ADVERTISEMENT

ಆಳ್ವಾಸ್ ಪ್ರಗತಿ'ಬೃಹತ್ ಉದ್ಯೋಗ ಮೇಳ ಇಂದಿನಿಂದ

ಉದ್ಯೋಕಾಂಕ್ಷಿಗಳಿಗೆ ಜುಲೈ 5ರಿಂದ ಸಂಸ್ಥೆಯು ವಸತಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 9:52 IST
Last Updated 5 ಜುಲೈ 2018, 9:52 IST

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಜುಲೈ 6 ಹಾಗೂ 7ರಂದು `ಆಳ್ವಾಸ್ ಪ್ರಗತಿ 2018'-10ನೇ ವರ್ಷದ ಬೃಹತ್ ಉದ್ಯೋಗ ಮೇಳವು ಕಾಲೇಜಿನ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.

‘600 ಹೆಸರಾಂತ ಕಂಪೆನಿಗಳು ಭಾಗವಹಿಸಲಿದ್ದು, 2 ಸಾವಿರಕ್ಕೂ ಅಧಿಕ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 12 ಸಾವಿರ ಅಭ್ಯರ್ಥಿಗಳು ಪ್ರಗತಿ ಮೇಳದಲ್ಲಿ ಭಾಗಹಿಸುವ ನಿರೀಕ್ಷೆಯಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಯೋಗ ಮೇಳವನ್ನು ಉದ್ಘಾಟಿಸುವರುರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಕೆ. ಅಮರನಾಥ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು. ಸಮಾರಂಭದಲ್ಲಿ ಐಟಿಸಿ ಲಿಮಿಟೆಡ್‌ನ ಸೀನಿಯರ್ ಮ್ಯಾನೇಜರ್ ಎಚ್ಆರ್ ಶ್ರೀನಿವಾಸ ರೈ, ಎಂಫಸಿಸ್ ಕಂಪನಿಯ ಸೀನಿಯರ್ ಮ್ಯಾನೇಜರ್ ಎಚ್ಆರ್ ವಿದ್ಯಾರಣ್ಯ ಕೊಲ್ಲಿಪಾಲ್, ಯುಎಇ ಎಕ್ಸ್‌ಚೇಂಜ್‌ನ ಎಚ್ಆರ್ ಗಣೇಶ್ ಮೂಡುಬಿದಿರೆ ಅವರನ್ನು ಸನ್ಮಾನಿಸಲಾಗುವುದು ಎಂದರು.

ADVERTISEMENT

ವಿಪುಲ ಉದ್ಯೋಗಾವಕಾಶ ನೀಡುವ ಕ್ಷೇತ್ರಗಳಾದ ಕ್ಷೇತ್ರಗಳಾದ ಐಟಿ, ಐಟಿಈಎಸ್, ಮ್ಯಾನುಫ್ಯಾಕ್ಚರಿಂಗ್, ಸೇಲ್ಸ್ ಹಾಗೂ ರಿಟೇಲ್ಸ್, ಬ್ಯಾಂಕಿಂಗ್ ಹಾಗೂ ಫಿನಾನ್ಸ್, ಹಾಸ್ಪಿಟಾಲಿಟಿ, ಎನ್‌ಜಿಒ ಹಾಗೂ ಶಿಕ್ಷಣ ಕ್ಷೇತ್ರದ ಪ್ರತಿಷ್ಠಿತ ಕಂಪನಿಗಳು ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುತ್ತಿವೆ. ಈ ಮೂಲಕ ಪದವಿ ಹಾಗೂ ಸ್ನಾತ್ತಕೋತ್ತರ ಪದವಿಯ ವಿವಿಧ ಕ್ಷೇತ್ರಗಳಾದ ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲೆ, ವಾಣಿಜ್ಯ, ಮ್ಯಾನೇಜ್‌ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಹಾಗೂ ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅವರ ಕೌಶಲ ಹಾಗೂ ಅರ್ಹತೆಗನುಗುಣವಾಗಿ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದು ಡಾ.ಎಂ ಮೋಹನ ಆಳ್ವ ಬುಧವಾರ ಮಾಹಿತಿ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಪ್ಲೇಸ್‌ಮೆಂಟ್ ಅಧಿಕಾರಿ ಸುಶಾಂತ್ ಅನಿಲ್ ಲೋಬೊ, ಆಳ್ವಾಸ್ ಪಿಆರ್‌ಒ ಡಾ.ಪದ್ಮನಾಭ ಶೆಣೈ, ಆಳ್ವಾಸ್ ಪ್ರಗತಿ ಮಾಧ್ಯಮ ಸಂಯೋಜಕ ಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆಯು ಜುಲೈ 6ರರವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ. ಎರಡನೇ ದಿನ ಶಾಟರ್್ಲಿಸ್ಟ್ ಆದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ದೂರದ ಊರುಗಳಿಂದ ಆಗಮಿಸುವ ಉದ್ಯೋಕಾಂಕ್ಷಿಗಳಿಗೆ ಜುಲೈ 5ರಿಂದ ಸಂಸ್ಥೆಯು ವಸತಿ ಸೌಲಭ್ಯವನ್ನು ಕಲ್ಪಿಸುತ್ತಿದೆ.

