ADVERTISEMENT

‘ಮಕ್ಕಳ ಶಿಕ್ಷಣಕ್ಕೆ ತಂತ್ರಜ್ಞಾನ ಪೂರಕ’

ಮಹಾವೀರ ಶಿಕ್ಷಣ ಸಂಸ್ಥೆ ಶಾಲೆ, ಕಾಲೇಜು ವಾರ್ಷಿಕೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:46 IST
Last Updated 10 ಜನವರಿ 2017, 5:46 IST
ಹುಕ್ಕೇರಿ: ಹತ್ತು ಹಲವು ಏರುಪೇರುಗಳೊಂದಿಗೆ ಶಿಕ್ಷಣ ಕ್ಷೇತ್ರ ಅಂತಿಮ ಘಟ್ಟ ತಲುಪಿದೆ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಸ್ಯಾಟ್‌ಲೈಟ್ ಮೂಲಕ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ ಎಂದು ಘೋಡಗೇರಿ ಶಿವಾನಂದ ಮಠದ ಕೈವಲ್ಯಾನಂದ ಸ್ವಾಮೀಜಿ ಹೇಳಿದರು.
 
ಅವರು ಪಟ್ಟಣದ ಮಹಾವೀರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ವಸಂತ ನಿಲಜಗಿ ಐ.ಟಿ.ಐ, ಮಹಾವೀರ ಪಿಯು ಕಾಲೇಜಿನ ಪ್ರಸಕ್ತ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
 
ಶಿಕ್ಷಣ  ವ್ಯಾಪಾರಿಕರಣಗೊಂಡಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟಕರ. ಆದರೆ ಈ ಶಾಲೆ ಕೇವಲ 12 ವರ್ಷಗಳಲ್ಲಿ ಇಷ್ಟೊಂದು ಪ್ರಗತಿ ಸಾಧಿಸಿ ಬಡ ಮಕ್ಕಳ ಪಾಲಿಗೆ ವರದಾನವಾಗಿದೆ. ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಹಾಗೂ ನಿಸ್ವಾರ್ಥ ಮನೋಭಾವನೆಯಿಂದ ಶಿಕ್ಷಣ ನೀಡುತ್ತಿರುವುದು ಪ್ರಶಂಶನೀಯ ಎಂದರು. 
 
ಹುಕ್ಕೇರಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ವಿಜಯ ರವದಿ, ಕ.ಸಾ.ಪ.ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ವಸಂತ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು.  
 
ಬಹುಮಾನ: ಶಾಲೆಯ ಆದರ್ಶ ವಿದ್ಯಾರ್ಥಿಗಳು, ವಿವಿಧ ಸ್ವರ್ಧೆಗಳ ವಿಜೇತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
 
ರೀಡ್್ಸ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ, ಚಿಕ್ಕೋಡಿಯ ಶಾಂತಿನಾಥ ಚೌಗಲಾ, ಕಾರ್ಯದರ್ಶಿ ಸಂಜು ನಿಲಜಗಿ, ಪುರಸಭೆ ಸದಸ್ಯ ಗಜಬರ ಮುಲ್ಲಾ, ಎಂಜನಿಯರ್ ಬಸವರಾಜ ಪಾಟೀಲ, ಬಿ.ಬಿ.ಲಠ್ಠೆ, ಸುಕುಮಾರ ಖತಗಲ್ಲಿ, ಪ್ರಜ್ವಲ ನಿಲಜಗಿ, ಬಾಬು ಮುನವಳ್ಳಿ, ತಾಲ್ಲೂಕು ಜೈನ ಅಸೊಸಿಯೇಶನ್ ಅಧ್ಯಕ್ಷ ಅಶೋಕ ರಂಗೋಳಿ ಮತ್ತಿತರರು ಉಪಸ್ಥಿತರಿದ್ದರು. 
 
ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಮುಖ್ಯಾಧ್ಯಾಪಕ ಬಿ.ಬಿ. ಲಠ್ಠೆ ವರದಿ ವಾಚಿಸಿದರು. ಶಿಕ್ಷಕರಾದ ಎಸ್.ಜಿ. ಕರಹೊನ್ನವರ, ಆರ್.ಆರ್. ತಳವಾರ ನಿರೂಪಿಸಿದರು. ವೀರೇಶ ಕಡೆಮನಿ ವಂದಿಸಿದರು.
 
**
ಶಿಕ್ಷಣದಲ್ಲಿ ಜೀವನಕ್ಕೆ ಬೇಕಾದ ಜ್ಣಾನದ ಕೊರತೆಯಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ನೈತಿಕ ಪ್ರಜ್ಞೆ ತುಂಬಿದರೆ ಮಾತ್ರ ಅದ್ಭುತ ಭವಿಷ್ಯ ನಿರ್ಮಿಸಲು ಸಾಧ್ಯ.
-ಕೈವಲ್ಯಾನಂದ ಸ್ವಾಮೀಜಿ
ಹುಲೋಳಿ ಹಟ್ಟಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.