ADVERTISEMENT

ಕೇಂದ್ರ ಬಜೆಟ್‌: ಜಿಲ್ಲೆಗೆ ಆದ್ಯತೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 9:11 IST
Last Updated 20 ಜನವರಿ 2017, 9:11 IST
ಕೇಂದ್ರ ಬಜೆಟ್‌: ಜಿಲ್ಲೆಗೆ ಆದ್ಯತೆ ನೀಡಲು ಆಗ್ರಹ
ಕೇಂದ್ರ ಬಜೆಟ್‌: ಜಿಲ್ಲೆಗೆ ಆದ್ಯತೆ ನೀಡಲು ಆಗ್ರಹ   

ಗದಗ: ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಗದಗ ಮಾರ್ಗವಾಗಿ ಹೆಚ್ಚು ರೈಲು ಓಡಿಸಬೇಕು, ನಗರದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ಮೂಲ ಸೌಲಭ್ಯ  ಒದಗಿಸು ವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪೂರೈಸಬೇಕು ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿ ಮಂತ್ರಿಗಳಿಗೆ, ರೈಲ್ವೆ ಸಚಿವರಿಗೆ, ರೈಲ್ವೆ ಮಂಡಳಿಯ ಕಾರ್ಯದರ್ಶಿಗಳಿಗೆ ಹಾಗೂ ಸಂಸದ ಶಿವಕುಮಾರ ಉದಾಸಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಬೆಟಗೇರಿ ಕೆ.ಸಿ. ರಾಣಿ ಉದ್ಯಾನದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅವರು ತಿಳಿಸಿದರು.

ಬೆಟಗೇರಿ ಬಸ್‌ ನಿಲ್ದಾಣಕ್ಕೆ ಮೂಲ ಸೌಕರ್ಯ ಒದಗಿಸಬೇಕು, ಸಿಟಿ ಬಸ್‌ಗಳ ವೇಳಾಪಟ್ಟಿ ಫಲಕ ಅಳವಡಿಸಬೇಕು. ರೈಲು ಗಾಡಿಗಳು ಬರುವ ವೇಳೆ ಅನುಸಾರವಾಗಿ ಸಿಟಿ ಬಸ್‌ಗಳನ್ನು ಬಿಡಬೇಕು ಎಂದು ಆಗ್ರಹಿಸಿದರು.

ಜ.20 ರಂದು ನಗರಕ್ಕೆ ಭೇಟಿ ನೀಡಲಿರುವ ವಾಯುವ್ಯ ಕನಾರ್ಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಸದಾನಂದ ಡಂಗನವರ ಅವರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಲಿಂಗರಾಜ ಬಗಲಿ, ವೀರಣ್ಣ ಜ್ಯೋತಿ, ಈರಣ್ಣ ಪಟ್ಟಣಶೆಟ್ಟಿ, ಅಶೋಕ ಅಂಗಡಿ, ಏಕನಾಥ ಚೋಳಿನ, ಚಂಬಣ್ಣ ಗದುಗಿನ, ಲಕ್ಷ್ಮಣ ವಾಲ್ಮೀಕಿ, ವಿಷ್ಣು ಕಲಾಲ, ಎಲ್.ಆರ್.ಚಂದ್ರಗಿರಿ, ಈರಣ್ಣ ಮುಳ್ಳಾಳ, ಬಸವರಾಜ  ತಡಸದ, ಕೆ.ಆರ್.ಮೇರವಾಡೆ, ದೇವಿಸಿಂಗ್ ಬ್ಯಾಳಿ, ದಲಭಂಜನ, ಪ್ರೇಮನಾಥ ಭರದ್ವಾಡ, ರಾಮಣ್ಣ ಗಡಗಿ, ರಾಜು ಹೊಂಗಲ್, ಸಿಂದಗಿ ಚಾಚಾ, ಮನ್ಸೂಖಲಾಲ ಪುಣೇಕರ, ಜಂಬಣ್ಣ ಹುಡೆದ, ವಿ.ಎ. ಸೋನಾರ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.