ADVERTISEMENT

ಪತ್ತೆದಾರಿ ವಿಜ್ಞಾನ: ಎಲ್ಲ ಕ್ಷೇತ್ರಗಳಲ್ಲೂ ಅವಕಾಶ

ಡಿ.ಕೆ.ಬಸವರಾಜು
Published 20 ಮೇ 2017, 4:54 IST
Last Updated 20 ಮೇ 2017, 4:54 IST
ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು
ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು   

ಮಂಗಳೂರು: ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಭದ್ರತೆ ಮತ್ತು ಪತ್ತೇದಾರಿಯ ವೈಫಲ್ಯವೂ ಇದಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಸರ್ಕಾರಿ ವಲಯಗಳಾದ ವಿಚಕ್ಷಣ ವಲಯ, ಮಿಲಿಟರಿ, ಪೊಲೀಸ್ ಇತ್ಯಾದಿ ಕ್ಷೇತ್ರಗಳಲ್ಲಿ ನುರಿತ ಭದ್ರತಾ ಪಡೆ ಹಾಗೂ ಪತ್ತೇದಾರರ ಅವಶ್ಯಕತೆ ಇಂದು ಹೆಚ್ಚಾಗಿದೆ.

ಅಪರಾಧಗಳ ವಿರುದ್ಧ ಹೋರಾ ಡುವ ಹಾಗೂ ನಿಯಂತ್ರಿಸುವ  ಶಿಕ್ಷಣದ ಅಗತ್ಯ ಇಂದು ಹೆಚ್ಚಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಅತ್ತಾವರದಲ್ಲಿರುವ ಮಿಫ್ಟ್‌  (Mangalore Institute of Fashion Technology) ಕಾಲೇಜು ಪತ್ತೇದಾರಿ ವಿಜ್ಞಾನ ಮತ್ತು ಭದ್ರತೆ ವಿಷಯದಲ್ಲಿ ಪದವಿ ಕೋರ್ಸ್ ಆರಂಭಿಸಿದೆ.

ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಎಂ.ಜಿ. ಹೆಗಡೆ ಅವರು ಪೊಲೀಸ್ ಅಧಿಕಾರಿ ಗಳು, ವಕೀಲರು, ಅಪರಾಧ ವರದಿಗಾ ರರು, ಅಪರಾಧ ಶಾಸ್ತ್ರ ಹಾಗೂ ಮನಃ ಶಾಸ್ತ್ರ ಉಪನ್ಯಾಸಕರ ಅಭಿಪ್ರಾಯ ಪಡೆದು 8 ವರ್ಷಗಳ ಅವಧಿಯಲ್ಲಿ ಒಂದು ಚೌಕಟ್ಟು ತಯಾರಿಸಿ, 2013ರಲ್ಲಿ ಈ ಕೋರ್ಸ್ ಆರಂಭಿಸಿದ್ದಾರೆ. ‘ರಾಜ್ಯ ದಲ್ಲಿ ಬೇರೆ ಎಲ್ಲೂ ಈ ಕೋರ್ಸ್ ಇಲ್ಲ’ ಎನ್ನುತ್ತಾರೆ ಪ್ರಸ್ತುತ ಸಂಸ್ಥೆಯ ನಿರ್ದೇಶಕರಾಗಿರುವ ಹೆಗಡೆ.

