ADVERTISEMENT

‘ಪರಿಸರಕ್ಕೆ ಪೂರಕವಾಗಿರುವುದು ಕೃಷಿಕರ ಹೊಣೆ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:34 IST
Last Updated 27 ಮೇ 2017, 6:34 IST

ವಿಟ್ಲ: ಕೃಷಿಕರು ಅನಾಸಕ್ತಿಯಿಂದ ಹೊರ ಬಂದು ಆಧುನಿಕ ಕೃಷಿ ಯಾಂತ್ರೀಕೃತ ಪದ್ಧತಿಯೊಂದಿಗೆ ಮುನ್ನಡೆಯಬೇ ಕಾಗಿದೆ. ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಅರ್ಹ ಫಲಾನುಭವಿಗಳು ಸದ್ವಿನಿಯೋ ಗಿಸಿಕೊಳ್ಳಬೇಕೆಂದು ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ತಿಳಿಸಿದರು.

ಅವರು ಗುರುವಾರ ವಿಟ್ಲ ಲ್ಯಾಂಪ್ಸ್ ಸೊಸೈಟಿ ಸಭಾಭವನದಲ್ಲಿ ಕೃಷಿ ಅಭಿ ಯಾನ 2017-18ರ ಅಂಗವಾಗಿ ನಡೆದ ವಿಟ್ಲ ಹೋಬಳಿ ಮಟ್ಟದ ರೈತ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತನ್ನ ಕೃಷಿಯೊಂದಿಗೆ ಪರಿಸರ ಪೂರಕವಾಗಿ ಮಣ್ಣು, ನೀರು ಸಂರಕ್ಷ ಣೆಯ ಜವಾಬ್ದಾರಿಯೂ ಪ್ರತಿಯೊಬ್ಬ ರೈತನಿ ಗಿದೆ. ತಾನು ಮಾತ್ರ ಬದುಕಿದರೆ ಸಾಲದು, ಪ್ರತಿಯೊಬ್ಬರೂ ಸುಭಿಕ್ಷದಿಂದ ಇರಬೇಕಾದರೆ ನೆಲ-ಜಲ ಉಳಿಯುವ ಹಾಗೆ ಕೃಷಿ ಪದ್ಧತಿ ಅಳವಡಿಸಬೇಕು ಎಂದು ತಿಳಿಸಿದರು.

ADVERTISEMENT

ರೈತ ಸಂವಾದ ಕಾರ್ಯಕ್ರಮವನ್ನು ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಉದ್ಘಾಟಿಸಿದರು. ಅಳಿಕೆ ತಾಲ್ಲೂಕು ಪಂಚಾಯಿತಿ ಸದಸ್ಯ ಪದ್ಮನಾಭ ನಾಯ್ಕ, ಆದಂ, ವಿಟ್ಲ ಮೂಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ದಯಾನಂದ ಶೆಟ್ಟಿ ಅಬೀರಿ, ಅನಂತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸನತ್ ಕುಮಾರ್ ರೈ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಮಂಗಳೂರು ಕೃಷಿ ಉಪ ನಿರ್ದೇಶಕ ಡಾ. ಮುನಿಯ ಗೌಡ, ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರು ರೈತ ಕೇಂದ್ರದ ವಿಜ್ಞಾನಿ ಹರೀಶ್ ಶೆಣೈ, ಬಂಟ್ವಾಳ ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್ ಭಾಗವಹಿಸಿದ್ದರು.

ವಿಟ್ಲ ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿ ಇಝೀ ಜುದ್ದೀನ್ ಸ್ವಾಗತಿಸಿ, ನಿರೂಪಿಸಿದರು. ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಪಿ.ಎಫ್.ಮಿರಾಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.  ಇದೇ ಸಂದರ್ಭದಲ್ಲಿ ಕಲಾವಿದ ಸರಪ್ಪಾಡಿ ಅಶೋಕ್ ಶೆಟ್ಟಿ ನೇತೃತ್ವದ ತಂಡದಿಂದ ಸಾವಯವ ಕೃಷಿ ಪದ್ಧತಿ, ಪರಿಸರ ಸಂರಕ್ಷಣೆ, ನೀರಿಂಗಿ ಸುವಿಕೆ, ಜಲ ಮರುಪೂರಣ, ಆಧುನಿಕ ಕೃಷಿ ಪದ್ಧತಿ, ಯಾಂತ್ರೀಕೃತ ಕೃಷಿಗೆ ಒತ್ತು, ಕೃಷಿ ಸ್ವಾವಲಂಬತೆ ಇನ್ನಿತರ ರೈತಪೂರಕ ಮಾಹಿತಿಯನ್ನಾಧರಿಸಿದ ಜಾಗೃತಿ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.