ADVERTISEMENT

‘ಸಿಬ್ಬಂದಿ ಕಾರ್ಯಕ್ಷಮತೆಗೆ ಸೌಕರ್ಯ ಅಗತ್ಯ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 5:15 IST
Last Updated 3 ಫೆಬ್ರುವರಿ 2017, 5:15 IST

ಹರಿಹರ: ಲಕ್ಷಾಂತರ ಪ್ರಯಾಣಿಕರ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಮೂಲಸೌಕರ್ಯ ನೀಡುವುದರಿಂದ ಸಿಬ್ಬಂದಿಯ ಕಾರ್ಯಕ್ಷಮತೆ ವೃದ್ಧಿಯಾ ಗುತ್ತದೆ ಎಂದು ಶಾಸಕ ಎಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.

ನಗರದ ಕೆಎಸ್ಆರ್‌ಟಿಸಿ ಡಿಪೊ ಆವರಣದಲ್ಲಿ ಸೋಮವಾರ ಚಾಲಕ ಹಾಗೂ ನಿರ್ವಾಹಕರಿಗೆ ವಿಶ್ರಾಂತಿ ಗೃಹ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಯಾಣಿಕರ ಜಂಕ್ಷನ್‌ ಎಂಬ ಖ್ಯಾತಿ ಪಡೆದಿರುವ ನಗರಕ್ಕೆ ನಿತ್ಯ ಸಾವಿರಾರು ಬಸ್‌ಗಳು ಸಂಚರಿಸುತ್ತವೆ ಹಾಗೂ ಡಿಪೊದಲ್ಲಿ ನೂರಾರು ಬಸ್‌ಗಳು ರಾತ್ರಿ ನಿಲ್ಲುತ್ತವೆ. ಅಂಥ ಸಂದರ್ಭದಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ವಿಶ್ರಾಂತಿ ಗೃಹ ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ₹ 32 ಲಕ್ಷ ವೆಚ್ಚದಲ್ಲಿ ವಿಶ್ರಾಂತಿ ಗೃಹ ನಿರ್ಮಾಣವಾಗಲಿದೆ ಎಂದರು.

ಸಂಸ್ಥೆಯ ಬಸ್‌ಗಳ ದುರಸ್ತಿಗೆ ₹ 45 ಲಕ್ಷ ವೆಚ್ಚದಲ್ಲಿ ಡಾಕಿಂಗ್ ಶೇಡ್ ಹಾಗೂ ₹ 23 ಲಕ್ಷದ ವೆಚ್ಚದಲ್ಲಿ ಬಸ್‌ ನಿಲುಗಡೆ ಪ್ರದೇಶಕ್ಕೆ ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಯಲಿದೆ. ನಗರದ ಬಸ್ ನಿಲ್ದಾಣದಲ್ಲಿ ಹೋಟೆಲ್, ಸಿಬ್ಬಂದಿ ವಿಶ್ರಾಂತಿ ಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನಿಲ್ದಾಣದ ನವೀಕರಣಕ್ಕೆ ₹ 7 ಕೋಟಿ ಮಂಜೂರಾಗಿದ್ದು, ಶೀಘ್ರ ದಲ್ಲೇ ಕಾಮಗಾರಿಗೆ ಚಾಲನೆ ದೊರೆ ಯಲಿದೆ ಎಂದು ಮಾಹಿತಿ ನೀಡಿದರು. ವಿಭಾಗೀಯ ಸಂಚಾಲನಾಧಿಕಾರಿ ಅರುಣ್, ಸಹಾಯಕ ಎಂಜಿನಿಯರ್ ದಿನಕರ್, ಘಟಕ ವ್ಯವಸ್ಥಾಪಕ ಪರಮೇಶ್ವರಪ್ಪ, ಲೆಕ್ಕಾಧಿಕಾರಿ ಮಂಜುನಾಥ್, ಸಂಚಾರಿ ನಿರೀಕ್ಷಕಿ ಸುಧಾ, ಮಂಜುಳಾ ಬೆಳಕೆರೆ ಹಾಗೂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT