ADVERTISEMENT

ಬಸವನಮೂಲೆ: ದೇವಳದಲ್ಲಿ 30ರಂದು ಬ್ರಹ್ಮಕಲಶೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮೇ 2017, 9:23 IST
Last Updated 29 ಮೇ 2017, 9:23 IST
ಬ್ರಹ್ಮಕಲಶ ಸಂಭ್ರಮದಲ್ಲಿರುವ ಕುಲ್ಕುಂದ ಬಸವನಮೂಲೆಯ ಐತಿಹಾಸಿಕ ಬಸವೇಶ್ವರ ದೇವಾಲಯ.
ಬ್ರಹ್ಮಕಲಶ ಸಂಭ್ರಮದಲ್ಲಿರುವ ಕುಲ್ಕುಂದ ಬಸವನಮೂಲೆಯ ಐತಿಹಾಸಿಕ ಬಸವೇಶ್ವರ ದೇವಾಲಯ.   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದ ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಾಲಯವು ಜೀರ್ಣೋದ್ಧಾರ ಗೊಂಡಿದ್ದು, ಈ  ದೇವಳದಲ್ಲಿ ಇದೇ 30ರಿಂದ ಜೂನ್‌ 4ರವರಗೆ ಬ್ರಹ್ಮ ಕಲಶೋತ್ಸವ ನೆರವೇರಲಿದೆ.ಶಿಥಿಲಾವಸ್ಥೆ ತಲುಪಿದ್ದ ಈ ದೇವಾಲಯ ಭಕ್ತರ ಸಹಕಾರದಿಂದ ಈ ಐತಿಹಾಸಿಕ ದೇವಾಲಯವು ಪುನರು ತ್ಥಾನಗೊಂಡು ಬೃಹತ್ ಆಲಯ ನಿರ್ಮಾ ಣವಾಗಿದ್ದು, ಸುಮಾರು ₹2.5ಕೋಟಿ ವೆಚ್ಚದಲ್ಲಿ ಬಸವೇಶ್ವರ ದೇವಾಲಯ ನಿರ್ಮಾಣವಾಗಿದೆ.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕೆಳದಿ ಮಠದ ರಾಜಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಖ್ಯಾತ ವಾಸ್ತುಶಿಲ್ಪಿ ಎಸ್.ಎಂ.ಪ್ರಸಾದ್ ಮುನಿ ಯಂಗಳ ಅವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸ ಲಾಯಿತು. ಏನೆಕಲ್‌ನ ಮನೋಹರ ನಾಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ದೊರಕಿತು.

ದೇವಾಲಯವು 600 ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ತಿಳಿದುಬಂದಿದ್ದು, ಹಿಂದೆ ಲಿಂಗಾಯತ ವಂಶಸ್ಥ ರಾಜರು ಮತ್ತು ಕೆಳದಿ ವಂಶಸ್ಥ ಅರಸರು ಈ ಭಾಗದಲ್ಲಿ ಆಡಳಿತ ನಡೆಸಿದ್ದರು. ಈ ಕಾಲದಲ್ಲಿ ಬಸವೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಕಾಲಾಂತರದಲ್ಲಿ ಈ ದೇವಾಲಯವು ಶಿಥಿಲಾವಸ್ಥೆಗೆ ತಲುಪಿತ್ತು ಎಂದು ದೈವಜ್ಞರಾದ ದಿವಾಕರ ತಳಿಪರಂಬು ಅವರು ನಡೆಸಿರುವ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂತು.

ADVERTISEMENT

ಏಪ್ರಿಲ್‌ 15, 2016ರಿಂದ ನಿರಂತರ ವಾಗಿ ಶ್ರಮದಾನ ನೆರವೇರುತ್ತಿದ್ದು, ಕುಲ್ಕುಂದ, ಸುಬ್ರಹ್ಮಣ್ಯ ಸೇರಿದಂತೆ ಪರವೂರ ಭಕ್ತರು ನಿರಂತರವಾಗಿ ಶ್ರಮ ದಾನದ ಮೂಲಕ ದೇವರ ಸೇವೆ ನೆರವೇರಿಸುತ್ತಿದ್ದಾರೆ. ಈಗಾಗಲೇ ಶ್ರಮ ದಾನದ ಮೂಲಕ ಸುಮಾರು ₹25ಲಕ್ಷ ದಷ್ಟು ಕೆಲಸ ನೆರವೇರಿದೆ. ಊರವರ ಬೈಲುವಾರ ಸಮಿತಿಗಳನ್ನು ರಚಿಸಿ ವಾರದಲ್ಲಿ ಎರಡು ದಿನದಂತೆ ನಿರಂತರವಾಗಿ  ಶ್ರಮದಾನದ ಮೂಲಕ ದೇವತಾ ಕಾರ್ಯ ನೆರವೇರಿಸುತ್ತಾ ಬರುತ್ತಿದ್ದಾರೆ.

