ADVERTISEMENT

ಕಾಮಗಾರಿಗೆ ಶಂಕು ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 9:39 IST
Last Updated 16 ಮೇ 2017, 9:39 IST

ಹೊಳೆಆಲೂರ (ರೋಣ): ಗದಗ ಜಿಲ್ಲಾ ಪಂಚಾಯ್ತಿ ವತಿಯಿಂದ ಮೆಣಸಗಿ ಬಳಿ ₹ 3 ಕೋಟಿ ವೆಚ್ಚದಲ್ಲಿ ಬೆಣ್ಣೆ ಹಳ್ಳಕ್ಕೆ ಅಡ್ಡಲಾಗಿ ಬ್ಯಾರೇಜ್ ಕಮ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಆರ್.ಯಾವಗಲ್ಲ ಭೂಮಿ ಪೂಜೆ ಹಾಗೂ ಶಂಕು ಸ್ಥಾಪನೆ ಗುರುವಾರ ಸಂಜೆ ನೆರವೆರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಕಳೆದ ನಾಲ್ಕು ವರ್ಷಗಳಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರ, ಗ್ರಾಮೀಣ ಜನರ ಪರವಾಗಿ ಕೆಲಸ ಮಾಡುತ್ತಿದೆ.

ರಸ್ತೆ, ನೀರಾವರಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನರಗುಂದ ಮತಕ್ಷೇತ್ರದಲ್ಲಿ 15ಕ್ಕೂ ಹೆಚ್ಚು ಬ್ಯಾರೇಜ್‌ ಗಳನ್ನು ನಿರ್ಮಿಸಲಾಗಿದ್ದು ಇದರಿಂದ ರೈತರಿಗೆ ಅನುಕೂಲವಾಗಲಿದೆ’ ಎಂದರು.

ADVERTISEMENT

‘ಮತಕ್ಷೇತ್ರದ ಕೊಣ್ಣೂರ, ಹೊಳೆ ಆಲೂರ, ಲಕ್ಕುಂಡಿ ಸೇರಿದಂತೆ ನಾಲ್ಕು ಹೋಬಳಿಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾರಂಭಿಸಲಾಗುತ್ತದೆ’ ಎಂದರು.

‘ಹೊಳೆಆಲೂರಲ್ಲಿ ವೆಂಕಟರಾಯರ ಹೆಸರಲ್ಲಿ ಡಿಪ್ಲೊಮಾ ಕಾಲೇಜು ಆರಂಭಿಸಲಾಗುತ್ತದೆ. ₹ 460 ಕೋಟಿ ವೆಚ್ಚದಲ್ಲಿ ನರಗುಂದ ಹಾಗೂ ರೋಣ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗುತ್ತದೆ’ ಎಂದರು.

ಮೆನಸಗಿಯ ಮುದಿಯಪ್ಪಯ್ಯ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು, ಕಾಂಗ್ರೆಸ್ ಯುವ ಮುಖಂಡ ರವೇಂದ್ರ ಹಿರೇಮಠ, ಬಿ.ಆರ್.ಹಿರೇಗೌಡರ, ರಾಜು ಕೆಂಚನಗೌಡ್ರ, ನಾಗವ್ವ ಕಲಾದಗಿ, ಶಾರದಾ ಹಿರೇಗೌಡ್ರ, ರಾಜು ಕಲಾಲ, ಪ್ರಕಾಶ ಗುದಗಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.