ADVERTISEMENT

‘ಮೋದಿ ನಾಯಕತ್ವಕ್ಕೆ ಜನಮನ್ನಣೆ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:33 IST
Last Updated 27 ಮೇ 2017, 6:33 IST

ಪುತ್ತೂರು: ಮೌನಿ ಪ್ರಧಾನಿಯ ಬದಲು ಮಾತನಾಡುವ ಪ್ರಧಾನಿ ಬೇಕು,  ಸಮರ್ಥ ನಾಯಕತ್ವ ಬೇಕೆಂದು ಜನರು ತೀರ್ಮಾನಕ್ಕೆ ಬಂದ ಫಲವಾಗಿಯೇ  ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆ ಯಾದರು. ಅವರು ಜನರ ನಂಬಿಕೆ-ಒತ್ತಾಸೆಗೆ ಪೂರಕವಾಗಿ ಮಾಡಿದ ಹಲವು ಸಾಧನೆಗಳಿಂದಾಗಿಯೇ ಇಂದು ಕೇಂದ್ರ ಸರ್ಕಾರ ಜನತೆಗೆ ಹತ್ತಿರವಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು.

ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿದ ಪ್ರಯುಕ್ತ  ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ‘ಚಾಯ್ ಪೇ ಚರ್ಚಾ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಹಿಂದೆ ಗ್ರಾಮ ಪಂಚಾಯಿತಿಗೆ ₹1 ಕೋಟಿ ಅನುದಾನ ಮಂಜೂ ರಾದರೆ ಅದರಲ್ಲಿ ಸಣ್ಣ ಪಾಲು ಮಾತ್ರ ಗ್ರಾಮ ಪಂಚಾಯಿತಿಗೆ ಬರುತ್ತಿತ್ತು. ಆದರೆ ಈಗ ಪೂರ್ಣ  ₹1 ಕೋಟಿ ಅನುದಾನವೂ ನೇರವಾಗಿ ಗ್ರಾಮ ಪಂಚಾಯಿತಿ ಖಾತೆಗೆ ಬರುತ್ತದೆ. ಇದು ಬದಲಾವಣೆ. ಮದ್ಯ ವರ್ತಿಗಳನ್ನು ಬದಿಗೆ ಸರಿಸಿ, ಆಡಳಿತ ಸರಾಗವಾಗಿ ನಡೆಯುವಂತೆ ಪ್ರಧಾನಿ ಅವರು ಮಾಡಿದ್ದಾರೆ’ ಎಂದರು.

ADVERTISEMENT

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತ ನಾಡಿ, ತೆರಿಗೆ ಸಂಗ್ರಹ, ಮೂಲ ಸೌಲಭ್ಯದ ಜತೆಗೆ ಜನರನ್ನು ತನ್ನ ಜತೆಗೆ ಸೇರಿಸಿ ಕೊಳ್ಳುವುದು ಸರ್ಕಾರದ ಕೆಲಸ ಎನ್ನು ವುದನ್ನು ಕೇಂದ್ರ ಸರ್ಕಾರ ತೋರಿಸಿ ಕೊಟ್ಟಿದೆ ಎಂದರು.

ನಗರ ಬಿಜೆಪಿ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ  ಅಧ್ಯಕ್ಷ ಮುಕುಂದ ಗೌಡ, ಸದಸ್ಯ ಹರೀಶ್ ಬಿಜತ್ರೆ, ಕೇಶವ ಗೌಡ ಬಜತ್ತೂರು, ವಿಜಯ್ ಕುಮಾರ್, ಗೋಪಾಲ ನಾಯ್ಕ್, ಅಬ್ದುಲ್ ಕುಂಞ, ಪ್ರೇಮಾ ರಂಜನ್ ದಾಸ್, ಪುರುಷೋ ತ್ತಮ ಗೌಡ ಕೋಲ್ಪೆ, ಜಯಶ್ರೀ  ಚರ್ಚೆಯಲ್ಲಿ ಪಾಲ್ಗೊಂಡರು. ಶಂಭು ಭಟ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.