ADVERTISEMENT

ಹೆದ್ದಾರಿ ತಡೆದು ಪೊಲೀಸರ ವಿರುದ್ಧ ಪ್ರತಿಭಟನೆ

ಗಾಯಾಳುಗಳನ್ನು ರಸ್ತೆಯಲ್ಲೇ ಬಿಟ್ಟುಹೋದ ಆರೋಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:48 IST
Last Updated 8 ಫೆಬ್ರುವರಿ 2017, 6:48 IST

ಮಂಗಳೂರು: ಆಸ್ತಿ ವಿವಾದಕ್ಕೆ ಸಂಬಂ ಧಿಸಿದ ಕೌಟುಂಬಿಕ ಕಲಹದಲ್ಲಿ ಗಾಯ ಗೊಂಡಿದ್ದ ಒಂದು ಕುಟುಂಬದ ಸದಸ್ಯ ರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ವಾಹನದಿಂದ ಇಳಿಸಿಹೋದ ಆರೋಪ ಇಲ್ಲಿನ ಪಣಂಬೂರು ಠಾಣೆ ಪೊಲೀಸರ ಮೇಲೆ ಕೇಳಿಬಂದಿದೆ.

ಮಂಗಳವಾರ ಬೆಳಿಗ್ಗೆ ನಗರದ ಕೂಳೂರು ಅಯ್ಯಪ್ಪಸ್ವಾಮಿ ದೇವಸ್ಥಾ ನದ ಬಳಿ ರಸ್ತೆಯ ಮೇಲೆ ಕುಳಿತು ಗಾಯಾಳುಗಳು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಡಿವೈಎಫ್‌ಐ ಕಾರ್ಯಕರ್ತರು ಮತ್ತು ಸಾರ್ವಜನಿಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಪಣಂಬೂರು ಠಾಣೆ ವ್ಯಾಪ್ತಿಯ ಬೆಂಗರೆ ನಿವಾಸಿಗಳಾದ ಮಹಮ್ಮೂದ್‌ ಮತ್ತು ಅನ್ವರ್‌ ಹುಸೇನ್‌ ಕುಟುಂಬದ ನಡುವೆ ಆಸ್ತಿ ವಿವಾದವಿದೆ. ಇದೇ ವಿಚಾ ರದಲ್ಲಿ ಕಳೆದ ವಾರ ಇಬ್ಬರ ಕುಟುಂಬ ಗಳ ನಡುವೆ ಘರ್ಷಣೆ ನಡೆದಿತ್ತು. ಪರಸ್ಪ ರರ ವಿರುದ್ಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘರ್ಷಣೆ ನಡೆದ ದಿನದಿಂದ ಮನೆ ತೊರೆದಿದ್ದ ಮಹಮ್ಮೂದ್‌ ಕುಟುಂಬ ಮಂಗಳವಾರ ಬೆಳಿಗ್ಗೆ ವಾಪಸಾಗಿತ್ತು. ಆಗ ಅನ್ವರ್‌ ಹುಸೇನ್‌ ಕುಟುಂಬದವರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.

ಮಹಮ್ಮೂದ್‌, ಅವರ ಪತ್ನಿ ಫಮೀನಾ, ಮಕ್ಕಳಾದ ಸಲ್ಮಾನ್‌ ಫಾರಿಶ್‌ ಮತ್ತು ಸಮ್ನಾನ ಬೆಳಿಗ್ಗೆ 9 ಗಂಟೆ ಸುಮಾ ರಿಗೆ ನಡೆದ ಈ ಘಟನೆಯಲ್ಲಿ ಗಾಯ ಗೊಂಡಿದ್ದರು. ಸಮ್ನಾನ ಪೊಲೀಸರಿಗೆ ಕರೆ ಮಾಡಿದ್ದರು.10 ಗಂಟೆಗೆ ಪೊಲೀಸ್ ಗಸ್ತು ವಾಹನ ಅವರ ಮನೆಗೆ ತಲುಪಿತ್ತು. ಪೊಲೀಸರು ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಕರೆತಂದಿದ್ದರು. ಕೂಳೂ ರು ಸೇತುವೆ ಬಳಿ ಗಾಯಾಳುಗಳು ಕೆಳಕ್ಕೆ ಇಳಿದಿದ್ದಾರೆ. ಅಲ್ಲಿಂದ ಪೊಲೀಸ್ ಗಸ್ತು ವಾಹನ ವಾಪಸ್‌ ಠಾಣೆಗೆ ಹೋಗಿದೆ.

