ADVERTISEMENT

‘ಸರ್ಕಾರದಿಂದ ₹10 ಕೋಟಿ ಬಿಡುಗಡೆ’

ಲೇಡಿಗೋಶನ್ ಆಸ್ಪತ್ರೆ ಮಾರ್ಚ್‌ 23ಕ್ಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 6:47 IST
Last Updated 5 ಜನವರಿ 2017, 6:47 IST

ಮಂಗಳೂರು: ಲೇಡಿಗೋಶನ್‌ ಆಸ್ಪ ತ್ರೆಯ ನವೀಕರಣಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹10 ಕೋಟಿ ಬಿಡು ಗಡೆ ಮಾಡಿದೆ. ನವೀಕೃತ ಆಸ್ಪತ್ರೆಯ ಉದ್ಘಾಟನೆ ಮಾರ್ಚ್‌ 23 ರಂದು ಉದ್ಘಾಟನೆ ಆಗಲಿದೆ ಎಂದು ಸಂಸ ದೀಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ಹೇಳಿದರು.

ಬುಧವಾರ ನಗರದ ಲೇಡಿಗೋಶನ್‌ ಆಸ್ಪತ್ರೆಗೆ ಭೇಟಿ ನೀಡಿ, ಕಾಮಗಾರಿ ಪರಿ ಶೀಲಿಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು. ಈಗಾಗಲೇ ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಅವರು, ಆಸ್ಪತ್ರೆಯ ಉದ್ಘಾಟ ನೆಯ ದಿನಾಂಕ ನಿಗದಿಪಡಿಸಿದ್ದಾರೆ. ಕಾಮಗಾರಿಯೂ ನಿಗದಿತ ವೇಗದಲ್ಲಿ ನಡೆಯುತ್ತಿದೆ ಎಂದರು.

ಕಟ್ಟಡ ಕಾಮಗಾರಿಗೆ ಒಎನ್‌ಜಿಸಿ ಹಾಗೂ ಎಂಆರ್‌ಪಿಎಲ್‌ ವತಿಯಿಂದ ₹21.75 ಕೋಟಿ ನೀಡಲಾಗಿದೆ. ಈ ಹಣ ದಲ್ಲಿ ₹17 ಕೋಟಿ ಖರ್ಚು ಮಾಡಲಾ ಗಿದೆ. ಉಳಿದ ಕಾಮಗಾರಿಗೆ ಟೆಂಡರ್‌ ಕರೆಯಬೇಕಾಗಿದೆ. ರಾಜ್ಯ ಸರ್ಕಾರವೂ ಹೆಚ್ಚುವರಿಯಾಗಿ ₹10 ಕೋಟಿ ಅನು ದಾನ ನೀಡಿದೆ. ಒಟ್ಟಾರೆ ಲೇಡಿಗೋಶನ್‌ ಆಸ್ಪತ್ರೆಯ ಕಾಮಗಾರಿ ನಿಗದಿತ ಸಮ ಯದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಮಾರ್ಚ್‌ 23 ರಂದು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು. 

ನೋಟಿನ ಸಮಸ್ಯೆ–14 ರಂದು ಸಭೆ:  ನೋಟು ರದ್ದತಿಯ ನಂತರ ಉಂಟಾ ಗಿರುವ ಪರಿಸ್ಥಿತಿಯ ಕುರಿತು ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಸಭೆಯನ್ನು ಇದೇ 14 ರಂದು ಕರೆಯಲಾಗಿದೆ ಎಂದು ವೀರಪ್ಪ ಮೊಯಿಲಿ ಹೇಳಿದರು.

ಈ ಸಭೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕಿನ ಅಧಿಕಾರಿಗಳು ಭಾಗವಹಿಸ ಲಿದ್ದು, ₹500 ಮತ್ತು ₹1000 ಮುಖ ಬೆಲೆಯ ನೋಟುಗಳ ರದ್ದತಿಯ ಬಳಿಕ ಉಂಟಾಗಿರುವ ಸಮಸ್ಯೆಯ ಕುರಿತು ಚರ್ಚಿಸಲಾಗುವುದು ಎಂದರು. ಎತ್ತಿನಹೊಳೆ ಯೋಜನೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.