ADVERTISEMENT

ಅಂಗವಿಕಲರಿಗೆ ‘ಅಡಿಪ್‌’ ಆಸರೆ

ಫಲಾನುಭವಿಗಳಿಗೆ ಉಚಿತ ಸಾಧನ, ಸಲಕರಣೆ ವಿತರಣೆ

ಕೆ.ಎಸ್.ಸುನಿಲ್
Published 25 ಅಕ್ಟೋಬರ್ 2014, 6:48 IST
Last Updated 25 ಅಕ್ಟೋಬರ್ 2014, 6:48 IST
ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಲ್ಲಿ ಗದಗ ಜಿಲ್ಲೆಯ ಅಂಗವಿಕಲ ಫಲಾನುಭವಿಗಳಿಗೆ ಉಚಿತ ಸಲಕರಣೆ ವಿತರಿಸಲಾಯಿತು.
ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಲ್ಲಿ ಗದಗ ಜಿಲ್ಲೆಯ ಅಂಗವಿಕಲ ಫಲಾನುಭವಿಗಳಿಗೆ ಉಚಿತ ಸಲಕರಣೆ ವಿತರಿಸಲಾಯಿತು.   

ಗದಗ: ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕೇಂದ್ರ ಮತ್ತು  ರಾಜ್ಯ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. ಈ ಸಾಲಿಗೆ ಹೊಸದಾಗಿ ಅಡಿಪ್‌ (ಅಸಿಸ್ಟಂಟ್ಸ್ ಟು ಡಿಸೇಬಲ್‌ ಪರ್ಸನ್ಸ್) ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ಕಳೆದ ಸಾಲಿನಿಂದ ರಾಜ್ಯದಲ್ಲಿ ಅನುಷ್ಟಾನಗೊಳಿಸಿದೆ.

ವಿವಿಧ ನ್ಯೂನ್ಯತೆವುಳ್ಳ ಅಂಗವಿಕಲರಿಗೆ ಸ್ವಾವ ಲಂಬನೆ ಬದುಕು ಸಾಗಿಸಲು ಅನುವಾಗುವ ರೀತಿ ಯಲ್ಲಿ  ಟ್ರೈಸಿಕಲ್‌, ವ್ಹೀಲ್‌ಚೇರ್‌, ಕ್ರಚಸ್‌, ಬಿಳಿ ಗೋಲು,  ನಡಿಗೆ ಕೋಲು, ದ್ವಿಚಕ್ರ ವಾಹನ, ಎಂ. ಆರ್.ಕಿಟ್‌ (ಬುದ್ದಿಮಾಂದ್ಯ ಮಕ್ಕಳ ಬೋಧನಾ ಸಾಮಗ್ರಿ), ವಿವಿಧ ವಯೋಮಾನದವರಿಗೆ ₨ 6 ರಿಂದ 18 ಸಾವಿರ ಮೌಲ್ಯದ ವಿಶೇಷ ತಂತ್ರಜ್ಞಾನ ಬಳಸಿ ವಿನ್ಯಾಸಗೊಳಿಸಿದ ಸೈಕಲ್  ನೀಡಲಾಗುತ್ತದೆ. ಕುತ್ತಿಗೆ ಮತ್ತು ಸೊಂಟದ ಸಮಸ್ಯೆಯಿಂದ ಬಳಲುವ ಮಕ್ಕಳಿಗೆ ವಿಶೇಷವಾಗಿ ತಯಾರಿಸಿದ ಸಿ.ಪಿ. ಚೇರ್‌ ಹಾಗೂ ಶ್ರವಣ  ದೋಷವುಳ್ಳವರಿಗೆ ಶ್ರವಣ ಸಾಧನ ವಿತರಿಸ ಲಾಗುತ್ತದೆ.

ಫಲಾನುಭವಿಗಳ ಆಯ್ಕೆ ಹೇಗೆ ? :ಜಿಲ್ಲಾ ಅಂಗವಿ ಕಲರ ಪುನರ್ವಸತಿ ಕೇಂದ್ರವು ಪಂಚಾಯ್ತಿ ಮಟ್ಟದಲ್ಲಿ ವಾರದಲ್ಲಿ ಮೂರು ದಿನ ವಿಶೇಷ ಶಿಬಿರ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಿದೆ. ಶಿಬಿರದಲ್ಲಿ ಕೃತಕ ಅಂಗಾಂಗಗಳ ಜೋಡಣಾ ಪರಿಣತರು, ಬುದ್ದಿಮಾಂದ್ಯ, ಅಂಧತ್ವ, ಶ್ರವಣ ದೋಷ ವಿಶೇಷ ಶಿಕ್ಷಕರು, ಫಿಸಿಯೋಥೆರಪಿಸ್ಟ್‌, ಮನಶಾಸ್ತ್ರಜ್ಞರು, ಎಲಬು, ಕೀಲು ತಜ್ಞ ವೈದ್ಯರು ದೈಹಿಕ ನ್ಯೂನ್ಯತೆ ವುಳ್ಳವರ ಪರೀಕ್ಷೆ ನಡೆಸಿ  ಪಟ್ಟಿ ಸಿದ್ದಪಡಿಸುತ್ತಾರೆ. ಯೋಜನೆ ಸವಲತ್ತು ಪಡೆಯಲು ವೈದ್ಯಕೀಯ ಪ್ರಮಾಣ ಪತ್ರ, ಗುರುತಿನ ಪತ್ರ, ರಹವಾಸಿ ಪತ್ರ, ಆದಾಯ ಪ್ರಮಾಣ ಪತ್ರ ಹಾಜರುಪಡಿಸಬೇಕು. ಈ ಯೋಜನೆ 60 ವರ್ಷದೊಳಗಿನವರಿಗೆ ಮಾತ್ರ ಅನ್ವಯ.

ಕಳೆದ ವರ್ಷ ಯೋಜನೆಯಲ್ಲಿ ಬಿಡುಗಡೆಯಾದ ₨ 2 ಲಕ್ಷ ಅನುದಾನದಲ್ಲಿ 40 ಅಂಗವಿಕಲರಿಗೆ ಅವ ಶ್ಯಕತೆ ಇರುವ ಸಾಧನ, ಸಲಕರಣೆ ಕೊಡಲಾಗಿದೆ.

ಅಲ್ಲದೇ ಅಂಧತ್ವ,  ದೈಹಿಕ ನ್ಯೂನ್ಯತೆ, ಮೆದುಳು ಪಾರ್ಶ್ವವಾಯು, ಬುದ್ದಿಮಾಂದ್ಯತೆ, ಕುಷ್ಠ ರೋಗ, ಅಲ್ಪ ದೃಷ್ಟಿದೋಷ, ಬಹು ವಿಕಲತೆ, ಶ್ರವಣ ದೋಷ, ಅಟಿಸಂ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಗತ್ಯ ಸಾಧನ ವಿತರಿಸಲಾಗುತ್ತದೆ.

‘ಕೇಂದ್ರ ಸರ್ಕಾರದ ನ್ಯಾಷನಲ್‌ ಟ್ರಸ್ಟ್ ಯೋಜನೆ ಅಡಿ  ಬಹುವಿಕಲತೆ, ಬುದ್ದಿಮಾಂದ್ಯತೆ, ಮೆದುಳು ಪಾರ್ಶ್ವವಾಯು, ಅಟಿಸಂ ನ್ಯೂನ್ಯತೆವುಳ್ಳವರಿಗೆ ವಿಶೇ ಷವಾಗಿ ಪುನಶ್ಚೇತನ ಶಿಕ್ಷಣ, ಉದ್ಯೋಗ ಪ್ರಭ, ಜ್ಞಾನ ಪ್ರಭ, ನಿರಾಮಯ, ಘರೌಂಡಾ, ಸಮರ್ಥನಂ ತರಬೇತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಬುದ್ದಿ ಮಾಂದ್ಯ ವಿಶೇಷ ಶಿಕ್ಷಕ ಸುನಿಲ್‌ಸಿಂಗ್‌ ಲದ್ದಿಗೇರಿ.

ಜಿಲ್ಲಾ ಅಂಗವಿಕಲ ಅಧಿಕಾರಿ ಡಿ.ಎನ್‌. ಮೂಲಿಮನಿ, ‘ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಯನ್ನು ಸಮರ್ಪಕ ವಾಗಿ ಬಳಸಿಕೊಳ್ಳಬೇಕು. ಅಡಿಪ್‌ ಯೋಜನೆಯಲ್ಲಿ ವಿಶೇಷವಾಗಿ  ಮೆದುಳು ಪಾರ್ಶ್ವವಾಯು ಮತ್ತು ಅಟಿಸಂ ಸೇರಿಸಲಾಗಿದೆ’ ಎಂದು ವಿವರಿಸಿದರು.

₨ 5 ಲಕ್ಷ  ಕ್ರಿಯಾ ಯೋಜನೆ
‘ಪ್ರಸಕ್ತ ಸಾಲಿನಲ್ಲಿ ಅಡಿಪ್‌ ಯೋಜನೆ ಅಡಿ 50 ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿ, ₨ 5 ಲಕ್ಷ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅಂಗವಿಕಲ ಕಲ್ಯಾಣ ಇಲಾಖೆ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನದಲ್ಲಿ ಕಚ್ಚಾ ಸಾಮಗ್ರಿ ತಂದು ಕೇಂದ್ರದಲ್ಲಿಯೇ ಕ್ಯಾಲಿಫರ್‌ ಸ್ಯಾಂಡಲ್, ಕೃತಕ ಕೈ, ಕಾಲು ಸೇರಿದಂತೆ ಹಲವು ಸಾಧನಗಳನ್ನು ತಯಾರಿಸಲಾಗುವುದು’.
–ವರದಾ ಕೋಲಕರ್, ನೋಡಲ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.