ADVERTISEMENT

₹1.07 ಕೋಟಿ ಬಿಡುಗಡೆ: ಶಾಸಕ ಎಸ್.ಅಂಗಾರ

ರಸ್ತೆ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 6:53 IST
Last Updated 24 ಜುಲೈ 2017, 6:53 IST

ಉಪ್ಪಿನಂಗಡಿ: ಉದನೆಯಿಂದ ಶಿಬಾಜೆಗೆ ಸಂಪರ್ಕ ಕಲ್ಪಿಸುವ 1 ಕಿಲೋ ಮೀಟರ್ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ವಿಸ್ತರಣೆ, ಡಾಂಬರೀಕರಣ ಹಾಗೂ ಕಾಂಕ್ರಿಟೀ ಕರಣ ಕಾಮಗಾರಿಗೆ ಕಳಪ್ಪಾರಿನಲ್ಲಿ ಶನಿವಾರ ಭೂಮಿಪೂಜೆ ನಡೆಯಿತು.

ಭೂಮಿಪೂಜೆ ನೆರವೇರಿಸಿ ಮಾತ ನಾಡಿದ ಶಾಸಕ ಎಸ್. ಅಂಗಾರ ಮಾತನಾಡಿ, ‘ಉದನೆ-ಶಿಬಾಜೆ ರಸ್ತೆ ಡಾಂಬರೀಕರಣ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಈ ಹಿಂದೆ  ಪ್ರಸ್ತಾವನೆ ಸಲ್ಲಿಸಿದ್ದರೂ ಮಂಜೂ ರಾತಿ ಸಿಗಲಿಲ್ಲ. ಉದನೆಯಿಂದ 1.9 ಕಿ.ಮೀ. ತನಕ ರಸ್ತೆ ವಿಸ್ತರಣೆಗೆ ನಬಾ ರ್ಡ್‌ಗೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂ ರಾತಿಯ ಹಂತದಲ್ಲಿದೆ.

1.9 ರಿಂದ 2.9 ಕಿ.ಮೀ.ತನಕ ರಸ್ತೆ ಅಭಿವೃದ್ಧಿಗೆ ಯೋಜ ನೆಯಡಿ ₹1.07 ಕೋಟಿ ಬಿಡುಗಡೆ ಗೊಂಡಿದ್ದು, ಈ ಪೈಕಿ 300 ಮೀಟರ್ ಕಾಂಕ್ರಿಟೀಕರಣ ಹಾಗೂ 700 ಮೀಟರ್ ಡಾಂಬರೀಕರಣ ಕಾಮಗಾರಿ ನಡೆಯಲಿದೆ’ ಎಂದರು.

ADVERTISEMENT

ಮುಂದಿನ ಸಾಲಿನಲ್ಲಿ ಸದ್ರಿ ರಸ್ತೆಯಲ್ಲಿ ಮತ್ತೆ 2 ಕಿಮೀ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಹಂತ ಹಂತವಾಗಿ ಉದನೆ-ಶಿಬಾಜೆ ರಸ್ತೆ ಪೂರ್ಣವಾಗಿ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿ ಗುಣ ಮಟ್ಟ ಕಾಯ್ದುಕೊಳ್ಳುವಲ್ಲಿ ಗ್ರಾಮಸ್ಥರ ಜವಾಬ್ದಾರಿಯೂ ಇದ್ದು, ರಸ್ತೆ ವಿಸ್ತರಣೆಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಹೇಳಿದರು.

ಶಿರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಯ್ಯ ಗೌಡ, ಉಪಾಧ್ಯಕ್ಷೆ ಬಿಂದು ಶಶಿಧರ್, ಸದಸ್ಯರಾದ ಪ್ರಕಾಶ್ ಗುಂಡ್ಯ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯ ದರ್ಶಿ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಎಪಿ ಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣ ಜಾಲು, ಪಿಎಲ್‌ಡಿ  ಬ್ಯಾಂಕ್ ಕೋಶಾಧಿ ಕಾರಿ ಭಾಸ್ಕರ ಗೌಡ ಇಚ್ಲಂಪಾಡಿ, ಮಲೆ ನಾಡು ಜನ ಹಿತರಕ್ಷಣಾ ವೇದಿಕೆ ಸಂಚಾ ಲಕ ಕಿಶೋರ್ ಶಿರಾಡಿ, ಶಿರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸೆಬಾಸ್ಟಿನ್ ಇದ್ದರು. ಡೊಂಬಯ್ಯ ಗೌಡ ಸ್ವಾಗತಿಸಿ, ಸನ್ನಿ ವಂದಿಸಿದರು. ರಾಜೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.