ADVERTISEMENT

ಕೇಂದ್ರದ ಮನವೊಲಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:44 IST
Last Updated 4 ಮಾರ್ಚ್ 2017, 6:44 IST

ನರಗುಂದ: ಮಹಾದಾಯಿ ಯೋಜನೆ ಜಾರಿ ಮಾಡಲು  ವಿಧಾನಸಭೆಯಲ್ಲಿ ಅಂಗೀಕರಿಸಿದರೆ ಸಾಲದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮನವೊಲಿಸಿ, ಪ್ರಧಾನ ಮಧ್ಯಸ್ಥಿಕೆಗೆ ಆಗ್ರಹಿಸಬೇಕು ಎಂದು ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ  ವೀರಬಸಪ್ಪ ಹೂಗಾರ ಒತ್ತಾಯಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 596ನೇ ದಿನ ಶುಕ್ರ ವಾರ ಅವರು ಮಾತನಾಡಿದರು. ಬಿಜೆಪಿ ನಾಯಕರು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಬೇಕಿದೆ.  ಎಲ್ಲ ಸಂಸದರೂ ಒಂದಾಗಿ ಪ್ರಧಾನಿ ಮನ ಒಲಿಸಬೇಕಿದೆ ಎಂದು ಅವರು ಹೇಳಿದರು.

ಈರಣ್ಣ ಗಡಗಿಶೆಟ್ಟರ, ವೀರೇಶ ಸೊಬರದಮಠ, ಚಂದ್ರಗೌಡ ಪಾಟೀಲ, ಭೀಮಪ್ಪ ದಿವಟಗಿ, ಪುಂಡಲೀಕ ಯಾದವ, ವಾಸು ಚವ್ಹಾಣ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರು, ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು, ಚನಬಸು ಹುಲಜೋಗಿ, ಜಗನ್ನಾಥ ಮುಧೋಳೆ, ಬಸಮ್ಮ ಐನಾಪುರ, ರತ್ನವ್ವ ಸವಳಬಾವಿ, ಮೃತ್ಯುಂಜಯ ಹಿರೇಮಠ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT