ADVERTISEMENT

21ರಿಂದ ಗೋವಿಂದ ಕಲಾಭಾವಾರ್ಪಣಂ

​ಪ್ರಜಾವಾಣಿ ವಾರ್ತೆ
Published 18 ಮೇ 2017, 5:49 IST
Last Updated 18 ಮೇ 2017, 5:49 IST

ಬೆಳ್ತಂಗಡಿ: ಸಾಂಪ್ರದಾಯಿಕ ಕಲಾವಿದ ಕೆ.ಗೋವಿಂದ ಭಟ್ಟರು ತನ್ನ ದೀರ್ಘ ಕಲಾಜೀವನಕ್ಕೆ ವಿವಿಧ ಹಂತಗಳಲ್ಲಿ ಆಶ್ರಯ, ಪೋಷಣೆಯಿತ್ತವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಗೋವಿಂದ ಕಲಾಭಾವಾರ್ಪಣಂ ಕಾರ್ಯಕ್ರಮ ಇದೇ 21 ಮತ್ತು 22ರಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನ ವಠಾರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜನ ಸಮಿತಿ ಸಂಚಾಲಕ ಉಜಿರೆ ಅಶೋಕ ಭಟ್ ತಿಳಿಸಿದರು.

ಬೆಳ್ತಂಗಡಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೇ 21ರಂದು ನಡೆಯುವ ಕಲಾಜೀವನ ಗೌರವ ಕಾರ್ಯಕ್ರಮದ ಉದ್ಘಾಟ ನೆಯನ್ನು ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಹಾಗೂ ದೀಪೋಜ್ವಲನ ಕಾರ್ಯವನ್ನು ಸುಪ್ರಿಯಾ ಹರ್ಷೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಜ್ಯೋತಿಷಿ, ವೈದಿಕ ವಿದ್ವಾಂಸ ಪಂಜ ಭಾಸ್ಕರ ಭಟ್ ಉಪಸ್ಥಿತರಿರುತ್ತಾರೆ.

ಸಂಜೆ 5 ಗಂಟೆಗೆ ಗೋವಿಂದ ಕಲಾಧರ್ಮ ಗೌರವ ಕಾರ್ಯಕ್ರಮದಲ್ಲಿ ಎಡನೀರು ಕೇಶವಾನಂದ ಭಾರತೀ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಂ ಭಟ್ ಮತ್ತು ಸುಮನಾ ಶಾಮ್ ಭಟ್ ಗೌರವ ಸ್ವೀಕರಿಸಲಿದ್ದಾರೆ.

ADVERTISEMENT

ಇದೇ 22ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ‘ಗೋವಿಂದಭಟ್ಟರ ಪಾತ್ರ ನಿರ್ವಹಣೆಯಲ್ಲಿ ಆವಿಷ್ಕಾರಿಕ ಆಯಾಮಗಳು’ ವಿಷಯ ಕುರಿತ ಗೋಷ್ಠಿಗೆ ಹಾದಿಗಲ್ಲು ಹಾದಿಗಲ್ಲು ಲಕ್ಷ್ಮೀ ನಾರಾಯಣ ಅವರು ಉದ್ಘಾಟಿ ಸಲಿದ್ದಾರೆ. ತೀರ್ಥಹಳ್ಳಿಯ ವೈದ್ಯ ಡಾ. ಜೀವಂದರ ಜೈನ್ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಹೊಸ್ತೋಟ ಮಂಜು ನಾಥ ಭಾಗವತರು ವಹಿಸಲಿದ್ದಾರೆ. ವಿದ್ವಾಂಸರಾದ ಡಾ. ಪ್ರಭಾಕರ ಜೋಷಿ, ಪ್ರೊ.ಎಂ.ಎಲ್. ಸಾಮಗ, ಜಿ.ಎಸ್.ಭಟ್ ಸಾಗರ, ಡಾ. ಚಂದ್ರಶೇಖರ ದಾಮ್ಲೆ, ಡಾ. ಪ್ರಭಾಕರ ಶಿಶಿಲ, ಕಬ್ಬಿನಾಲೆ ವಸಂತ

ಸಂಜೆ 5.45ಕ್ಕೆ ನಡೆಯುವ ಗೋವಿಂದ ಕಲಾಭಾವಾರ್ಪಣಂ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ಹೇಮಾವತಿ ವಿ ಹೆಗ್ಗಡೆ ಉಪಸ್ಥಿತರಿದ್ದು , ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ಕಲಾಜೀವನ ನಮನ ಹೇಳಲಿದ್ದಾರೆ. ಬಳಿಕ ರಾತ್ರಿ ಗೋವಿಂದ ಕಲಾ ಸೇವಾ ರ್ಪಣಂನಲ್ಲಿ ಧರ್ಮಸ್ಥಳ ಮಂಜು ನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಮಹಾಕಲಿ ಮಗಧೇಂದ್ರ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

ಸಮಿತಿ ಗೌರವಾಧ್ಯಕ್ಷ ಯು. ವಿಜಯರಾಘವ ಪಡ್ವೆಟ್ನಾಯ, ಅಧ್ಯಕ್ಷ ಬಿ. ಭುಜಬಲಿ ಧರ್ಮಸ್ಥಳ, ಉಪಾಧ್ಯಕ್ಷ ಸುರೇಶ ಕುದ್ರೆಂತಾಯ ಇದ್ದರು.

**

ಗೌರವ
ಕಾರ್ಯಕ್ರಮದಲ್ಲಿ ಗೋವಿಂದ ಭಟ್ಟರು, ಧರ್ಮಾಧಿಕಾರಿ ಡಾ. ಹೆಗ್ಗಡೆ ದಂಪತಿಗೆ ಕಲಾಭಾವಾರ್ಪಣಂ ಗೌರವ, ಡಿ.ಹರ್ಷೇಂದ್ರ ಕುಮಾರ್ ದಂಪತಿಗೆ ಕಲಾಜೀವನ ಗೌರವ , ಟಿ.ಶ್ಯಾಂಭಟ್ ದಂಪತಿಗೆ ಕಲಾಧರ್ಮ ಗೌರವವನ್ನು ಅರ್ಪಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.