ನಂತರ ಗಾಯಾಳುಗಳು ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ಆರಂಭಿಸಿ ದ್ದಾರೆ. ಸಾರ್ವಜನಿಕರು ಮತ್ತು ಡಿವೈಎ ಫ್‌ಐ ಕಾರ್ಯಕರ್ತರು ಅವರನ್ನು ಬೆಂಬ ಲಿಸಿ ರಸ್ತೆ ತಡೆ ಆರಂಭಿಸಿದರು.

‘ಎ.ಜೆ. ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿ ನಮ್ಮನ್ನು ವಾಹನದಲ್ಲಿ ಕರೆತಂದರು. ದಾರಿಯಲ್ಲಿ ಬರುವಾಗ ಹಿರಿಯ ಅಧಿಕಾ ರಿಗಳಿಗೆ ಮಾಹಿತಿ ನೀಡಲಾಗಿದೆ. ನಂತರ ನಮ್ಮನ್ನು ನಡು ರಸ್ತೆಯಲ್ಲೇ ವಾಹನ ದಿಂದ ಇಳಿಸಿದ ಪೊಲೀಸರು, ರಿಕ್ಷಾದಲ್ಲಿ ಆಸ್ಪತ್ರೆಗೆ ಹೋಗಿ ಎಂದಿದ್ದಾರೆ’ ಎಂಬು ದಾಗಿ ಮಹಮ್ಮೂದ್‌ ಆರೋಪಿಸಿದರು.

ವಿಷಯ ತಿಳಿಯುತ್ತಿದ್ದಂತೆ ಪಣಂ ಬೂರು ಮತ್ತು ಕಾವೂರು ಠಾಣೆ ಪೊಲೀ ಸರು ಸ್ಥಳಕ್ಕೆ ಬಂದರು. ಗಾಯಾಳುಗಳನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಮಹಾನಗರ ಪಾಲಿಕೆ ಸದಸ್ಯ ಬಿ.ದಯಾ ನಂದ ಶೆಟ್ಟಿ, ಡಿವೈಎಫ್‌ಐ ಮುಖಂಡ ಬಿ.ಕೆ.ಇಮ್ತಿಯಾಜ್‌, ನೌಶಾದ್‌ ಮತ್ತಿತ ರರೂ ಮನವೊಲಿಕೆಯಲ್ಲಿ ಭಾಗವಹಿ ಸಿದರು. ಅರ್ಧ ಗಂಟೆ ಪ್ರತಿಭಟನೆ ಬಳಿಕ ಅವರನ್ನು ಮನವೊಲಿಸಿ ವೆನ್ಲಾಕ್‌ ಆಸ್ಪತ್ರೆಗೆ ಕಳುಹಿಸಲಾಯಿತು.

ಆರೋಪ ನಿರಾಕರಣೆ: ಗಾಯಾಳು ಗಳು ಮಾಡಿರುವ ಆರೋಪವನ್ನು ನಿರಾ ಕರಿಸಿದ ಪಣಂಬೂರು ಠಾಣೆ ಸಬ್‌ ಇನ್‌ ಸ್ಪೆಕ್ಟರ್‌, ‘ಸಿವಿಲ್‌ ವ್ಯಾಜ್ಯಕ್ಕೆ ಸಂಬಂಧಿಸಿ ದಂತೆ ಹಲ್ಲೆ ನಡೆದಿದೆ. ಬೆಂಗರೆಯಲ್ಲಿ ಆಟೊ ರಿಕ್ಷಾ ಸಿಗಲಿಲ್ಲ ಎಂಬ ಕಾರಣಕ್ಕೆ ಪೊಲೀಸ್‌ ವಾಹನದಲ್ಲಿ ಅವರನ್ನು ಕರೆತ ರಲಾಗಿತ್ತು. ಗಾಯಾಳುಗಳ ಕೋರಿಕೆ ಯಂತೆ ಅವರನ್ನು ಕೂಳೂರು ಸೇತುವೆ ಬಳಿ ಇಳಿಸಲಾಗಿತ್ತು. ಆ ನಂತರ ಅವರು ಆರೋಪ ಮಾಡಿದ್ದಾರೆ. ಪೊಲೀಸರು ಯಾವುದೇ ರೀತಿಯ ತಪ್ಪು ಮಾಡಿಲ್ಲ’ ಎಂದರು.

ಪ್ರಕರಣ ದಾಖಲು
ಮಹಮ್ಮೂದ್‌, ಫಮೀನಾ, ಸಲ್ಮಾನ್‌ ಫಾರಿಶ್‌ ಮತ್ತು ಸಮ್ನಾನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅವರ ಸಂಬಂಧಿಕರಾದ ಅನ್ವರ್‌ ಹುಸೇನ್, ಹಂಝ, ಶಮೀಮಾ, ಸಮೀರ್‌ ಮತ್ತು ಮುಮ್ತಾಜ್‌ ಎಂಬುವವರ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.