ADVERTISEMENT

ಪೊದೆಯಲ್ಲಿ ಎರಡು ಬೈಕ್‌, ತಲವಾರು ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:47 IST
Last Updated 25 ಏಪ್ರಿಲ್ 2017, 6:47 IST
ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು
ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು   

ವಿಟ್ಲ: ವಿಟ್ಲದ ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಅಬ್ದುಲ್ ಜಲೀಲ್ ಕರೋಪಾಡಿ ಅವರ ಹತ್ಯೆ ನಡೆದ ಸ್ಥಳದ ಸಮೀಪ ಎರಡು ತಲ ವಾರು, ಬಟ್ಟೆಬರೆಗಳು, ಎರಡು ಬೈಕ್‌ ಗಳು, ಕರೋಪಾಡಿ ಗ್ರಾಮದ ಮುಗುಳಿ ಸಮೀಪದ ಪೊದೆಯೊಂದರಲ್ಲಿ ಪತ್ತೆ ಯಾಗಿದ್ದು, ತನಿಖೆಯ ದಾರಿ ತಪ್ಪಿಸಲು ಈ ರೀತಿಯ ತಂತ್ರ ರೂಪಿಸಿರುವ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.

ಇದೇ 20 ರಂದು ಕರೋಪಾಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಜಲೀಲ್ ಅವರ ಹತ್ಯೆ ನಡೆದಿತ್ತು. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿ ಸಿದ್ದು, ಹಲವರನ್ನು ವಿಚಾರಣೆಗೊಳಪಡಿ ಸಿದ್ದರು. ಎರಡು ದಿನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಘಟನೆಗೆ ಬಳಸಿದ ಸ್ವತ್ತುಗಳು ಪತ್ತೆಯಾಗಿದೆ.

ಕರ್ನಾಟಕ-ಕೇರಳ ಗಡಿಭಾಗದ ಮುಗುಳಿ ಎಂಬಲ್ಲಿಯ ಉಪ್ಪಳ ರಸ್ತೆ ಬದಿ ಯಲ್ಲಿ ಸ್ಥಳೀಯರು ನಡೆದು ಹೋಗುತ್ತಿದ್ದ ವೇಳೆ, ಹಳೆಯ ಎರಡು ಪಲ್ಸರ್ ಕಂಪೆ ನಿಯ ಬೈಕ್ ಬಿದ್ದ ಸ್ಥಿತಿಯಲ್ಲಿ ಪತ್ತೆಯಾ ಗಿವೆ. ಬಳಿಕ ಸ್ಥಳೀಯರು ವಿಟ್ಲ ಪೊಲೀ ಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀ ಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಿದಾಗ ಬೈಕ್ ಪಕ್ಕದಲ್ಲಿ ಎರಡು ತಲ ವಾರು, ಹಾಗೂ ಕೆಲವು ಪ್ಯಾಂಟ್ ಹಾಗೂ ಶರ್ಟ್‌ಗಳು ಪತ್ತೆಯಾಗಿದೆ. ಇದ ರಿಂದ ಆತಂಕಕ್ಕೀಡಾದ ಪೊಲೀಸರು ಜಲೀಲ್ ಅವರ ಕೊಲೆಗೆ ಸಂಬಂಧಿಸಿದ ವಸ್ತುಗಳೇ ಅಥವಾ ಬೇರೆ ಯಾರದರೂ ತಂದು ಎಸೆದಿರುವ ವಸ್ತುಗಳೇ ಎಂದು ಶಂಕೆ ವ್ಯಕ್ತಪಡಿಸಿದ್ದರು. 

