ADVERTISEMENT

ಮೇ ಸಾಹಿತ್ಯ ಮೇಳಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 6:56 IST
Last Updated 28 ಮೇ 2018, 6:56 IST
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಮೇ ಸಾಹಿತ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ’ತೊಗಲ ಚೀಲದ ಕರ್ಣ’ ಕೃತಿ ಬಿಡುಗಡೆಗೊಳಿಸಲಾಯಿತು. ಕೆ. ನೀಲಾ, ಎಚ್‌.ಲಕ್ಷ್ಮಿನಾರಾಯಣಸ್ವಾಮಿ, ಡಾ.ಕಾಳೇಗೌಡ ನಾಗವಾರ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ಶಿವರುದ್ರ ಕಲ್ಲೋಳಿಕರ, ಕೆ.ಎನ್‌.ದೊಡಮನಿ ಇದ್ದಾರೆ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಮೇ ಸಾಹಿತ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ’ತೊಗಲ ಚೀಲದ ಕರ್ಣ’ ಕೃತಿ ಬಿಡುಗಡೆಗೊಳಿಸಲಾಯಿತು. ಕೆ. ನೀಲಾ, ಎಚ್‌.ಲಕ್ಷ್ಮಿನಾರಾಯಣಸ್ವಾಮಿ, ಡಾ.ಕಾಳೇಗೌಡ ನಾಗವಾರ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ಶಿವರುದ್ರ ಕಲ್ಲೋಳಿಕರ, ಕೆ.ಎನ್‌.ದೊಡಮನಿ ಇದ್ದಾರೆ   

ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಎರಡು ದಿನಗಳಿಂದ ನಡೆದ ಐದನೇ ‘ಮೇ ಸಾಹಿತ್ಯ ಮೇಳ’ ಭಾನುವಾರ ಸಂಜೆ ಸಮಾರೋಪಗೊಂಡಿತು.

‘ಬಂಡ್ರಿ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿಯನ್ನು ಲೇಖಕಿ ಕೆ. ನೀಲಾ ಅವರಿಗೆ ಹಾಗೂ ’ತೊಗಲ ಚೀಲದ ಕರ್ಣ’ ಕೃತಿಯ ಲೇಖಕ ಎಚ್. ಲಕ್ಷ್ಮಿ ನಾರಾಯಣಸ್ವಾಮಿ ಅವರಿಗೆ ‘ವಿಭಾ ಸಾಹಿತ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಯು ತಲಾ ₹ 5 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಡಾ.ಕಾಳೇಗೌಡ ನಾಗವಾರ ಹಾಗೂ ಪ್ರೊ. ಚಂದ್ರಶೇಖರ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ನೀಲಾ, ‘ದೇಶದಲ್ಲಿ ವಿಚಾರವಾದಿಗಳ ಧ್ವನಿ ಅಡಗಿಸುವ, ಭಯ ಹುಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ನಾವು ಬದುಕಬೇಕು, ಗೆಲ್ಲಬೇಕು ಎನ್ನುವುದಾದರೆ
ಬೀದಿಗೆ ಬರಬೇಕು. ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಧ್ವನಿ ಎತ್ತಬೇಕಿದೆ’ ಎಂದರು.

’ನಾನು ಯಾರ ಮಧ್ಯದಲ್ಲಿ ಕೆಲಸ ಮಾಡಿದ್ದೇನೋ ಅವರಿಗೆ ಪ್ರಶಸ್ತಿ ಸಲ್ಲುತ್ತದೆ. ಈ ಪ್ರಶಸ್ತಿ ಕೂಡ ಹೋರಾಟದ ಭಾಗ. ಆ ಹೋರಾಟವನ್ನು ಗುರುತಿಸಿ, ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ಸಮಾರೋಪ ಭಾಷಣ ಮಾಡಿದ ಪ್ರೊ.ಚಂದ್ರಶೇಖರ ಪಾಟೀಲ, ‘ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ವಿರುದ್ಧ ಧ್ವನಿಯಾಗಿ, ಅಪಾಯದ ಅಂಚಿನಲ್ಲಿರುವ ಬಹುತ್ವದ ಉಳಿವಿಗಾಗಿ, ಸೌಹಾರ್ದದ ಬದುಕಿನ ಆಶಯದೊಂದಿಗೆ ಈ ಸಾಹಿತ್ಯ ಮೇಳ ಆಯೋಜನೆಗೊಂಡಿರುವುದು ಸ್ತುತ್ಯರ್ಹ’ ಎಂದರು.

’ಧಾರವಾಡದ ಸಾಹಿತ್ಯ ಸಂಭ್ರಮದ ಮೊದಲ ಆವೃತ್ತಿಗಳಲ್ಲಿ ನಾನು ಭಾಗವಹಿಸಿದ್ದೆ. ಆದರೆ, ವರ್ಷದಿಂದ ವರ್ಷಕ್ಕೆ ಅದು ಬಲಪಂಥೀಯ ಚಿಂತನೆಗಳಿಗೆ ಆದ್ಯತೆ ನೀಡತೊಡಗಿತು. ಸಂಭ್ರಮ ಕೇಸರಿ ಬಣ್ಣದ ಆಕಾರ ಪಡೆಯಿತು. ಸಾಹಿತ್ಯ ಸಂಭ್ರಮದ ರೂವಾರಿಯಾಗಿದ್ದ ಡಾ. ಗಿರಡ್ಡಿ ಗೋವಿಂದರಾಜ ಸಂಘಟಕ ಆಗಿರಲಿಲ್ಲ. ಇವೆಂಟ್ ಮ್ಯಾನೇಜರ್ ಆಗಿದ್ದರು. ಇದೇ ಕಾರಣ ನಾನು ಅಲ್ಲಿಂದ ದೂರ ಉಳಿದು ಮೇ ಸಾಹಿತ್ಯ ಮೇಳದಲ್ಲಿ ಭಾಗವಹಿಸಲು ಪ್ರಾರಂಭಿಸಿದೆ’ ಎಂದರು.

’ಮೊದಲ ಸಾಹಿತ್ಯ ಸಂಭ್ರಮಕ್ಕೂ ಮುಂಚೆ ಮೇ ಸಾಹಿತ್ಯ ಮೇಳದ ಸಂಘಟಕರು ದೂರವಾಣಿ ಕರೆ ಮಾಡಿ ಅದು ಬಲಪಂಥೀಯ, ಮನುವಾದಿಗಳ ಸಂಭ್ರಮ ಎಂದು ಕಿವಿಮಾತು ಹೇಳಿದ್ದರು. ಆದರೆ, ಡಾ. ಗಿರಡ್ಡಿ ಗೋವಿಂದರಾಜ ಅವರಿರುವ ಕಾರಣಕ್ಕೆ ಮಾತ್ರ ಸಂಭ್ರಮದಲ್ಲಿ ಪಾಲ್ಗೊಂಡಿದ್ದೆ’ ಎಂದು ಚಂಪಾ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.