ADVERTISEMENT

‘ಸರ್ಕಾರಿ ಶಾಲೆ ಉಳಿವಿಗೆ ಖಾಸಗಿ ಸಹಭಾಗಿತ್ವ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:34 IST
Last Updated 23 ಏಪ್ರಿಲ್ 2017, 9:34 IST

ಬಂಟ್ವಾಳ: ವಿಶ್ವ ಭೂದಿನ ಆಚರಣೆ ಸಂದರ್ಭದಲ್ಲೇ ಸರ್ಕಾರಿ ಶಾಲೆಯೊಂದು ಖಾಸಗಿ ಸಹಭಾಗಿತ್ವ ಮೂಲಕ ಲೋಕಾ ರ್ಪಣೆಗೊಳ್ಳುತ್ತಿರುವುದು ಅರ್ಥಪೂರ್ಣ ವಾಗಿದ್ದು, ಆ ಮೂಲಕ ಇಲ್ಲಿನ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನಿಜವಾಗಿಯೂ ಈ ಮಣ್ಣಿನ ಋಣ ತೀರಿಸಿದೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದರು.
ತಾಲ್ಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾ ಣಗೊಂಡ ₹ 1.5ಕೋಟಿ ವೆಚ್ಚದ ನೂತನ ಕಟ್ಟಡವನ್ನು ಶನಿವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ನಾವೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿ ಜನಸೇವೆ ಮಾಡುವ ಹಂತ ತಲುಪಿ ದ್ದು, ಕೇವಲ ಸರ್ಕಾರದಿಂದ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆಯಂತೆ ಅವನತಿ ಹಂತ ದಲ್ಲಿರುವ ಸರ್ಕಾರಿ ಶಾಲೆ ಉಳಿಸುವಲ್ಲಿ ಖಾಸಗಿ ಸಹಭಾಗಿತ್ವ ಮತ್ತು  ದೇಶದೆಲ್ಲೆಡೆ ಏಕರೂಪ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಇಲ್ಲಿನ ಸಂಘಟನೆ ಸಂದೇಶವನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಕೇಂದ್ರದ ಮಾನವ ಸಂಪ ನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿಸುತ್ತೇನೆ’ ಎಂದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ, ‘ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತೀವ ಸಮಸ್ಯೆ ಎದುರಿಸುತ್ತಿದ್ದರೂ ನಾವು ಅಲ್ಲಿ ಓದಿ ಸುಶಿಕ್ಷಿತರಾಗಿದ್ದೇವೆ. ಸರ್ಕಾರಿ ಶಾಲೆ ಬಗ್ಗೆ ಮಕ್ಕಳ ಪೋಷಕರಲ್ಲಿ ಕೀಳರಿಮೆ ಸಲ್ಲದು’ ಎಂದರು.ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ‘ಈ ಶಾಲೆಗೆ ಈಗಾಗಲೇ ₹ 5ಲಕ್ಷ ಮೊತ್ತದ ಅನುದಾನ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ನೀಡುತ್ತೇನೆ’ ಎಂದರು.

ADVERTISEMENT

ಮಾಣಿಲ ಶ್ರೀಧಾಮ ಶ್ರೀ ಮೋಹ ನದಾಸ ಪರಮಹಂಸ ಸ್ವಾಮೀಜಿ ಆಶೀ ರ್ವಚನ ನೀಡಿದರು. ರಾಜಸ್ಥಾನ ವಸ್ತ್ರೋ ದ್ಯಮಿ ಮೋಹನ್ ಚೌಧರಿ ಅನಿಸಿಕೆ ವ್ಯಕ್ತ ಪಡಿಸಿದರು.   ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌,  ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ತುಂಗಪ್ಪ ಬಂಗೇರ, ಉದ್ಯಮಿ ಬಶೀರ್ ಅಹ ಮ್ಮದ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಕ್ಷೇತ್ರ ಶಿಕ್ಷಣಾ ಧಿಕಾರಿ ಸಿ. ಲೋಕೇಶ್, ಸ್ಥಾಪಕ ಶಿಕ್ಷಕ ಸಂಜೀವ ಗೌಡ ಶುಭ ಹಾರೈಸಿದರು.

ಇದೇ ವೇಳೆ ಸಂಘದ ಅಧ್ಯಕ್ಷ ಪ್ರಕಾಶ ಅಂಚನ್ ಇವರನ್ನು ಸನ್ಮಾನಿಸಲಾಯಿತು.ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್, ಕೆನರಾ ಬ್ಯಾಂಕಿನ ಪ್ರಬಂಧಕ ಮನೋಹರ ನಾಯಕ್ ಇದ್ದರು. ಸದಸ್ಯ ಪುರುಷೋ ತ್ತಮ ಅಂಚನ್ ವಂದಿಸಿದರು. ಬೃಹತ್ ವಾಹನ ಜಾಥಾ ಆರಂಭ ದಲ್ಲಿ 'ಏಕರೂಪ ಶಿಕ್ಷಣ ಪದ್ದತಿ ಜಾರಿ ಗೊಳಿಸುವುದಕ್ಕಾಗಿ ಒಂದೇ ದೇಶ, ಒಂದೇ ಶಿಕ್ಷಣ' ಎಂಬ ಘೋಷಣೆ ಯೊಂದಿಗೆ ಬಿ.ಸಿ.ರೋಡ್‌ನ ಕೈಕಂಬ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಬೃಹತ್ ವಾಹನ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.