ADVERTISEMENT

ಅಕ್ಕಮಹಾದೇವಿ ಕನ್ನಡದ ಶ್ರೇಷ್ಠ ಕವಯತ್ರಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:45 IST
Last Updated 16 ಏಪ್ರಿಲ್ 2017, 10:45 IST

ಶಿರಹಟ್ಟಿ:  ಪ್ರಥಮಾದಿ ಶರಣರಾದ ಬಸವಣ್ಣ ಸಿದ್ಧರಾಮರ ವಚನಗಳಿಗಿಂತ ಅಜಗಣ್ಣನ ವಚನಗಳು ಶ್ರೇಷ್ಠ. ಅಜಗಣ್ಣನ ಆರು ವಚನಗಳಿಗೆ ಅಕ್ಕ ಮಹಾದೇವಿಯ ಒಂದು ವಚನಕ್ಕೆ ಸಮನಾಗಿವೆ. ಅವರ ತತ್ವ, ಆದರ್ಶ ಎಲ್ಲರಿಗೂ ಪ್ರೇರಣೆ ಎಂದು ಸಾಹಿತಿ ಕವಿತಾ ದಂಡಿನ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಜರುಗಿದ ಶರಣ ಪೌರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂದಿನ ಸ್ಥಿತಿಗತಿಯಲ್ಲಿ ಸಮಾಜದಲ್ಲಿನ ಮೌಢ್ಯ, ಜಾತೀಯತೆ ಹಾಗೂ ಕಂದಾಚಾರಗಳನ್ನು ತಮ್ಮ ಬರವಣಿಗೆ ಮೂಲಕ ಜಾಗೃತಿಗೊಳಿಸಿ ಹೋಗಲಾಡಿಸುವಲ್ಲಿ ಅಕ್ಕಮಹಾದೇವಿಯ ಪಾತ್ರ ಪ್ರಮುಖವಾದದು. ಇತಿಹಾಸದ ಪುಟಗಳಲ್ಲಿ ಅಕ್ಕಮಾದೇವಿ ಅಜರಾಮರ. ಸಾಹಿತಿಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಅವರು ಸ್ಫೂರ್ತಿದಾಯಕ ಎಂದರು.

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಅಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್‌ ಶಿರಹಟ್ಟಿ ಘಟಕ ಪ್ರಗತಿ ಪಥದಲ್ಲಿದೆ. ಮನೆಮನೆಯಲ್ಲಿ, ಶಾಲಾ ಕಾಲೇಜುಗಳಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡು ಶರಣರ ಸಂದೇಶ ತಲುಪಿಸುವಲ್ಲಿ ಸಫಲವಾಗಿವೆ. ಇಂತಹ ಕೆಲಸಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.

ADVERTISEMENT

ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಅಧ್ಯಕ್ಷ ಎಫ್‌.ಎಸ್‌ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕ ಪ್ರಶಸ್ತಿ ಪುರಸ್ಕೃತೆ ಹಾಗೂ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಕೆ. ಲಮಾಣಿ ಹಾಗೂ ಕಾರ್ಯದರ್ಶಿ ಎಸ್‌.ಬಿ. ಹೊಸೂರ ಅವರನ್ನು ಸನ್ಮಾನಿಸಲಾಯಿತು.

ಕೆ.ಎ ಬಳಿಗೇರ, ಆರ್‌.ಎಚ್‌. ಪರಬತ, ಭಾನುಮತಿ ಚನ್ನವೀರಶೆಟ್ಟರ, ರತ್ನ ಕಪ್ಪತ್ತನವರ, ಶಾರದಾ ಸಂಕದಾಳ, ಮಧು ಕಪ್ಪತ್ತನವರ, ವಿಜಯಲಕ್ಷ್ಮೀ ಬೋರಶೆಟ್ಟರ, ಲಲಿತಾ ನೂರಶೆಟ್ಟರ, ಮಹಾಂತೇಶ ಪವಾಡಶೆಟ್ಟರ, ಶಕುಂತಲಾ ಸಂಕದಾಳ ಉಪಸ್ಥಿತರಿದ್ದರು.ನಂದಾ ಕಪ್ಪತ್ತನವರ ಕಾರ್ಯಕ್ರಮ ನಿರೂಪಿಸಿದರು. ಎಚ್‌.ಎಂ. ದೇವಗಿರಿ ಸ್ವಾಗತಿಸಿದರು. ಸುಧಾ ಹುಚ್ಚಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.