ADVERTISEMENT

13 ಕೆ.ಜಿ. ಗಾಂಜಾ ಸಹಿತ ವಾಹನ ವಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 6:17 IST
Last Updated 31 ಡಿಸೆಂಬರ್ 2016, 6:17 IST

ವಿಟ್ಲ: ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಪ್ರಮುಖ ಇಬ್ಬರು ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ವಿಟ್ಲ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿ ಸುಮಾರು 13 ಕೆ.ಜಿ. ಗಾಂಜಾ ಸಹಿತ ವಾಹನವನ್ನು ವಶಕ್ಕೆ ಪಡೆದ ಘಟನೆ ಉಕ್ಕುಡ ಕನ್ಯಾನ ರಸ್ತೆಯ ಕಾಂತಡ್ಕ ಎಂಬಲ್ಲಿ ಶುಕ್ರವಾರ ನಡೆದಿದೆ.

ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಶಾಫಿ ಯಾನೆ ಖಲಂದರ್ ಶಾಫಿ (22), ಉತ್ತರ ಪ್ರದೇಶ ಬಸೊಳ್ಳಿ ಸೆದೆ ಪುರ ಗ್ರಾಮದ ಕಲ್ಲುರು ನಿವಾಸಿ ಅರ್ಮಾನ್ ಸಿಂಗರ್ (25) ಬಂಧಿತ ಆರೋಪಿಗಳು.

ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ಸಂದರ್ಭ ಬೈರಿಕಟ್ಟೆ ಉಕ್ಕುಡ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೂಲಕ ಅತಿ ವೇಗದಲ್ಲಿ ಬಂದ ದ್ವಿಚಕ್ರ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಮುಂಭಾಗದಿಂದ ಬಂಟ್ವಾಳ ಪೊಲೀಸ್ ಇನ್ ಸ್ಪೆಕ್ಟರ್  ಹಾಗೂ ವಿಟ್ಲ ವಿಟ್ಲ ಎಸೈ ತಂಡ ಸುತ್ತುವರಿದು ದ್ವಿಚಕ್ರವನ್ನು ಹಿಡಿದಿದ್ದಾರೆ.

ಸವಾರ ಖಲಂದರ್ ಶಾಫಿಯನ್ನು ವಿಚಾರಿಸಿ ವಾಹನ ಪರಿಶೀಲನೆ ನಡೆಸಿದ ಸಂದರ್ಭ ಬ್ಯಾಗಿನಲ್ಲಿ ಸುಮಾರು 13 ಕೆಜಿ ಗಾಂಜಾ ಪತ್ತೆಯಾಗಿದೆ. ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿದ ಸಂದರ್ಭ ಕನ್ಯಾನ ಪೇಟೆ, ಮಿತ್ತನಡ್ಕ, ವಿಟ್ಲ ಪೇಟೆ, ಒಕ್ಕೆತ್ತೂರು, ಕಡಂಬು, ಕಬಕದ ಅಂಗಡಿಗಳಲ್ಲಿ ಹಾಗೂ ಶಾಲಾ ಕಾಲೇಜು ವಠಾರದಲ್ಲಿ ವಿತರಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ.

ಶಾಫಿ ಜತೆಗೆ ಹಲವು ಮಂದಿ ಸಂಪರ್ಕದಲ್ಲಿದ್ದು, ಅವರಿಗೆ ಬೇಕಾದ ಬೇಡಿಕೆಯ ರೀತಿಯಲ್ಲಿ ಪೂರೈಕೆ ಮಾಡು ತ್ತಿದ್ದ. ಉಪ್ಪಳ, ಪೆರ್ಮುದೆ, ಪೈವಳಿಕೆ ಪರಿಸರದ ಯುವಕರು ಈತನಿಗೆ ವಿತರಣೆ ಮಾಡಲು ಗಾಂಜಾ ವಿತರಿಸುತ್ತಿದ್ದರು ಎಂಬ  ಮಾಹಿತಿಯನ್ನು ಪೊಲೀಸರ ಬಳಿ ತಿಳಿಸಿದ್ದಾನೆ. ಈ ಮಾಹಿತಿ ಹಿನ್ನೆಲೆಯಲ್ಲಿ ಕನ್ಯಾನದ ಸೆಲೂನ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್ ಸಿಂಗರ್‌ನನ್ನು ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಎಸ್‌ಪಿ ಭೂಷಣ್ ಜಿ ಬೊರಸೆ, ಹೆಚ್ಚುವರಿ ಎಸ್‌ಪಿ ಡಾ. ವೇದಮೂರ್ತಿ ಅವರ ಮಾರ್ಗದರ್ಶ ನದಲ್ಲಿ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಅರ್. ರವೀಶ್ ಅವರ ನೇತೃತ್ವದ ತಂಡ ಬಂಟ್ವಾಳ ಪೊಲೀಸ್ ಇನ್‌ಸ್ಪೆಕ್ಟರ್ ಮಂಜಯ್ಯ, ಬಿ.ಕೆ, ವಿಟ್ಲ ಎಸ್‌ಐ ನಾಗರಾಜ್ ಎಚ್., ಸಿಬ್ಬಂದಿ ರುಕ್ಮಯ್ಯ, ಸಿಬ್ಬಂದಿ ಬಾಲಕೃಷ್ಣ, ಹರಿಶ್ಚಂದ್ರ, ರಾಮಚಂದ್ರ, ಪ್ರವೀಣ್ ರೈ, ಭವಿತ್  ರೈ, ರಮೇಶ್, ತಂಡದ ಚಾಲಕರಾದ ಸೀತಾ ರಾಮ ಗೌಡ, ಉದಯ ಗೌಡ, ಚಾಲಕ ರಾದ ಸತ್ಯಪ್ರಕಾಶ್, ವಿಜಯೇಶ್ವರ್ ಭಾಗವಹಿಸಿದ್ದರು.

ಕನ್ಯಾನ ಪೇಟೆಯಲ್ಲಿ 2014 ಜೂ.15ರ ರಾತ್ರಿ ಹಿಂದೂ ಸಂಘಟನೆಯ ಪಿಲಿಂಗುಳಿ ಸತೀಶ ಶೆಟ್ಟಿ ಕನ್ಯಾನ ಪೇಟೆಯಲ್ಲಿ ವ್ಯಾಪಾರಿಯೊಬ್ಬರಲ್ಲಿ ಮಾತನಾಡುತ್ತಿದ್ದಾಗ ತಲವಾರು ಬೀಸಿ ಕೊಲೆ ಯತ್ನಿಸಿದ ಘಟನೆಯಲ್ಲಿ ಶಾಫಿ ಪ್ರಮುಖ ಆರೋಪಿಯಾಗಿದ್ದು, ಬಂಧನ ಕ್ಕೊಳಗಾಗಿ ಜಾಮೀನಿನ ಮೇಲೆ ಹೊರ ಗಡೆಗೊಂಡಿದ್ದ. ಇಬ್ಬರು ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರುಪ ಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.