ADVERTISEMENT

ಆಮರಣ ಉಪವಾಸ ಸತ್ಯಾಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 6:59 IST
Last Updated 22 ಆಗಸ್ಟ್ 2014, 6:59 IST

ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗುಡಿಸಾಗರ, ನಾಗನೂರ, ಸೊಟಕ ನಾಳ ಹಾಗೂ ಕಡದಳ್ಳಿ ಗ್ರಾಮಗಳನ್ನು ಹೊಸದಾಗಿ ರಚನೆಯಾಗುತ್ತಿರುವ ಅಣ್ಣಿಗೇರಿ ತಾಲ್ಲೂಕಿಗೆ ಸೇರ್ಪಡೆ ಮಾಡ ಬಾರದೆಂದು ಒತ್ತಾಯಿಸಿದರೂ  ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿ ಬೇಡಿಕೆ ಈಡೇರುವವರೆಗೂ ಗ್ರಾಮಸ್ಥರು ಗುರುವಾರದಿಂದ  ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಗುಡಿಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಈ ನಾಲ್ಕು ಹಳ್ಳಿಗಳು ನವಲಗುಂದ ತಾಲ್ಲೂಕಿನಲ್ಲಿಯೇ ಉಳಿಸಿ ಕೊಳ್ಳುವಂತೆ ಹಲವು ಬಾರಿ ಪ್ರತಿಭಟನೆ ಮಾಡಿ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಅವೈಜ್ಞಾನಿಕವಾಗಿ ಈ ನಾಲ್ಕು ಗ್ರಾಮಗಳನ್ನು ಅಣ್ಣಿಗೇರಿಗೆ ಸೇರ್ಪಡೆ ಮಾಡಿದರೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ. ನವಲಗುಂದಕ್ಕೆ ಕೇವಲ 6 ರಿಂದ 9 ಕಿ.ಮೀ ಅಂತರದಲ್ಲಿ ಈ ಗ್ರಾಮಗಳು ಬರುತ್ತವೆ. ಆದರೆ ಅಣ್ಣಿಗೇರಿಗೆ ಸೆರ್ಪಡೆಯಾದರೆ 27 ಕಿ.ಮೀ ಅಂತರ ಕ್ರಮಿಸಿ ಸರ್ಕಾರಿ ದಾಖಲೆಗಳನ್ನು ಪಡೆಯಬೇಕಾಗುತ್ತದೆ.

ರೈತರ,  ವಿಧ್ಯಾರ್ಥಿಗಳ  ಯಾವ ದಾಖ ಲೆಗಳನ್ನು ಪಡೆಯಲು ಹಾಗೂ ಸಲ್ಲಿಸಲು ಅನಾನುಕೂಲವಾಗಲಿದೆ. ಇದರಿಂದಾಗಿ ಜೀವನಾವಶ್ಯಕ ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಲು ಶಾಶ್ವತ ತೊಂದರೆ ಅನುಭವಿಸಬೇಕಾಗುತ್ತದೆ. ಮುಂದಿನ ಪೀಳಿಗೆಗೂ ಕೂಡ ತೊಂದರೆ ತಪ್ಪಿದ್ದಲ್ಲ. 

ಕಾರಣ ಸರ್ಕಾರ ಹೊಸ ದಾಗಿ ತಾಲ್ಲೂಕು ರಚನೆ ಮಾಡುವಾಗ ಈ ನಾಲ್ಕು ಹಳ್ಳಿಗಳ ಜನರಿಗೆ ಅನು ಕೂಲ ಕಲ್ಪಿಸಬೇಕೆ ಹೊರತು ಅನಾನು ಕೂಲ ಆಗಬಾರದು. ಭೌಗೊಳಿಕ ನಕಾ ಶೆಯನ್ನು ಕೂಲಂಕ ಷವಾಗಿ ಪರಿಶೀಲಿಸಿ ನ್ಯಾಯ ಸಮ್ಮತವಾಗಿ ನಮ್ಮ ಗ್ರಾಮ ಗಳನ್ನು ನವಲಗುಂದ ತಾಲ್ಲೂಕಿನ ಲ್ಲಿಯೇ ಉಳಿಸಿ ಕೊಳ್ಳುವ ಆದೇಶ ಹೊರಡುವವರೆಗೂ ಉಪವಾಸ ಸತ್ಯಾ ಗ್ರಹ ಹಿಂಪಡೆಯುವುದಿಲ್ಲವೆಂದು ಸತ್ಯಾಗ್ರಹಿಗಳು ಹೇಳಿದರು.

ಸಮಿತಿಯ ಅಧ್ಯಕ್ಷ  ಬಸವರಾಜ ಉಳ್ಳೇಗಡ್ಡಿ, ಗುಡಿಸಾಗರ ಗ್ರಾ.ಪಂ. ಅಧ್ಯಕ್ಷೆ ಯಲ್ಲವ್ವ ಮಾದರ, ಬಿ.ಟಿ. ಕುಲಕರ್ಣಿ, ಭೀಮಣ್ಣ ಪಟ್ಟೇದ, ಚನ್ನ ಬಸು ಮಾಕಣ್ಣವರ, ಮಲ್ಲಿಕಾ ರ್ಜುನ  ಹೊಳೆಯಣ್ಣವರ, ಶಿವಾನಂದ ಹೊಳೆ ಯಣ್ಣವರ, ಮಕ್ತುಂಬಿ ವಲ್ಲೆ ಪ್ಪನವರ, ನಾಗನಗೌಡ ಪಾಟೀಲ, ಹುಚ್ಚಪ್ಪ ಕುಂ ಬಾರ, ಅಶೋಕ ಕರಮಳ್ಳಿ, ದ್ಯಾವಪ್ಪ ಉದಿಯಪ್ಪನವರ, ಅಲ್ಲಾ ಸಾಬ್‌ ಮುಲ್ಲಾನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.