ADVERTISEMENT

‘ಅಂಗನವಾಡಿಗಳಿಗೆ ಸೌಕರ್ಯ ಒದಗಿಸಿ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 9:24 IST
Last Updated 2 ಡಿಸೆಂಬರ್ 2017, 9:24 IST

ರೋಣ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ದುಂಡಮ್ಮ ಬಳಿಗಾರ ಸರ್ಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆ ಯಶಸ್ವಿ ಆಗಬೇಕಾದರೆ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಸದ್ಯ ತಾಲ್ಲೂಕಿನ ಶೇ 40ರಷ್ಟು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ.

ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕಿಯರ ಕೊರತೆ ಕಾಡುತ್ತಿದೆ. ಕುಡಿಯುವ ನೀರು, ಅಡುಗೆ ಅನಿಲ, ಅಡುಗೆ ಸಿದ್ಧಪಡಿಸುವ ಉಪಕರಣಗಳ ಲಭ್ಯತೆಯೂ ಅಷ್ಟಕ್ಕಷ್ಟೇ. ಇದರಿಂದ ನಿತ್ಯ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಸಮಸ್ಯೆ ಎದುರಿಸುತ್ತಿದ್ದಾರೆ.

ADVERTISEMENT

ಅಂಗನವಾಡಿ ಕೇಂದ್ರಗಳ ಆರ್ಥಿಕ ವೆಚ್ಚ ನಿರ್ವಹಣೆಗೆ ಬಾಲವಿಕಾಸ ಸಮಿತಿ ಅಧ್ಯಕ್ಷರ ಜತೆ ಜಂಟಿ ಖಾತೆ ತೆರೆಯುವ ಕ್ರಮ ಸರಿಯಲ್ಲ. ಇಂಥ ಅವೈಜ್ಞಾನಿಕ ಕ್ರಮಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.

ನೀಲಮ್ಮ ಹಿರೇಮಠ, ಶೋಭಾ ಭಜಂತ್ರಿ, ಶೋಭಾ ಟಂಕಸಾಲಿ, ಶಶಿಕಲಾ ಗಾಣಿಗೇರ, ಸುವರ್ಣಾ ಇಂಡಿ, ಗಂಗಮ್ಮ ದೇವರಡ್ಡಿ, ಶಾಂತಾ ಹಿರೇಮಠ, ಸೀತಾ ಕುಲಕರ್ಣಿ, ಶಿವಮ್ಮ ವಾಲಿ, ದಾಕ್ಷಾಯಣಿ ಗುಂಡೆ, ಮಂಗಳಾ ಪಟ್ಟಣಶೆಟ್ಟಿ, ಮಧುಮತಿ ಫಿರಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.