ADVERTISEMENT

ಇಂದು ವಿವಿಧ ವಲಯಗಳಲ್ಲಿ ಸುರಕ್ಷತೆಗಾಗಿ ಭದ್ರತೆ ಅವಶ್ಯಕ. ಬ್ಯಾಂಕ್‌, ಆಸ್ಪತ್ರೆಗಳು, ಕೈಗಾರಿಕೆಗಳು, ವಿಶ್ವವಿದ್ಯಾ ಲಯ ಕ್ಯಾಂಪಸ್‌ಗಳು ಹಾಗೂ ಖಾಸಗಿ ಕಂಪೆನಿಗಳಿಗೆ ಭದ್ರತೆ ಅನಿವಾರ್ಯ. ಖಾಸಗಿ ಕಂಪೆನಿಗಳು ಪ್ರಧಾನ ಭದ್ರತಾ ಅಧಿಕಾರಿ, ಪ್ರಧಾನ ಖಾಸಗಿ ಭದ್ರತಾ ಅಧಿಕಾರಿ ಹಾಗೂ ಖಾಸಗಿ ಸಂಶೋಧ ಕರು ಹಾಗೂ ಭದ್ರತಾ ಮತ್ತು ವಿಚಕ್ಷಣ ಅಧಿಕಾರಿಗಳನ್ನು ನಿಯೋಜಿಸಿಕೊಂಡಿರು ತ್ತವೆ.  ಈ ಕೋರ್ಸ್ ಮಾಡಿದರೆ ಭದ್ರತಾ ಅಧಿಕಾರಿಗಳಾಗಬಹುದು. ಕೆಲವೊಂದು ಸಂಸ್ಥೆಗಳಲ್ಲಿ ಸಣ್ಣ ಪ್ರಮಾಣದ ಅಪರಾಧ ಗಳಾದರೆ ನೇರವಾಗಿ ಪೊಲೀಸ್ ಠಾಣೆಗೆ ಹೋಗುವುದರ ಬದಲು ಆಂತರಿಕವಾ ಗಿಯೇ ತನಿಖೆ ಮಾಡಲಾಗುತ್ತದೆ. ಅಂತಹ ಸಂಸ್ಥೆಗಳಲ್ಲಿ ಆಂತರಿಕ ತನಿಖಾಧಿ ಕಾರಿಗಳು ಇರುತ್ತಾರೆ. ಆ ತನಿಖಾಧಿಕಾರಿ ಗಳಾಗಲು ಈ ಕೋರ್ಸ್ ಉಪಯುಕ್ತವಾಗಿದೆ.

ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪಿಯುಸಿ (10+2) ಪಾಸಾಗಿರುವ ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಶೇ 40 ಅಂಕ ಪಡೆದಿರಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳು ಶೇ 35 ಅಂಕ ಪಡೆದಿರಬೇಕು. ಈ ಕೋರ್ಸ್‌ಗೆ ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಇದೆ.

ಉದ್ಯೋಗಾವಕಾಶ: ದೇಶದಲ್ಲಿ ಖಾಸಗಿ ವಲಯದ 300ಕ್ಕೂ ಹೆಚ್ಚು ಭದ್ರತಾ ಸಂಸ್ಥೆಗಳಿವೆ. ಇಂತಹ ಸಂಸ್ಥೆಗ ಳಲ್ಲಿ ಭದ್ರತೆ ಮತ್ತು ಪತ್ತೇದಾರಿ ವಿಜ್ಞಾನ ವಿಷಯದಲ್ಲಿ ಬಿ.ಎ. ಪಡೆದವರಿಗೆ ಮುಖ್ಯ ಭದ್ರತಾ ಅಧಿಕಾರಿ ಆಗಲು ಅವಕಾಶ ವಿದೆ. ಬ್ಯಾಂಕ್ ಹಾಗೂ ವಿಮಾ ಸಂಸ್ಥೆಗ ಳಲ್ಲಿ ಆರ್ಥಿಕ ಅಪರಾಧ ಪತ್ತೆ ಹಚ್ಚಲು ತಾಲ್ಲೂಕು ಮಟ್ಟದ ವಿಶೇಷ ಅಧಿಕಾ ರಿಯನ್ನು ನೇಮಿಸಿಕೊಳ್ಳುತ್ತವೆ. ಈ ಪದವಿ ಪಡೆದವರು ಸ್ವಂತ ಕಚೇರಿಯನ್ನು ಆರಂಭಿಸಿ ಖಾಸಗಿ ಪತ್ತೇದಾರಿ ಸೇವೆ ಯನ್ನು ಒದಗಿಸಬಹುದು. ಈ ಪದವೀಧ ರರಿಗೆ ವಿದೇಶದಲ್ಲೂ ಅವಕಾಶ ಉಂಟು. ಜತೆಗೆ ಬಹುರಾಷ್ಟ್ರೀಯ ಕಂಪೆನಿಗಳಲ್ಲೂ ಇವರಿಗೆ ಉದ್ಯೋಗ ಸಿಗುತ್ತದೆ.

ಶುಲ್ಕದ ವಿವರ: ವಾರ್ಷಿಕ ₹50 ಸಾವಿರ, ಪ್ರತಿ ಸೆಮಿಸ್ಟರ್‌ಗೆ ₹25 ಸಾವಿರ ಶುಲ್ಕವಿದ್ದು, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ಇದೆ. ಇವರಿಗೆ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ನೀಡ ಲಾಗುತ್ತಿದೆ. 40 ವಿದ್ಯಾರ್ಥಿಗಳಿಗೆ ಅವಕಾ ಶವಿದ್ದು, ಮಾಹಿತಿಗೆ ದೂರವಾಣಿ ಸಂಖ್ಯೆ 0824–2448897, 7338219100 ಸಂಪರ್ಕಿಸಬಹುದು.

