ADVERTISEMENT

‘ಪಂಚಾಯಿತಿ ವ್ಯಾಪ್ತಿಗೆ 5 ಕಿಂಡಿ ಅಣೆಕಟ್ಟು’

ಜಿಲ್ಲೆಯ ನೀರಿನ ಸಮಸ್ಯೆ ನಿವಾರಣೆಗೆ ವಿನೂತನ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:37 IST
Last Updated 11 ಮಾರ್ಚ್ 2017, 6:37 IST
ಸುಬ್ರಹ್ಮಣ್ಯ: ‘ಜಿಲ್ಲೆಯ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ  ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 5 ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆ ಇದೆ. ಇದರಿಂದಾಗಿ ಅಂತರ್ಜಲ ವೃದ್ಧಿಯಾಗ ಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
 
ಪಂಜ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ನಡೆಸಲಾದ ಅಭಿವೃದ್ಧಿ ಕಾರ್ಯಕ್ರಮದ ಸಮಾಲೋಚನಾ ಸಭೆ ಯಲ್ಲಿ ಅವರು ಮಾತನಾಡಿದರು.
 
‘ಜಿಲ್ಲೆಯ ಭೌಗೋಳಿಕತೆಗೆ ಅನುಗು ಣವಾಗಿ ಮಳೆಗಾಲದ ನಂತರವೂ ಮಾರ್ಚ್, ಏಪ್ರಿಲ್‌ನಲ್ಲಿ ತೋಡುಗಳಲ್ಲಿ ನೀರು ಹರಿಯುತ್ತಿರುತ್ತದೆ. ಮಳೆಗಾಲದ ನೀರು ಸಂಪೂರ್ಣ ಸಮುದ್ರ ಪಾಲಾಗು ತ್ತದೆ. ಹಾಗಾಗಿ ನೀರು ಭೂಮಿಯಲ್ಲಿ ಇಂ ಗುತ್ತಿಲ್ಲ. ನೀರನ್ನು ಇಂಗಿಸುವ ಸಲುವಾಗಿ ಕಿಂಡಿ ಅಣೆಕಟ್ಟು ಯೋಜನೆಯನ್ನು ವಿನೂತನವಾಗಿ ಆರಂಭಿಸಲಾಗಿದೆ’ ಎಂದರು.
 
‘ಮಳೆ ನೀರನ್ನು ಭೂಮಿಯಲ್ಲಿ ಇಂಗಿ ಸುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 5 ಕಿಂಡಿ ಅಣೆಕಟ್ಟು ಮಾಡುವಂತೆ ಆದೇಶಿಸಲಾಗಿದೆ. ಹಾಗಾಗಿ ಒಂದು ವರ್ಷದ ಅವಧಿಯಲ್ಲಿ ಒಂದು ಸಾವಿರ ಕಿಂಡಿ ಅಣೆ ಕಟ್ಟುಗಳನ್ನು ನಿರ್ಮಾಣ ಮಾಡುವ ಗುರಿ ಇದೆ. ಕಿಂಡಿ ಅಣೆಕಟ್ಟಿಗಾಗಿ ಸರ್ಕಾರದ ಅನುದಾನ ತರುವುದಿಲ್ಲ.

ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಅಂದಾಜುಪಟ್ಟಿಗಾಗಿ ಸುಮಾರು ₹ 2.32 ಲಕ್ಷ ಅನುಮೋದನೆ ಪಡೆದುಕೊಳ್ಳ ಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣ ವಾಗಿ ₹ 5 ಲಕ್ಷದ ವರೆಗೆ ಅನುದಾನ ಕೊಡುವ ಗುರಿ ಇದೆ’ ಎಂದರು.
 
‘ಈ ಅಣೆಕಟ್ಟನ್ನು  ನೀರಿನ ವ್ಯವಸ್ಥೆಗೆ ಉಪಯೋಗಿಸುವುದು ಮಾತ್ರವಲ್ಲದೆ ರಸ್ತೆಯಾಗಿಯೂ ಬಳಸಬಹುದು. ಕೆಲವು ಗ್ರಾಮಗಳಿಗೆ ಮತ್ತು ಮನೆಗಳಿಗೆ ಸಂಪರ್ಕ ರಸ್ತೆಯನ್ನು ಈ ಅಣೆಕಟ್ಟಿನ ಮೇಲೆ ನಿರ್ಮಿಸಲು ಸಾಧ್ಯ’ ಎಂದರು.
 
ಶಾಸಕ ಎಸ್.ಅಂಗಾರ, ಉಪ ಕಾರ್ಯದರ್ಶಿ ಎಂ.ಆರ್ ಉಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್ ಮನ್ಮಥ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಸುಳ್ಯ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಧಿಕಾರಿ ಮಧುಕುಮಾರ್, ಪಂಜ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ ಮತ್ತಿತರರು ಇದ್ದರು.
 
ಅನುದಾನಕ್ಕೆ ಕಾಯಬೇಕಿಲ್ಲ
ಕಿಂಡಿ ಅಣೆಕಟ್ಟುಗಳಿಗೆ ಹಾಕಿರುವ ತಡೆಗಳಲ್ಲಿ ನೀರು ಶೇಖರವಾಗು ವುದರಿಂದ ನೀರಿನ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿಗೆ, ಜಾನುವಾರುಗಳಿಗೆ, ಕೃಷಿ, ಕೈಗಾರಿ ಕೆಗಳಿಗೆ ನೀರು ದೊರೆಯುತ್ತದೆ. ಕಿಂಡಿ ಅಣೆಕಟ್ಟನ್ನು ಸಾರ್ವಜನಿ ಕರೇ ನಿರ್ಮಿಸುವುದರಿಂದ ಇದಕ್ಕೆ ಯಾವುದೇ ಅನುದಾನಕ್ಕೆ ಕಾಯುವ ಚಿಂತೆ ಇಲ್ಲ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮೂಲಕ ಜನತೆಯೇ ಇದನ್ನು ನಿರ್ಮಿಸುತ್ತಾರೆ. ಇದಕ್ಕೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಸಾಕು ಎಂದು ಸಿಇಒ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.