ಅಪೋಲೋ ಹಾಸ್ಪಿಟಲ್ಸ್, ವೋಕ್ಹಾರ್ಡ್‌, ಐಫನ್‌ಗ್ಲೋಬಲ್ ಫಾರ್ ಮೇದಾಂತ್- ದಿ ಮೆಡಿಸಿಟಿ, ಕೆಎಮ್ಸಿ ಹಾಸ್ಪಿಟಲ್ಗಳಲ್ಲಿ 300 ಕ್ಕೂ ಹೆಚ್ಚು ಅವಕಾಶಗಳಿದ್ದು, ಬಿಎಸ್‌ಸಿ,ಜಿಎನ್ಎಂ ನರ್ಸ್‌ಗಳನ್ನು ನಿರೀಕ್ಷಿಸಲಾಗುತ್ತಿದೆ. ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರದ ಕಂಪನಿಗಳಿಂದ ಪದವಿ ಹಾಗೂ ಸ್ನಾತ್ತಕೋತ್ತರ ಪದವೀಧರರಿಗೆ 1200ಕ್ಕೂ ಹೆಚ್ಚಿನ ಉದ್ಯೋಗಾವಕಾಶಗಳಿದ್ದು ಎಂಬಿಎ ಹಾಗೂ ಎಂಕಾಂ ಪದವೀಧರರನ್ನು ಎದುರು ನೋಡುತ್ತಿವೆ. ಐಟಿಐ ವಿದ್ಯಾರ್ಥಿಗಳಿಗೆ 450 ಕ್ಕೂ ಹೆಚ್ಚಿನ ಉದ್ಯೋಗವಕಾಶ. ಟರ್ನರ‍್ಸ್‌ ಫಿಟ್ಟರ್ಸ್, ಹಾಗೂ ವೆಲ್ಡರ್ಸ್ಗಳಿಗೆ ಪ್ರತಿಷ್ಠಿತ ಕಂಪೆನಿಗಳಿಂದ ಉದ್ಯೋಗಾವಕಾಶ. ಮೆಕ್ಯಾನಿಕಲ್ ಹಾಗೂ ಆಟೋಮೋಬೈಲ್ ಪದವಿಧರರಿಗೆ 250ಕ್ಕೂ ಅವಕಾಶಗಳಿದ್ದು ಅಪ್ರೆಂಟೀಸ್‌ಶಿಪ್‌ಗೆ ಅವಕಾಶ ನೀಡಲಾಗುತ್ತಿದೆ ಎಂದರು.

ಅರ್ಹ ವಿದ್ಯಾರ್ಥಿಗಳು ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳನ್ನು ತಲುಪಬೇಕೆನ್ನುವುದು ಆಳ್ವಾಸ್ ಪ್ರಗತಿಯ ಮುಖ್ಯ ಉದ್ದೇಶ. ಇದಕ್ಕಾಗಿ ವೆಬ್ಸೈಟ್ನ್ನು ಸಿದ್ಧಪಡಿಸಲಾಗಿದ್ದು, ನಿರಂತರ ಮಾಹಿತಿ ನೀಡಲಾಗುತ್ತಿದೆ. ಆಳ್ವಾಸ್ ಪ್ರಗತಿಯ ಹೊಸ ಬೆಳವಣಿಗೆಗಳನ್ನು ಈ ಮೂಲಕ ಅಪ್ಡೇಟ್ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಐಟಿಐ, ಪಿಯುಸಿ, ಎಸ್ಎಸ್ಎಲ್ಸಿ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಉದ್ಯೋಕಾಂಕ್ಷಿಗಳಿಗೆ ಆನ್ಲೈನ್ ನೊಂದಾವಣೆ ಕಡ್ಡಾಯ ಎಂದರು.

ಮಾಹಿತಿಗಾಗಿ 9611686148, 9663190590, ಅಭ್ಯರ್ಥಿಗಳ ನೋಂದಣಿಗಾಗಿ www.alvaspragati.com ಸಂಪರ್ಕಿಸಲು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.