ADVERTISEMENT

ಅಹವಾಲು ಆಲಿಕೆಗೆ ಸಿದ್ಧಗೊಂಡ ‘ವೇದಿಕೆ’

ಡಂಬಳದಲ್ಲಿ ಜಿಲ್ಲಾ ಆಡಳಿತ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:31 IST
Last Updated 16 ಜನವರಿ 2017, 6:31 IST
ಅಹವಾಲು ಆಲಿಕೆಗೆ ಸಿದ್ಧಗೊಂಡ ‘ವೇದಿಕೆ’
ಅಹವಾಲು ಆಲಿಕೆಗೆ ಸಿದ್ಧಗೊಂಡ ‘ವೇದಿಕೆ’   

ಡಂಬಳ: ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಎಂಬ ಸಾರ್ವಜನಿಕರು ಹಕ್ಕೊ ತ್ತಾಯ ಕುರಿತು ಅಹವಾಲು ಆಲಿಸಲು ಜಿಲ್ಲಾಡಳಿತ ಸಿದ್ಧತೆಕೈಗೊಂಡಿದೆ.
ಸ್ಥಳೀಯ  ತೋಂಟದಾರ್ಯ ಕಲಾ ಭವನದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ದವಾಗಿದ್ದು, ಡಾ.ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಗಣ್ಯರು ಬರುತ್ತಿರುವ ಹಿನ್ನೆಲೆಯಲ್ಲಿ ಆಸನ ಗಳ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದಪುಡಿ ಹಾಗೂ  ಉಪಮುಖ್ಯ ಸಂ ರಕ್ಷಣಾಧಿಕಾರಿ ಯಶಪಾಲ ಕ್ಷೀರ ಸಾಗರ ಕಾರ್ಯಕ್ರಮದ ಸಿದ್ಧತೆ ಕುರಿತು ಪರಿ ಶೀಲನೆ ನಡೆಸಿದರು.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಬೇಕು ಮತ್ತು ಅಹವಾಲು ಆಲಿ ಸಲು ಮೊದಲು ಹೆಸರು ನೋಂದಾ ಯಿಸಬೇಕು ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ನೇತೃತ್ವದಲ್ಲಿ ಆರಂಭಗೊಳ್ಳಲಿದ್ದು, ಮಠಾಧೀಶರು, ಜನಪ್ರತಿನಿಧಿಗಳು, ಚಿಂತಕರು, ಪರಿಸರವಾದಿಗಳು, ಗ್ರಾಮ ಸ್ಥರು, ರೈತರು, ಕಾರ್ಮಿಕರು ಸಾರ್ವಜ ನಿಕರು, ವಿವಿಧ ಸಂಘ–ಸಂಸ್ಥೆಗಳು, ತಾಂಡಾದ ಜನರು, ವಿದ್ಯಾರ್ಥಿಗಳು  ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸ ಲಿದ್ದು ಅವರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮತಿ ತಿಳಿಸಿದರು.

ಸುಗಮ ಸಂಚಾರಕ್ಕೆ ವ್ಯವಸ್ಥೆ  ಮಾಡಲಾಗಿದೆ. ವಿಶೇಷವಾಗಿ ಮುಂಡರಗಿ. ಡೋಣಿ, ಡೋಣಿ ತಾಂಡಾ, ಹಾಗೂ ಸುತ್ತಲಿನ ಗ್ರಾಮಗಳಿಂದ ಹಲ ವಾರು ಸಂಘಟನೆಗಳು ಡಂಬಳ ಗ್ರಾಮದವರೆಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ಒಟ್ಟಿನಲ್ಲಿ ಈಗಾಗಲೆ ಕಪ್ಪತ್ತಗುಡ್ಡದ ವ್ಯಾಪ್ತಿಗೆ ಬರುವ ಪಂಚಾಯ್ತಿಯಲ್ಲಿ  ವಿಶೇಷ ಸಾಮಾನ್ಯ ಸಭೆ ನಡೆಸಿ ರಕ್ಷಣೆ ಗಾಗಿ ಠರಾವು ಪಾಸು ಮಾಡಿದ್ದಾರೆ. ಹೀಗಾಗಿ ಇಲ್ಲಿ ನಡೆಯಲಿರುವ ಸಭೆ ಯಲ್ಲಿ ಸಾರ್ವಜನಿಕರ ಅಭಿಪ್ರಾಯ ದಿಂದ ಸರ್ಕಾರಕ್ಕೆ  ಎಚ್ಚರಿಕೆಯ ಸಂದೇಶ ರವಾನೆಯಾಗುವುದು ಮಾತ್ರ ಖಚಿತ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.