ಬಸವೇಶ್ವರ ದೇವರ ನೂತನ ಗರ್ಭಗುಡಿಯ ಗೋಡೆಗಳ ನಿರ್ಮಾಣ ಕಾರ್ಯ ಸಂಪೂರ್ಣ ಸಮಾಪ್ತಿ ಗೊಂಡಿದೆ. ಗರ್ಭಗುಡಿಗೆ ಮರದ ಮತ್ತು ತಾಮ್ರದ ಹೊದಿಕೆ, ನೂತನ ಸುತ್ತು ಪೌಳಿಯ ಗೋಡೆ, ಛಾವಣಿ, ನಮಸ್ಕಾರ ಮಂಟಪ, ಉಪದೇವರ ಗುಡಿ ನಿರ್ಮಾ ಣ ಕಾರ್ಯ ನೆರವೇರಿದೆ. ಇದಲ್ಲದೆ ಸುಮಾರು ₹15ಲಕ್ಷ ವೆಚ್ಚದಲ್ಲಿ ಭೂಮಿ ಸಮತಟ್ಟು ಮಾಡುವ ಕಾರ್ಯ ಮುಕ್ತಾಯಗೊಂಡಿದೆ. ಮುಖ್ಯರಸ್ತೆ ಯಿಂದ ದೇವಳಕ್ಕೆ ರಸ್ತೆ ನಿರ್ಮಿಸಿದ್ದು, ದೇವಳದ ಮುಂಭಾಗದಲ್ಲಿ ನೂತನ ಸಭಾಂಗಣ ರಚನಾ ಕಾರ್ಯವು ಅಂತಿಮ ಹಂತದಲ್ಲಿದೆ.

ವಾಸ್ತುಶಿಲ್ಪಿ ಎಸ್.ಎಂ.ಪ್ರಸಾದ್ ಅವರ ವಾಸ್ತು ಶೈಲಿಯ ಸಲಹೆ ನೀಡಿದ್ದು, ಶಿಲ್ಪಿಗಳಾದ ಶಶಿ ಚಟ್ಟಂಗಾಡು ಮತ್ತು ಅನಿಲ್ ಕುಮಾರ್ ಚೆಟ್ಟಂಗಾಡು ಅದ್ಭುತವಾಗಿ ಕೆಂಪು ಶಿಲೆಯಲ್ಲಿ ಕಲೆಯನ್ನು ಅನಾವರಣಗೊಳಿಸಿದ್ದಾರೆ. ಗರ್ಭಗುಡಿ, ಮುಖಮಂಟಪ, ಸುತ್ತು ಪೌಳಿಯಲ್ಲಿ ಅನೇಕ ಕಲಾತ್ಮಕ ಕೆತ್ತನೆಗಳು ಅತ್ಯದ್ಭುತವಾಗಿ ಮೂಡಿ ಬಂದಿವೆ. ಕಂಬಳ ಕೆತ್ತನೆಗಳು ವಿನೂತನ ಶೈಲಿ ಯನ್ನು ಅನಾವರಣಗೊಳಿಸಿದ್ದು, ಅದೇ ರೀತಿ ಮರದ ಶಿಲ್ಪಿ ರಮೇಶ್ ಪೆರುವಾಯಿ ಅವರು ಮರದಲ್ಲಿ ದೇವಾನು ದೇವತೆ ಗಳ ಕೆತ್ತನೆಗಳನ್ನು ನಯನ ಮನೋಹರ ವಾಗಿ ಚಿತ್ರಿಸಿದ್ದಾರೆ. ಒಟ್ಟಾರೆಯಾಗಿ ಅರಣ್ಯದ ನಡುವೆ ಸುಂದರ ದೇವಾಲಯ ನಿರ್ಮಾಣಗೊಂಡು ಬ್ರಹ್ಮಕಲ ಶೋತ್ಸವದ ಮಹೋತ್ಸವಕ್ಕೆ ಸಿದ್ಧವಾಗು ತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.