ADVERTISEMENT

ಮಂಗಳೂರಿನ ಕಡಲ ತೀರ ಅತ್ಯಂತ ಸುಂದರ

ವಿಂಗ್‌ ಕಮಾಂಡರ್‌ ಪರಮವೀರ್ ಸಿಂಗ್‌ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2016, 9:34 IST
Last Updated 9 ಡಿಸೆಂಬರ್ 2016, 9:34 IST
ಮುಂಬೈನಿಂದ ಈಜಿಕೊಂಡು ಮಂಗಳೂರಿನ ತಣ್ಣೀರುಬಾವಿ ಬೀಚ್‌ಗೆ ಗುರುವಾರ ಬಂದ ‘ಸೀ ಹ್ಯಾಕ್‌’ ತಂಡದ ಸದಸ್ಯರನ್ನು ಐಡಿಬಿಐ ಬ್ಯಾಂಕ್‌ನ ನಾರಾಯಣಮೂರ್ತಿ ವಿ. ಗೌರವಿಸಿದರು.  ಪ್ರಜಾವಾಣಿ ಚಿತ್ರ
ಮುಂಬೈನಿಂದ ಈಜಿಕೊಂಡು ಮಂಗಳೂರಿನ ತಣ್ಣೀರುಬಾವಿ ಬೀಚ್‌ಗೆ ಗುರುವಾರ ಬಂದ ‘ಸೀ ಹ್ಯಾಕ್‌’ ತಂಡದ ಸದಸ್ಯರನ್ನು ಐಡಿಬಿಐ ಬ್ಯಾಂಕ್‌ನ ನಾರಾಯಣಮೂರ್ತಿ ವಿ. ಗೌರವಿಸಿದರು. ಪ್ರಜಾವಾಣಿ ಚಿತ್ರ   

ಮಂಗಳೂರು:  ‘ಮಂಗಳೂರಿನ ಕಡಲ ತೀರ ಅತ್ಯಂತ ಸ್ವಚ್ಛ ಹಾಗೂ ಸುಂದರವಾಗಿದೆ. ಆದರೆ, ಅಭಿವೃದ್ಧಿ ಕಂಡಿಲ್ಲ. ಇದಕ್ಕಾಗಿಯೇ ಮುಂಬೈನಿಂದ ಆರಂಭಿಸಿದ ಸುದೀರ್ಘ ಈಜನ್ನು ಮಂಗಳೂರಿನ ಕಡಲ ತೀರದಲ್ಲಿ ಮುಕ್ತಾಯಗೊಳಿಸಿದ್ದೇವೆ.’

ಐಡಿಬಿಐ ಬ್ಯಾಂಕ್‌ ಪ್ರಾಯೋಜಕ ತ್ವದಲ್ಲಿ ನವೆಂಬರ್‌ 26 ರಂದು ಮುಂಬೈನಿಂದ ಆರಂಭವಾಗಿ ಗುರು ವಾರ ಮಂಗಳೂರಿಗೆ ಬಂದ ಸುದೀರ್ಘ ಈಜು ತಂಡ ‘ಸೀ ಹ್ಯಾಕ್‌’ನ ನೇತೃತ್ವ ವಹಿಸಿದ್ದ ವಿಂಗ್‌ ಕಮಾಂಡರ್‌ ಪರಮ ವೀರ್‌ ಸಿಂಗ್‌ ಅವರ ಮಾತಿವು.

‘ಅರಬ್ಬಿ ಸಮುದ್ರ ಶಾಂತವಾದುದು. ಇಲ್ಲಿನ ಬೀಚ್‌ಗಳು ಅಷ್ಟೇ ಪ್ರಶಾಂತವಾ ಗಿವೆ. ಅದರಲ್ಲೂ ಮಂಗಳೂರಿನ ಕಡಲ ತೀರಗಳು ಗಮನ ಸೆಳೆಯುತ್ತವೆ. ಇಂತಹ ಅವಿಸ್ಮರಣೀಯ ಬೀಚ್‌ನಲ್ಲಿ ಸುದೀರ್ಘ ಈಜು ಮುಕ್ತಾಯಗೊಳಿಸುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಸುದೀರ್ಘ ಈಜಿಗೆ ಭಾರತದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಸಿಕ್ಕಿಲ್ಲ. ಹೀಗಾಗಿ ಒಲಿಂಪಿಕ್‌ನ ಸುದೀರ್ಘ ಈಜು ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸು ವವರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಷಾದಿಸಿದರು.

