ADVERTISEMENT

ಕುಂದಗೋಳದಲ್ಲಿ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 5:39 IST
Last Updated 2 ಫೆಬ್ರುವರಿ 2017, 5:39 IST
ಕುಂದಗೋಳದಲ್ಲಿ ಪಥ ಸಂಚಲನ
ಕುಂದಗೋಳದಲ್ಲಿ ಪಥ ಸಂಚಲನ   

ಕುಂದಗೋಳ:  ತಾಲ್ಲೂಕಿನ ಅತಿ ಸೂಕ್ಷ್ಮ ಗ್ರಾಮಗಳಾಗಿರುವ ಕಳಸ, ಗುಡಗೇರಿ, ಸಂಶಿ, ಕುಂದಗೋಳ, ಕಮಡೊಳ್ಳಿ ಗ್ರಾಮಗಳಲ್ಲಿ ಸಿಕಂದರಾಬಾದ್‌ ಜಾಕೋಬ್ ಬೆಟಾಲಿಯನ್ ತಂಡ ಬುಧವಾರ ಪಥ ಸಂಚಲನ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಸಿಪಿಐ ವೆಂಕಟಸ್ವಾಮಿ ‘ತಾಲ್ಲೂಕಿನಲ್ಲಿ ಈ ಗ್ರಾಮಗಳು ಅತಿ ಸೂಕ್ಷ್ಮ ಪ್ರದೇಶಗಳಾಗಿರುವುದರಿಂದ ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆದಾಗ ಈ ಬೆಟಾಲಿಯನ್ ತಂಡ ಗ್ರಾಮಕ್ಕೆ ಬಂದು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತದೆ. ಕೇಂದ್ರೀಯ ವಿಭಾಗದ ಆದೇಶದಂತೆ ಈ ತಂಡ ಕಾರ್ಯನಿರ್ವಹಿಸಲಿದೆ. ತಾಲ್ಲೂಕಿನಲ್ಲಿ ಬರುವ ಈ ಸೂಕ್ಷ್ಮ ಗ್ರಾಮಗಳ ಪರಿಚಯ ಮಾಡಿಕೊಳ್ಳಲು ಸುಮಾರು 35ಕ್ಕೂ ಹೆಚ್ಚಿರುವ ಬೆಟಾಲಿಯನ್ ತಂಡ ಆಯಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ  ಮಾಡಿಸಿ ಪರಿಚಯ ಮಾಡಿಕೊಡಲಾಯಿತು’ ಎಂದು ತಿಳಿಸಿದರು. ತಹಶೀಲ್ದಾರ್‌ ಮಹದೇವ ಬಣಸಿ, ಪಿಎಸ್ಐ ದಿನೇಶ ಜವಳೇಕರ ಹಾಗೂ ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.