ADVERTISEMENT

ಮಹಾಶಿವರಾತ್ರಿ: ಗೀತಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 9:24 IST
Last Updated 10 ಫೆಬ್ರುವರಿ 2018, 9:24 IST

ಧಾರವಾಡ: ಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದ ಕಲಾಭವನ ಮೈದಾನದಲ್ಲಿ ಫೆ.12, 13, 14 ರಂದು ಮಹಾಶಿವರಾತ್ರಿ ಉತ್ಸವ, ಗೀತಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು  ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಜಯಂತಿ ಹೇಳಿದರು. ಪ್ರತಿದಿನ ಧ್ವನಿ ಮತ್ತು ಬೆಳಕಿನ ಚೈತನ್ಯ ದೃಶ್ಯ ಮಂಟಪದಲ್ಲಿ ಗೀತಾಜ್ಞಾನಧಾರೆ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.10 ರಂದು ಬೆಳಗ್ಗೆ 10ಕ್ಕೆ ಶಾಂತಿಯಾತ್ರೆ ನಡೆಯಲಿದೆ. ಫೆ.12 ರಂದು ಸಂಜೆ 6ಕ್ಕೆ ಕಲಾಭವನ ಮೈದಾನದಲ್ಲಿ ‘ಗೀತೆಯ ಪರಮಾತ್ಮನೇ ಸರ್ವ ಧರ್ಮದವರ ಪರಮಾತ್ಮ’ ಎಂಬ ಉಪನ್ಯಾಸ ಕಾರ್ಯಕ್ರಮಕ್ಕೆ ಸಚಿವ ವಿನಯ ಕುಲಕರ್ಣಿ ಚಾಲನೆ ನೀಡುವರು.

ಫೆ.13 ರಂದು ಬೆಳಿಗ್ಗೆ 8ಕ್ಕೆ ಶಿವ ಧ್ವಜಾರೋಹಣ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭ ನಡೆಯಲಿದೆ. ಅಂದು ಸಂಜೆ 6ಕ್ಕೆ ಕಲಾಭವನದಲ್ಲಿ ‘ಮಹಾಶಿವರಾತ್ರಿ ಹಬ್ಬದ ಆಧ್ಯಾತ್ಮಿಕ ರಹಸ್ಯ’ ಎಂಬ ವಿಷಯದ ಮೇಲೆ ನಿವೃತ್ತ ಪ್ರಾಚಾರ್ಯ ಡಾ. ಬಿ.ಕೆ. ವಾದಿರಾಜ ಭಟ್ ಉಪನ್ಯಾಸ ನೀಡುವರು ಎಂದು ಹೇಳಿದರು.

ADVERTISEMENT

ಫೆ.14 ರಂದು ಸಂಪನ್ನ ಮಹೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಕಾಶಿನಾಥ ಹಾದಿಮನಿ, ಬಸವರಾಜ ಕಡೆಮನಿ, ಛಾಯಾ ಬಡಿಗೇರ, ಮಹಾಂತೇಶ ಭೂಸರೆಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳಿದ್ದಾರೆ ಎಂದು ಅವರು ತಿಳಿಸಿದರು. ಬಿ.ಕೆ. ವಾಣಿ, ಪದ್ಮಿನಿ, ರೋಹಿಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.