ADVERTISEMENT

ಜಲೀಲ್ ಹತ್ಯೆಯಾದ ಕರೋಪಾಡಿ ಗ್ರಾಮ ಪಂಚಾಯಿತಿ ಕಚೇರಿಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಇದು ಪತ್ತೆಯಾಗಿದ್ದು, ಜಲೀಲ್ ಕೊಲೆ ಗೂ, ಇಲ್ಲಿ ಪತ್ತೆಯಾದ ವಸ್ತುಗಳಿಗೆ ಸಂಬಂಧವಿದೆಯಾ ಎಂಬ ಅನುಮಾನ ಪೊಲೀಸ್ ಇಲಾಖೆಗೆ ವ್ಯಕ್ತವಾಗಿತ್ತು. ಇದರಿಂದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬಳಿಕ ಪೊಲೀ ಸರು ಸ್ವತ್ತುಗಳನ್ನು ವಶಕ್ಕೆ ಪಡೆದು ಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

ಈ ಪ್ರಕರಣದ ಹಿಂದೆ ದೊಡ್ಡ ವ್ಯಕ್ತಿಗಳು ಶಾಮೀಲಾಗಿರುವ ಸಾಧ್ಯತೆ ಗಳಿದ್ದು, ಇದರಿಂದಾಗಿ ತನಿಖೆಯ ಹಾದಿ ತಪ್ಪಿಸಲು ಹಂತಕರು ದಿನೇ ದಿನೇ ವಿವಿಧ ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಇಲ್ಲಿ ದೊರೆತಿರುವ ವಸ್ತುಗಳಿಗೂ ಜಲೀಲ್ ಕೊಲೆಗೆ ಬಳಕೆ ಮಾಡಿದ ವಸ್ತುಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅನಾಥ ವಸ್ತುಗಳು ಪತ್ತೆ ಎಂಬುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾದಿ ತಪ್ಪಿಸುವ ಯತ್ನ
ಈ ಪ್ರಕರಣದ ಹಾದಿ ತಪ್ಪಿಸಲು ಈ ರೀತಿಯಾಗಿ ಮಾಡಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಜಲೀಲ್ ಅವರ ಹತ್ಯೆ ನಡೆಸಲು ಆರೋಪಿಗಳು ಹೊಸ ಎಫ್‌ಝಿ ಆರ್ಮಿ ಬೈಕ್‌ ಹಾಗೂ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿ ಹಳೆಯ ಎರಡು ಪಲ್ಸರ್ ಬೈಕ್ ಪತ್ತೆಯಾಗಿದ್ದು, ಇಲ್ಲಿ ದೊರೆತ ತಲವಾರಗಳಲ್ಲಿ ಯಾವುದೇ ರಕ್ತದ ಕಲೆಗಳು ಕಾಣಿಸುತ್ತಿಲ್ಲ. ಆರೋಪಿಗಳು ಹತ್ಯೆ ನಡೆಸಿದ ಬಳಿಕ ಬೇರೆ ಬೇರೆ ರಸ್ತೆಯಲ್ಲಿ ಪರಾರಿಯಾಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಹೀಗಿರುವಾಗ ಒಂದೇ ಸ್ಥಳದಲ್ಲಿ ಎರಡು ಬೈಕ್‌ಗಳು ಪತ್ತೆಯಾಗಲು ಕಾಣವೇನು? ಇಲ್ಲಿ ಪತ್ತೆಯಾದ ಎರಡು ಬೈಕ್‌ಗಳ ಪೈಕಿ ಒಂದು ಕನ್ಯಾನ ನಿವಾಸಿಯೊಬ್ಬರಿಗೆ ಸೇರಿದ್ದು, ಅದು ಕೆಟ್ಟು ಹೋಗಿದೆ. ಸ್ಟಾರ್ಟ್ ಆಗದ್ದರಿಂದ ಕನ್ಯಾನ ಸಾರ್ವಜನಿಕರ ಶೌಚಾಲಯ ಸಮೀಪ ನಿಲ್ಲಿಸಿದ್ದರು. ಇದೀಗ ಈ ಬೈಕ್ ಮುಗುಳಿಯಲ್ಲಿ ಪತ್ತೆಯಾಗಿದೆ. ಇದೆಲ್ಲದರ ಬಗ್ಗೆ ಕೂಲಂಕಷವಾಗಿ ಪೊಲೀಸರು ತನಿಖೆ ನಡೆಸಿದ್ದು, ಜಲೀಲ್ ಕೊಲೆ ಪ್ರಕರಣದ ದಾರಿ ತಪ್ಪಿಸಲು ಹೂಡಿರುವ ಬಗ್ಗೆ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.