ADVERTISEMENT

ಕೋಟುಮಚಗಿಯಲ್ಲಿ ತಾತ್ಕಾಲಿಕ ಗೋಶಾಲೆ

ಲಕ್ಕುಂಡಿಯಲ್ಲಿ ಹೋಬಳಿ ಮಟ್ಟದ ಜನಸ್ಪಂದನ ಸಭೆ; ಪ್ರತಿಧ್ವನಿಸಿದ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:31 IST
Last Updated 22 ಮಾರ್ಚ್ 2017, 7:31 IST
ಲಕ್ಕುಂಡಿಯ ಗಂಡು ಮಕ್ಕಳ ಸರ್ಕಾರಿ ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಬೆಟಗೇರಿ ಹೋಬಳಿ ವ್ಯಾಪ್ತಿಯ ಜನಸ್ಪಂದನೆ ಸಭೆಯಲ್ಲಿ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಮಾತನಾಡಿದರು. ಸಿಇಒ ಮಂಜುನಾಥ ಚೌವ್ಹಾಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಸಂತೋಷಬಾಬು ಇದ್ದಾರೆ.
ಲಕ್ಕುಂಡಿಯ ಗಂಡು ಮಕ್ಕಳ ಸರ್ಕಾರಿ ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಬೆಟಗೇರಿ ಹೋಬಳಿ ವ್ಯಾಪ್ತಿಯ ಜನಸ್ಪಂದನೆ ಸಭೆಯಲ್ಲಿ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಮಾತನಾಡಿದರು. ಸಿಇಒ ಮಂಜುನಾಥ ಚೌವ್ಹಾಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಸಂತೋಷಬಾಬು ಇದ್ದಾರೆ.   

ಗದಗ: ತಾಲ್ಲೂಕಿನ ಕೋಟುಮಚಗಿ ಗ್ರಾಮಕ್ಕೆ  ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ತಕ್ಷಣ ತಾತ್ಕಾಲಿಕ ಗೋಶಾಲೆ ಪ್ರಾರಂಭಿಸಲು ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಸೂಚನೆ ನೀಡಿದರು.

ಲಕ್ಕುಂಡಿಯ ಗಂಡುಮಕ್ಕಳ ಸರ್ಕಾರಿ ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಬೆಟಗೇರಿ ಹೋಬಳಿ ವ್ಯಾಪ್ತಿಯ ಜನಸ್ಪಂದನೆ ಸಭೆಯಲ್ಲಿ ಅವರು ಮಾತನಾಡಿದರು. ಬರ ಪರಿಸ್ಥಿತಿ ನಿರ್ವಹಣೆ ಪರಿಹಾರ ಕ್ರಮ ಕುರಿತು ಸಾರ್ವಜನಿಕರಿಂದ ಮನವಿ ಸ್ವೀಕರಿಸದರು. 

ಅಡವಿಸೋಮಾಪುರದಲ್ಲಿ ಗುರುತಿ ಸಿದ ಖಾಸಗಿ ಕೊಳವೆ ಭಾವಿ ನೀರು ಪೂರೈಕೆ ತಡವಾಗಲಿದ್ದು ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸ ಬೇಕು, 3 ಹಾಗೂ 2ನೇ ವಾರ್ಡಿನ ನೀರು  ಪೂರೈಕೆ ಪೈಪ್‌ಲೈನ್ ಕಾಮಗಾರಿ ಪೂರ್ಣ ಗೊಳಿಸಿರುವ ಗುತ್ತಿಗೆದಾರರು, ತ್ವರಿತ ವಾಗಿ ನೀರಿನ ಸಂಪರ್ಕ ಕಲ್ಪಿಸಲು ಜಿಲ್ಲಾ ಧಿಕಾರಿ ಸೂಚನೆ ನೀಡಿದರು. 

ನೀರಲಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊಳವೆ ಭಾವಿಗಳ ಪುನ ಶ್ಚೇತನ ಸಂದರ್ಭದಲ್ಲಿ ಹೆಚ್ಚಿನ ಆಳಕ್ಕೆ ಬಾವಿ ಕೊರೆಸುವ ಅಂಶವನ್ನು ಪ್ರಶಂಶಿ ಸಿದ ಜಿಲ್ಲಾಧಿಕಾರಿ, ಶುದ್ಧ ನೀರಿನ ಘಟಕ ನಿರ್ವಹಣೆ, ಶಾಲೆ ಪಕ್ಕಕ್ಕೆ ಕೈಗಾರಿಕೆಗೆ ಪರವಾನಗಿ ನೀಡಿರುವ ಹಾಗೂ ನರಸಾ ಪುರ ನಾಗಸಮುದ್ರ ರಸ್ತೆ ಸಾರ್ವಜನಿಕರ ಬೆಳಕಿಗೆ ದೊರೆಯದಿರುವ ಕುರಿತು ಸಾರ್ವಜನಿಕರಿಂದ ಬಂದ ದೂರುಗ ಳನ್ನು ಪರಿಶೀಲಿ ಇತ್ಯರ್ಥಪಡಿಸುವಂತೆ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಗಳಿಗೆ ಸೂಚಿಸಿ, ಇದಕ್ಕೆ ಸಂಬಂಧಿಸಿದ ವರದಿ ನೀಡಲು ಸೂಚಿಸಿದರು.

ತಿಮ್ಮಾಪುರ ಗ್ರಾಮಕ್ಕೆ 12 ಕಿ.ಮೀ ದೂರದಿಂದ ನೀರು ಪೂರೈಸಲಾಗು ತ್ತಿದೆ.  ಊರಲ್ಲಿ ಕೊಳವೆ ಬಾವಿ ಗಡಸು ನೀರು ಲಭ್ಯವಿದ್ದು ತಕ್ಷಣ ಅಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸುವ ಕುರಿತು ಕ್ರಮ ಜರುಗಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಭವನ ಅಥವಾ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು.

ಹರ್ಲಾಪುರವನ್ನು ಪೋಡಿಮುಕ್ತ ಗ್ರಾಮವಾಗಿಸಲು ಕ್ರಮ ತೆಗೆದುಕೊಳ್ಳಬೇಕು, ಖಾಲಿ ಇರುವ ಐದು ಎಕರೆ ಗೋಮಳ ಜಮೀನು ಅಳತೆ ಮಾಡಿ ವರದಿ ನೀಡಲು ತಹಶೀಲ್ದಾರರಿಗೆ ನೀಡಿರುವ ಸೂಚನೆ ಆಧರಿಸಿ ನಿವೇಶನ ರಹಿತ ಗ್ರಾಮಸ್ಥರಿಗೆ ಮನೆ ಒದಗಿಸಲು ಕ್ರಮ ಜರುಗಿಸಬೇಕು.  ಹಾತಲಗೇರಿ ಯಲ್ಲಿ ಈಗಿರುವ  ಸ್ಮಶಾನ ಜಮೀನು ಕುರಿತು ಕಂದಾಯ ನಿರೀಕ್ಷಕರು ಭೇಟಿ ನೀಡಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.  

ಲಕ್ಕುಂಡಿಯಲ್ಲಿ 2015ರಲ್ಲಿ 12 ಅಂಗನವಾಡಿ ಕೇಂದ್ರಗಳಲ್ಲಿ ಹಾಕಿರುವ ಶುದ್ಧ ನೀರಿನ ಘಟಕಗಳು ಕಾರ್ಯನಿರ್ವ ಹಿಸದೇ ಹಾಗೇ  ಇವೆ.  ಇನ್ನು ಕೆಲವೆಡೆ ಘಟಕ ಇಲ್ಲದೇ ಕಾಮಗಾರಿ ಮಾಡಿ ಬಿಲ್ಲು ಪಾವತಿಸಿದ ದೂರುಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ವಿಭಾಗದಿಂದ ಕಳೆದ 3 ವರ್ಷ ಗಳಲ್ಲಿ ಪಾವತಿಸಿದ ಎಲ್ಲ ಶುದ್ಧ ಕುಡಿ ಯುವ ನೀರಿನ ಘಟಕಗಳ ವಸ್ತು ಸ್ಥಿತಿ ಕುರಿತು ವಿಚಾರಣೆಗೆ,

