ಒಳಹರಿವು ಕಡಿತಗೊಂಡಿದೆ ಎಂಬ ನೆಪವೊಡ್ಡಿ 36 ಗಂಟೆಗೊಮ್ಮೆ ನೀರು ಪೂರೈಸುವ ನಿರ್ಧಾರ ಕೈಗೊಳ್ಳುವ ಮೂಲಕ ಪಾಲಿ ಕೆಯೇ ನೀರಿನ ಅಭಾವ ಸೃಷ್ಟಿಸಿದೆ’ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

36 ಗಂಟೆಗಳಿಗೊಮ್ಮೆ ನೀರು ಪೂರೈ ಸುವುದಾಗಿ ಪ್ರಕಟಣೆ ಹೊರಡಿಸಿದ್ದರೂ, ವಾಸ್ತವವಾಗಿ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನಗ ರದ ಜನರಿಗೆ ಕುಡಿಯುವ ನೀರಿನ ಪೂರೈಕೆಗೆ ನಿರ್ಬಂಧ ವಿಧಿಸಿರುವ ಮಹಾನಗರ ಪಾಲಿಕೆ, ಎಂಆರ್‌ಪಿಎಲ್‌, ಎಂಎ ಸ್‌ಇಜೆಡ್‌ನಂತಹ ಬೃಹತ್‌ ಕೈಗಾರಿಕೆಗಳು ನೇತ್ರಾವತಿ ನದಿಯ ನೀರನ್ನು ಬಳಕೆ ಮಾಡುವುದರ ಮೇಲೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. 36 ಗಂಟೆಗೊಮ್ಮೆ ನೀರು ಪೂರೈಸುವ ನಿರ್ಧಾ ರದ ಹಿಂದೆ ಬೃಹತ್‌ ಕೈಗಾರಿಕೆಗಳ ಹಿತಾ ಸಕ್ತಿ ಕಾಪಾಡುವ ಉದ್ದೇಶ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕುಡಿಯುವ ಉದ್ದೇಶಕ್ಕಾಗಿ ಸಂಗ್ರಹಿ ಸಿದ ನೀರನ್ನು ಕೈಗಾರಿಕೆಗಳ ಬಳಕೆಗೆ ಒದಗಿಸುವ ಸಂಚು ಇರುವಂತೆ ಕಾಣು ತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ತಕ್ಷ ಣವೇ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ಕುಡಿಯುವ ನೀರು ಪೂರೈ ಕೆಗೆ ಪಾಲಿಕೆ ಅಡಳಿತವು ವಿಧಿಸಿರುವ ನಿರ್ಬಂಧವನ್ನು ರದ್ದು ಮಾಡಬೇಕು.

ಈ ಮೊದಲಿನಂತೆ ನಿತ್ಯವೂ ನೀರು ಪೂರೈಕೆ ಮಾಡುವ ನಿರ್ಧಾರ ಕೈಗೊಳ್ಳಬೇಕು. ತಪ್ಪಿದರೆ ಡಿವೈಎಫ್‌ಐ ನೇತೃತ್ವದಲ್ಲಿ ಪಾಲಿಕೆ ಮತ್ತು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT