ADVERTISEMENT

‘ಇ–ಸ್ಟ್ಯಾಂಪ್ ಅರ್ಜಿ ಸರಳೀಕರಿಸಿ’

ಇ–ಸ್ಟ್ಯಾಂಪಿಂಗ್‌ ಕೇಂದ್ರಗಳ ಮುಖ್ಯಸ್ಥರು, ಮೇಲ್ವಿಚಾರಕರರ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 27 ಮೇ 2015, 7:06 IST
Last Updated 27 ಮೇ 2015, 7:06 IST

ಹುಬ್ಬಳ್ಳಿ: ‘ಗ್ರಾಹಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಇ–ಸ್ಟ್ಯಾಂಪ್‌ಗಾಗಿ ಸಲ್ಲಿಸುವ ಅರ್ಜಿಯನ್ನು ಇನ್ನಷ್ಟು ಸರಳ ವಾಗಿ ರೂಪಿಸುವ ಅವಶ್ಯಕತೆ ಇದೆ’ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿರ್ದೇಶಕ ಎಂ.ಬಿ. ಕಲಾಲ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಾಣಿಜ್ಯೋ ದ್ಯಮ ಸಂಘದ ಸಭಾಭವನದಲ್ಲಿ ಮಂಗಳವಾರ ನಡೆದ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಇ–ಸ್ಟ್ಯಾಂಪಿಂಗ್‌ ಕೇಂದ್ರಗಳ ಶಾಖಾ ಮುಖ್ಯ ಸ್ಥರು, ಮೇಲ್ವಿಚಾರಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಆರ್ಥಿಕವಾಗಿ ಇ–ಸ್ಟ್ಯಾಂಪಿಂಗ್‌ ಕೇಂದ್ರಗಳನ್ನು ನಡೆಸುವುದು ಕಷ್ಟ ವಾಗುತ್ತಿದ್ದು, ಸ್ಟಾಕ್‌ ಹೋಲ್ಡಿಂಗ್‌ ಇ–ಸ್ಟ್ಯಾಂಪಿಂಗ್‌ ಕೇಂದ್ರಗಳ ಕಮಿಷನ್‌ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರ ಗಮನ ಸೆಳೆಯ ಬೇಕು’ ಎಂದು ಅವರು ಒತ್ತಾಯಿಸಿದರು ನಿಗಮದ ಮತ್ತೊಬ್ಬ ನಿರ್ದೇಶಕ ರವಿ ಯಲಿಗಾರ ಮಾತನಾಡಿ, ‘ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಅರ್ಜಿ ಸ್ವೀಕರಿಸುವ ಕೇಂದ್ರ (ಎಆರ್‌ಸಿ)ಗಳ 101 ಇವೆ. ಅದರಲ್ಲಿ ಕೇವಲ 52 ಕೇಂದ್ರಗಳ ಅಭ್ಯರ್ಥಿಗಳು ಮಾತ್ರ ತರಬೇತಿಗೆ ಹಾಜರಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಭ್ಯರ್ಥಿಗಳ ಅನುಕೂಲಕ್ಕಾಗಿ ತರಬೇತಿ ಕಾರ್ಯಾಗಾರ ಆಯೋಜಿಸ ಲಾಗುತ್ತದೆ. ಇದರ ಲಾಭವನ್ನು ಅವರು ಪಡೆದುಕೊಳ್ಳಬೇಕು. ಕೆಲವರು ಎಲ್ಲವೂ ತಮಗೆ ತಿಳಿದಿದೆ ಎಂದುಕೊಂಡಿದ್ದಾರೆ. ಈ ಧೋರಣೆ ಸರಿಯಲ್ಲ. ಮುಂದಿನ ತರಬೇತಿ ಕಾರ್ಯಾಗಾರಗಳಲ್ಲಿ ಭಾಗ ವಹಿಸದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ಸರ್ಕಾರಕ್ಕೆ ಶೇ 50ರಷ್ಟು ಆದಾಯವನ್ನು ಸೌಹಾರ್ದ ಸಂಯುಕ್ತ ಸಹಕಾರಿ ನಿಗಮಗಳು ತಂದುಕೊಡುತ್ತಿವೆ. ನಮಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟರೆ ಮತ್ತಷ್ಟು ನಿಷ್ಠೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಇ–ಸ್ಟ್ಯಾಂಪ್‌ ಮುದ್ರಿಸುವಾಗ ಎಚ್‌ಪಿ ಕಂಪೆನಿಯ ನಕಲಿ ಕಾರ್ಟ್ರಿಡ್ಜ್‌ಗಳನ್ನು ಬಳಸಲಾಗುತ್ತದೆ. ಇದನ್ನು ಬಳಸು ವುದರಿಂದ ಮುದ್ರಣದ ಗುಣ ಮಟ್ಟ ಕುಸಿಯಲಿದೆ. ಇದಕ್ಕೆ ತಡೆ ಯೊಡ್ಡುವ ಅಗತ್ಯವಿದೆ’ ಎಂದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳ, ಮೇಲ್ವಿಚಾರಕರ ಅನು ಮಾನಗಳನ್ನು ಪರಿಹರಿಸುವ ಪ್ರಯತ್ನ ವನ್ನು ಜಿಲ್ಲಾ ನೋಂದಣಾಧಿಕಾರಿ ಮಹೇಶ ಪಂಡಿತ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.