ADVERTISEMENT

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಿಸಿಯೂಟ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2017, 5:49 IST
Last Updated 26 ಮೇ 2017, 5:49 IST

ಮಂಗಳೂರು: ಕೇಂದ್ರ ಸರ್ಕಾರ ಬಿಸಿಯೂಟ ಯೋಜನೆಗೆ ಕಡಿತ ಮಾಡಿ ರುವ ಅನುದಾನವನ್ನು ನೀಡುವಂತೆ ಹಾಗೂ ಬಿಸಿಯೂಟ ನೌಕರರ ಹಲ ವಾರು ಬೇಡಿಕೆಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸದ ಸ್ಯರು ಗುರುವಾರ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಬಿಸಿಯೂಟ ಯೋಜನೆಯನ್ನು ಖಾಸ ಗೀಕರಣ ಮಾಡದಂತೆ, ಶಿಕ್ಷಣ ಇಲಾಖೆ ಶಿಫಾರಸು ಮಾಡಿರುವ ₹4 ಸಾವಿರ ವೇತನವನ್ನು ಜಾರಿಗೊಳಿಸುವಂತೆ, ಬಿಸಿ ಯೂಟ ನೌಕರರನ್ನು ‘ಡಿ’ ಗ್ರೂಪ್‌ ಎಂದು ಪರಿಗಣಿಸುವಂತೆ, ಸಮಾನ ಕೆಲ ಸಕ್ಕೆ ಸಮಾನ ವೇತನ ನೀಡುವಂತೆ, ನೌಕರರನ್ನು ಶಾಲಾ ಸಿಬ್ಬಂದಿಯಾಗಿ ಪರಿಗಣಿಸುವಂತೆ, ಬೇಸಿಗೆ ರಜಾ ವೇತ ನವನ್ನು ಒದಗಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಜಾರಿಗೆ ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಮಾತನಾಡಿ, ‘ಇಂದು ಕಾರ್ಮಿಕರಿಗೆ ನೀಡುವ ಸಂಬಳದಲ್ಲಿ ಜೀವನ ಸಾಗಿಸಲು ಅಸಾಧ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ಕುರಿತು ಚಿಂತನೆ ನಡೆಸುತ್ತಿಲ್ಲ’ ಎಂದು ಆರೋಪಿಸಿದರು. 

ADVERTISEMENT

‘ಇಂದು ಸರ್ಕಾರಿ ನೌಕರರು, ಕಟ್ಟಡ ಕಾರ್ಮಿಕರು, ಕೇಂದ್ರ ನೌಕರರು, ಹಮಾಲಿ ಕಾರ್ಮಿಕರು ಒಂದಾಗಿ ಕಾರ್ಮಿ ಕ ವಿರೋಧಿ ನೀತಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ನೀತಿಯನ್ನು ಬದಲಾಯಿಸು ವುದಕ್ಕೆ ತೀವ್ರವಾದ ಹೋರಾಟವನ್ನು ನಡೆಸಲಿದ್ದೇವೆ’ ಎಂದು ಹೇಳಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಅಕ್ಷರ ದಾಸೋಹ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕೋಶಾಧಿಕಾರಿ ಭವ್ಯಾ, ಕಾರ್ಯದರ್ಶಿ ಗಿರಿಜಾ ಮೂಡು ಬಿದಿರೆ ಮತ್ತು ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.