ADVERTISEMENT

ಇ–ಪಾವತಿಗೆ ತಡೆ: ಎ.ಪಿ.ಎಂ.ಸಿ ವ್ಯಾಪಾರ ಆರಂಭ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 5:09 IST
Last Updated 2 ಸೆಪ್ಟೆಂಬರ್ 2017, 5:09 IST

ಲಕ್ಷ್ಮೇಶ್ವರ: ಕಳೆದ 34 ದಿನಗಳಿಂದ ಸರ್ಕಾರ ಜಿಲ್ಲೆಯ ಎಲ್ಲ ಎ.ಪಿ.ಎಂ.ಸಿಗಳಲ್ಲಿ ಇ–ಪಾವತಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿತ್ತು. ಆದರೆ ಇದಕ್ಕೆ ದಲಾ ಲರು, ಖರೀದಿದಾರರು, ಹಮಾಲರು ತೀವ್ರ ವಿರೋಧ ವ್ಯಕ್ತಪಡಿಸಿ ಜಿಲ್ಲೆಯಾ ದ್ಯಂತ ಉಗ್ರ ಹೋರಾಟ ನಡೆಸಿದ್ದರು.

ಈ ಹಿನ್ನೆಲ್ಲೆಯಲ್ಲಿ ಸದ್ಯಕ್ಕೆ ಸರ್ಕಾರ ಇ–ಪಾವತಿ ವ್ಯವಸ್ಥೆಯನ್ನು ಬಂದ್‌ ಮಾಡಿದ್ದು ಇದೀಗ ಇಲ್ಲಿನ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಶುರುವಾಗಿದೆ.

ಲಕ್ಷ್ಮೇಶ್ವರದ ಎ.ಪಿ.ಎಂ.ಸಿ ಜಿಲ್ಲೆಯಲ್ಲಿ ಹೆಚ್ಚು ವಹಿವಾಟು ನಡೆಸುತ್ತಿದೆ. ಹೀಗಾಗಿ ಗದಗ ಜಿಲ್ಲೆ ಅಷ್ಟೆ ಅಲ್ಲದೆ ಧಾರವಾಡ, ಹಾವೇರಿ ಜಿಲ್ಲೆಗಳ ಹತ್ತಾರು ಹಳ್ಳಿಗಳಿಂದ ನೂರಾರು ರೈತರು ಫಸಲು ಮಾರಾಟಕ್ಕೆ ಇಲ್ಲಿಗೆ ಬರುತ್ತಾರೆ.

ADVERTISEMENT

ಆದರೆ ಒಂದು ತಿಂಗಳ ಹಿಂದೆ ಸರ್ಕಾರ ಇ–ಪಾವತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿತ್ತು. ಆದರೆ ಇದನ್ನು ವಿರೋಧಿಸಿದಲಾಲರು ತಮ್ಮ  ಅಂಗಡಿಗಳನ್ನು ಬಂದ್‌ ಮಾಡಿದ್ದರು. ಹೀಗಾಗಿ, ಕೆಲ ದಿನ ಎ.ಪಿ.ಎಂ.ಸಿ ವತಿಯಿಂದ ರೈತರ ಮಾಲನ್ನು ಖರೀದಿಸಲಾಗಿತ್ತು. ಆದರೆ ಮತ್ತೆ ಈಗ ಮೊದಲಿನ ವ್ಯವಸ್ಥೆ ಜಾರಿಗೆ ಬಂದಿದ್ದು ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತಮ್ಮ ಉತ್ಪನ್ನವನ್ನು ಮಾರಾಟಕ್ಕೆ ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.