ಲಕ್ಕುಂಡಿಯಲ್ಲಿ 9ನೇ ವಾರ್ಡಿನಲ್ಲಿ ಸಿಸಿ ರಸ್ತೆ ನಿರ್ಮಾಣದಿಂದಾಗಿ ನೀರು ಪೂರೈಕೆ ಆಗದಿರುವ ಕುರಿತು  ಪರಿಹಾರ ಕ್ರಮ ಕುರಿತು ನೋಡಲ್ ಅಧಿಕಾರಿ ಹಾಗೂ  ಗ್ರಾಮೀಣ ನೀರು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದರು.

ಬರ ನಿರ್ವಹಣೆಗೆ ಆದ್ಯತೆ
ಗದಗ:
ನೀರಿನ ಸಮಸ್ಯೆಗಳ ಬರ ಸಂಕಷ್ಟದಲ್ಲಿರುವ ಗ್ರಾಮಸ್ಥರಿಗೆ ಹಾಗೂ ಕುಡಿಯುವ ನೀರು ಜಾನುವಾರುಗಳಿಗೆ ಮೇವು ಕುರಿತು ಗ್ರಾಮ ಮಟ್ಟದಲ್ಲಿ ಜಿಲ್ಲಾಡಳಿತ ಸ್ಪಂದಿಸಿ ತಕ್ಷಣದ ಕ್ರಮ ಜರುಗಿಸಲು ಹೋಬಳಿ ಮಟ್ಟದ ಜನಸ್ಪಂದನೆ ಕಾರ್ಯಕ್ರಮ ಜರುಗಿಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್‌ ಹೇಳಿದರು.

ADVERTISEMENT

ಉಳಿದ ಸಭೆಗಳಂತೆ ಸಾರ್ವತ್ರಿಕ, ವೈಯಕ್ತಿಕ ವಿಷಯಗಳ ಚರ್ಚೆಗೆ  ಇಲ್ಲಿ ಅವಕಾಶವಿಲ್ಲ. ಸದ್ಯ ಜೂನ್‌ವರೆಗೆ ಜಿಲ್ಲೆಯ ಬರ ನಿರ್ವಹಣೆ, ಜನರ ಸಂಕಷ್ಟಕ್ಕೆ ಸ್ಪಂದನೆ, ಜಾನುವಾರು , ಪಕ್ಷಿಗಳ ನೀರು ಮೇವು ಜಿಲ್ಲಾಡಳಿತ ಪ್ರಥಮ ಆದ್ಯತೆ ಆಗಿದೆ ಎಂದರು. 

ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಕೆ. ಸಂತೋಷಬಾಬು, ಸಿಇಒ ಮಂಜುನಾಥ ಚೌಹಾಣ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ,  ತಹಶೀಲ್ದಾರ ಎಂ.ಬಿ. ಬಿರಾದಾರ ಇದ್ದರು.

‘ವರದಿ ನೀಡಿ’
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ವಿಭಾಗದಿಂದ ಕಳೆದ 3 ವರ್ಷಗಳಲ್ಲಿ ಪಾವತಿಸಿದ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಬಿಲ್‌ ಕುರಿತು, ಗ್ರಾಮೀಣ ನೀರು ನೈರ್ಮಲ್ಯ ವಿಭಾಗದ ಅಧಿಕಾರಿಗಳು ತಕ್ಷಣ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.