ಸುದೀರ್ಘ ಈಜು ಅಷ್ಟೊಂದು ಸುಲ ಭವಲ್ಲ. ಅದಕ್ಕೆ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸ್ಥಿರತೆಯೂ ಅತ್ಯಂತ ಅವಶ್ಯಕ. ಪ್ರತಿ ಗಂಟೆಗೆ 3.6 ಕಿ.ಮೀ.ನಂತೆ ನಿತ್ಯ ಸುಮಾರು 70 ಕಿ.ಮೀ. ಈಜಿದ್ದೇವೆ. ನವೆಂಬರ್‌ 26 ರಂದು ಆರಂಭಿಸಿದ್ದ ಈಜು, ಗುರುವಾರ ಮುಕ್ತಾಯವಾಗಿದೆ. ಇದೊಂದು ಅಪರೂಪದ ಕ್ಷಣ ಎಂದು ಬಣ್ಣಿಸಿದರು.

‘ತಂಡದಲ್ಲಿದ್ದ ರಾಹುಲ್ ಚಿಪ್ಳು ಣಕರ್‌, ಗುಲ್ಲು ಪಿಲ್ಲಿ ನರಹರಿ, ಮಾನವ ಮೆಹ್ತಾ, ಶ್ರೀಕಾಂತ ಪಲಾಂಡೆ, ವಿಕಿ ಟೋಕಸ್‌ ಅವರು ನನ್ನ ಜತೆಗೆ ಈಜಿನಲ್ಲಿ ಪಾಲ್ಗೊಂಡಿದ್ದರು. ಸುಬೋಧ ಸುಳೆ ಅವರು ಅಹೋರಾತ್ರಿ ಬೋಟ್‌ನಲ್ಲಿ ಕುಳಿತು ನಮಗೆ ಮಾರ್ಗದರ್ಶನ ನೀಡು ತ್ತಿದ್ದರು. ವೀಕ್ಷಕರಾಗಿ ಬಂದಿದ್ದ ಸ್ವಿಮಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾದ ಶೇಖರ್‌ ಕಾಳೆ, ನಿರಂತರವಾಗಿ ನಮ್ಮ ಮೇಲೆ ನಿಗಾ ಇಟ್ಟಿದ್ದರು. ತಂಡದ ವ್ಯವಸ್ಥಾಪಕ ಯಾದವೇಂದ್ರ ಸಿಂಗ್‌, ನಮ್ಮ ಎಲ್ಲ ವ್ಯವಸ್ಥೆ ಮಾಡಿದ್ದಾರೆ’ ಎಂದು ಹೇಳಿದರು.

‘ಐಡಿಬಿಐ ಬ್ಯಾಂಕ್‌ ಪ್ರಾಯೋಜಕ ತ್ವದಲ್ಲಿ ನಡೆದ ಈ ಸುದೀರ್ಘ ಈಜು ಇತಿಹಾಸವನ್ನು ಸೃಷ್ಟಿಸಿದೆ. ರೋಟರಿ ಕ್ಲಬ್‌ ಹಾಗೂ ತಾಜ್ ಗ್ರೂಪ್‌ ಆಫ್‌ ಹೋಟೆಲ್‌ ಕೂಡ ಸಹಕಾರ ನೀಡಿದ್ದವು’ ಎಂದರು.

ನಗರದ ತಣ್ಣೀರುಬಾವಿ ಬೀಚ್‌ಗೆ ಬಂದ ಸೀ ಹ್ಯಾಕ್ ಈಜು ತಂಡದ ಸದಸ್ಯರನ್ನು ಐಡಿಬಿಐ ಬ್ಯಾಂಕಿನ ನಾರಾಯಣಮೂರ್ತಿ ವಿ. ಸೇರಿದಂತೆ ಇತರ ಅಧಿಕಾರಿಗಳು ಸ್ಮರಣಿಕೆ ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.