**

ಫ್ಯಾಷನ್ ಡಿಸೈನ್ ಕೋರ್ಸ್‌
ಫ್ಯಾಷನ್ ಡಿಸೈನಿಂಗ್ ಕ್ಷೇತ್ರ ಹೊಸ ದೃಷ್ಟಿಕೋನ ಮತ್ತು ಆವಿಷ್ಕಾರಗಳಿಗೆ ತೆರೆದುಕೊಂಡಿದ್ದು, ಇದು ತನ್ನದೇ ಆದ ಆಧಿಪತ್ಯ ಹೊಂದಿದೆ.  ಒಬ್ಬ ತರಬೇತಿ ಪಡೆದ ಫ್ಯಾಷನ್ ವಿನ್ಯಾಸಗಾರ, ಬಟ್ಟೆ ತಯಾರಿ, ಯೋಜನೆ ಮತ್ತು ಆಡಳಿತಾತ್ಮಕ ಪರಿಕಲ್ಪನೆಯಲ್ಲಿ ಕಾರ್ಯ ನಿರ್ವಹಿಸಬಲ್ಲ.

ಇವುಗಳಲ್ಲದೇ ಫ್ಯಾಷನ್ ಮಾರುಕಟ್ಟೆ, ವಿನ್ಯಾಸ ಉತ್ಪಾದನಾ ನಿರ್ವಹಣೆ, ಫ್ಯಾಷನ್ ಮೀಡಿಯಾ, ಗುಣಮಟ್ಟ ನಿಯಂತ್ರಣ, ಫ್ಯಾಷನ್ ಸಹಕಾರಿ ಉತ್ತೇಜನ ನೀಡುವ ಬ್ರಾಂಡ್‌ಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡ ಬಹುದು. ಅಲ್ಲದೇ ವಸ್ತ್ರ ವಿನ್ಯಾಸಕಾರ, ಫ್ಯಾಷನ್ ಸಲಹೆಗಾರ, ಪರ್ಸನಲ್ ಸ್ಟೈಲಿಸ್ಟ್, ತಾಂತ್ರಿಕ ವಿನ್ಯಾಸಗಾರ, ಫ್ಯಾಬ್ರಿಕ್ ಬಯರ್, ಫ್ಯಾಬ್ರಿಕ್ ಗುಣಮಟ್ಟದ ನಿಯಂತ್ರಣ ಮ್ಯಾನೇಜರ್, ಉಡುಪು ಮಳಿಗೆಗೆಗಳ ಮಾರಾಟ ಪ್ರತಿನಿಧಿ, ಇಲ್ಲಸ್ಟ್ರೇಟರ್, ಬಟ್ಟೆ ಉದ್ಯಮಗಳ ಮಾರಾಟ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಬಹುದು. ಇವುಗಳಲ್ಲದೇ ಸ್ವಂತ ಉದ್ಯಮವನ್ನು ಆರಂಭಿಸಬಹುದು.

ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪಿಯುಸಿ (10+2) ಪಾಸಾಗಿರುವ ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಶೇ 40 ಅಂಕ ಪಡೆದಿರಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳು ಶೇ 35 ಅಂಕ ಪಡೆದಿರಬೇಕು. ಮೂರು ವರ್ಷದ ಈ ಕೋರ್ಸ್‌ನಲ್ಲಿ ಒಟ್ಟು ಆರು ಸೆಮಿಸ್ಟರ್‌ಗಳು ಇವೆ.  ಎಂ.ಎಸ್ಸಿ ಫ್ಯಾಷನ್ ಡಿಸೈನ್ ಮಾಡಬಹುದು.

ಶುಲ್ಕದ ವಿವರ: ವಾರ್ಷಿಕ ₹42 ಸಾವಿರ, ಪ್ರತಿ ಸೆಮಿಸ್ಟರ್‌ಗೆ ₹21 ಸಾವಿರ ಶುಲ್ಕವಿದ್ದು, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ಇದೆ.

**

ಕೆಲವು ಕೋರ್ಸ್‌ಗಳಲ್ಲಿ ಕೆಲವೇ ಕ್ಷೇತ್ರದಲ್ಲಿ ಅವಕಾಶ. ಆದರೆ ಭದ್ರತೆ ಮತ್ತು ಪತ್ತೇದಾರಿ ವಿಜ್ಞಾನ ಕೋರ್ಸ್‌ನಲ್ಲಿ ಪದವಿ ಪಡೆದವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ಉಂಟು.
-ಎಂ.ಜಿ.ಹೆಗಡೆ, ಮಿಫ್ಟ್‌ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.