ADVERTISEMENT

ಪಟ್ಟಭದ್ರ ಹಿತಾಸಕ್ತಿಗೆ ಜಗ್ಗದಿರಿ

​ಪ್ರಜಾವಾಣಿ ವಾರ್ತೆ
Published 14 ಮೇ 2017, 9:03 IST
Last Updated 14 ಮೇ 2017, 9:03 IST

ಧಾರವಾಡ: ‘ಬಸವಾದಿ ಶರಣರ ಕಾಲದಿಂದಲೂ ಪಟ್ಟಭದ್ರ ಹಿತಾಸಕ್ತಿಗಳ ಬೆದರಿಕೆ ಇದೆ. ಆದರೆ ಅದಕ್ಕೆ ಹೆದರುವ ಅಗತ್ಯವಿಲ್ಲ’ ಎಂದು ಅಕ್ಕಮಹಾದೇವಿ ಅನುಭಾವ ಪೀಠದ ದ್ವಿತೀಯ ಪೀಠಾ ಧ್ಯಕ್ಷೆ ಮಾತೆ ಗಂಗಾದೇವಿ ಒತ್ತಿ ಹೇಳಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ವತಿಯಿಂದ ಶನಿವಾರ ಆಯೋಜಿಸಿದ್ದ 8ನೇ ಶರಣೋ ತ್ಸವದಲ್ಲಿ ಮಾತನಾಡಿದರು.‘ವಚನ ಸಾಹಿತ್ಯ 23 ಭಾಷೆಯಲ್ಲಿ ಪ್ರಸಾರವಾಗುವ ಮೂಲಕ ಬಸವಣ್ಣನ ವರ ಹಾಗೂ ಶಿವಶರಣರ ತತ್ವ ಹೆಚ್ಚು ಜನರನ್ನು ತಲುಪಲಿದೆ. ಇದಕ್ಕೆ ವಚನ ಪಿತಾಮಹ  ಫ.ಗು.ಹಳಕಟ್ಟಿ ಮತ್ತು ಪ್ರವ ಚನ ಪಿತಾಮಹ ಲಿಂಗಾನಂದ ಸ್ವಾಮೀಜಿ ಕಾರಣಿಕರ್ತರು’ ಎಂದು ಅಭಿಪ್ರಾಯ ಪಟ್ಟರು.

‘ಛಲ ಬಿಡದ ಅನೇಕ ಶರಣರು ವಿವಿಧೆಡೆ ವಲಸೆ ಹೋಗಿ ವಚನವನ್ನು ರಕ್ಷಿಸಿದರು. ಈಗಲೂ ಬಸವ ಸಂಘಟನೆ ಅಥವಾ ವಚನ ಪ್ರಚಾರ ಮಾಡುವವರಿಗೆ ಈ ಪಟ್ಟಭದ್ರ ಹಿತಾಸಕ್ತಿಗಳ ಕಾಟ ಮುಂದುವರೆದಿದೆ’ ಎಂದು ಹೇಳಿದರು.

ADVERTISEMENT

ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ನೀಲಕಂಠ ಅಸೂಟಿ ಧ್ವಜಾ ರೋಹಣ ನೆರವೇರಿಸಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ನೆನಪಿನ ಕಾಣಿಕೆ ಬಿಡುಗಡೆ ಮಾಡಿದರು. ಶಾಸಕ ಎನ್.ಎಚ್.ಕೋನರಡ್ಡಿ, ನಿಜನಗೌಡ ಪಾಟೀಲ, ಸಿದ್ದಣ್ಣ ಮಲ್ಲೇಶಪ್ಪ ಕುಸುಗಲ್‌, ಎಸ್‌.ಬಿ. ಜೋಡಳ್ಳಿ, ಆನಂದ ಚೋಪ್ರಾ, ಡಾ.ಅನ್ನಪೂರ್ಣ ಹಿರಲಿಂಗಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.