ADVERTISEMENT

‘ಮೂಲ್ಕಿ ಬಸ್ ನಿಲ್ದಾಣಕ್ಕೆ ₹3 ಕೋಟಿ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:36 IST
Last Updated 24 ಮೇ 2017, 8:36 IST

ಮೂಲ್ಕಿ: ಬೆಳೆಯುತ್ತಿರುವ ಪಟ್ಟಣವಾಗಿ ರುವ ಮೂಲ್ಕಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ ₹3 ಕೋಟಿ ನಿಗದಿ ಪಡಿಸಿದ್ದು ಶೀಘ್ರ ಸರ್ಕಾರದಿಂದ ಮಂಜೂರಾಗಲಿದೆ. ಜಮೀನನ್ನು ಗುರುತಿಸಿ, ಮೂಲ್ಕಿ ಪಟ್ಟಣ ಪಂಚಾಯಿತಿಯು ಕಾರ್ಯ ಪ್ರವೃತ್ತವಾಗಬೇಕು ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.

ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಜಂಟಿಯಾಗಿ ಗಾಂಧಿಪಥ-ಗ್ರಾಮ ಪಥ ಹಂತ-4  ರಸ್ತೆ ಯೋಜನೆಯಡಿ ₹6 ಕೋಟಿ ರೂ. ವೆಚ್ಚದ ಹೆಜಮಾಡಿ-ಕೊಕ್ರಾಣಿ ಕುದ್ರು ರಸ್ತೆ ಹಾಗೂ ಸಂಪರ್ಕ ಸೇತುವೆ ಕಾಮಗಾರಿಗೆ ಮೂಲ್ಕಿಯಲ್ಲಿ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಶಾಸಕ ವಿನಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೆಥೊಲಿಕ್ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ ಡಿಸೋಜ, ಕಟೀಲು ದೇವಳದ ಅನಂತ ಪದ್ಮನಾಭ ಅಸ್ರಣ್ಣ, ಅದಾನಿ ಯುಪಿಸಿಎಲ್‌ನ ಕಿಶೋರ್ ಆಳ್ವ, ಕಡವಿನಬಾಗಿಲು ಜಮಾ ಮಸೀದಿಯ ಮುಹಮ್ಮದ್ ನೂರ್ ಆಲಂ ಸಾಹೇಬ್ ಶುಭ ಹಾರೈಸಿದರು.

ADVERTISEMENT

ಮೂಲ್ಕಿ ಚರ್ಚ್‌ನ ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಶಶಿಕಾಂತ್ ಪಡುಬಿದ್ರಿ, ವಿಶಾಲಾಕ್ಷಿ ಪುತ್ರನ್ ಹೆಜಮಾಡಿ, ಮೂಲ್ಕಿ ಸುನಿಲ್ ಆಳ್ವ, ರೇಣುಕಾ ಪುತ್ರನ್, ಎಂ. ದುಗ್ಗಣ್ಣ ಸಾವಂತರು, ಕೆ.ಸಿ.ಸತೀಶ್, ವಿಜಯಾ ನಂದ ನಾಯಕ್, ಹೇಮಂತ್ ಕೆ.ಆರ್, ನವೀನ್ಚಂದ್ರ ಜೆ.ಶೆಟ್ಟಿ, ಧನಂಜಯ ಕೋಟ್ಯಾನ್ ಮಟ್ಟು, ಜಿತೇಂದ್ರ ಫುರ್ಟಾಡೋ, ಪ್ರಮೋದ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.