ADVERTISEMENT

ಗಜೇಂದ್ರಗಡದಲ್ಲಿ ಶಂಕಿತ ಡೆಂಗಿ: ಆತಂಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 7:07 IST
Last Updated 22 ಜುಲೈ 2017, 7:07 IST

ಗಜೇಂದ್ರಗಡ: ಪಟ್ಟಣದಲ್ಲಿ 15 ದಿನಗಳಿಂದ ಕೆಲಪ್ರದೇಶಗಳಲ್ಲಿ ಜ್ವರ ದಿಂದ ಜನರು ಬಳಲುತ್ತಿದ್ದು ಅನೇಕರು ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಇದು ಜನರಲ್ಲಿ ಭೀತಿ ಹುಟ್ಟಿಸಿದೆ.
ಪಟ್ಟಣದ ಲಂಬಾಣಿ ತಾಂಡಾ, ನವನಗರ ಮತ್ತು ಬಸವೇಶ್ವರ ನಗರಗಳು ಶಂಕಿತ ಡೆಂಗಿ ಜ್ವರದಿಂದ ತಲ್ಲಣಕೊಳ ಗಾಗಿವೆ. ಈಚೆಗೆ ಸಮೀಪದ ಬೈರಾಪುರ ತಾಂಡಾದಲ್ಲಿಯೂ ಇದೇ ರೀತಿ ‘ಜ್ವರ ಭಯ’ ಆವರಿಸಿತ್ತು.

ಈಗ ಪಟ್ಟಣದ ಜನ ರೋಗಭೀತಿಗೆ ಒಳಗಾಗಿದ್ದಾರೆ. ಲಂಬಾಣಿ ತಾಂಡಾದಲ್ಲಿ ಇರುವ ಚರಂಡಿ ಕೊಳೆಯಿಂದ ತುಂಬಿ ಸುತ್ತಲೂ ವಾಸಿಸುವವರು ಇದರ ವಾಸನೆ ಸಹಿಸಲಾರದಂತಾಗಿದೆ.  ಈ ಗಟಾರವು ಹಂದಿಗಳ ತಾಣವಾಗಿದ್ದು, ಅದರ ಮೇಲೆ ಕಟ್ಟಿಗೆಗಳನ್ನು ಪೇರಿಸಿದ್ದರಿಂದ ಇದನ್ನು ಸ್ವಚ್ಛಗೊಳಿಸಲು ಆಗುತಿಲ್ಲ ಎಂದು ಪುರ ಸಭೆಯವರು ಹೇಳುತ್ತಾರೆ.

ಮುಖಂಡ ಪೀರು ರಾಠೋಡ ಹೇಳುವಂತೆ, ‘ಚರಂಡಿಯಲ್ಲಿ 3–4 ಅಡಿ ವರೆಗೂ ಕೊಳೆ ನಿಂತಿದೆ. ಇಂತಹ ಗಟಾರ ವನ್ನು ಕಟ್ಟಿ ನಮ್ಮನ್ನು ಹಾಳುಮಾಡು ತ್ತಿದ್ದಾರೆ. ರಾತ್ರಿ ಸೊಳ್ಳೆಗಳ ಕಾಟದಿಂದ ಸಾಕಾಗಿ ಹೋಗಿದೆ. ಎಲ್ಲರ ಮನೆಗಳಲ್ಲಿ ಮಲೇರಿಯಾ, ಶಂಕಿತ ಡೆಂಗಿ, ಟೈಫಾಯ್ಡ ಪೀಡಿತರು ಹೆಚ್ಚಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೋದರೆ ಇದನ್ನು ಪತ್ತೆಹಚ್ಚಲು ಮೂರು ದಿನ ಬೇಕು ಎಂದು ಹೇಳು ತ್ತಾರೆ. ಹೀಗಾಗಿ, ಜನ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸು ವಂತಾಗಿದೆ’ ಎಂದರು.

ADVERTISEMENT

ಚರಂಡಿ ಮೌನೇಶ್ವರ ಗುಡಿಯಿಂದ ಪೊಲೀಸ ಕಚೇರಿಯವರೆಗಿಗೆ ಇದ್ದು, ಅದನ್ನು ಸ್ವಚ್ಛಗೊಳಿಸುವುದು ದುಸ್ತರವಾಗಿದೆ. ನಮಗೆ ಅಲ್ಲಿಯ ಜನರು ಸಹ ಕಾರ ನೀಡಬೇಕು ಎಂದು ಪುರಸಭೆ ಯವರು ಹೇಳುತ್ತಾರೆ.

‘ತಾಂಡಾದಲ್ಲಿನ ಈ ಚರಂಡಿ ಸನಿಹ ದಲ್ಲಿ ಇದರ ಗಬ್ಬು ವಾಸನೆಯಿಂದ ಬೆಳ ತನಕ ನಾವು ನಿದ್ದಿ ಮಾಡೂದಿಲ್ಲ. ಸೊಳ್ಳಿ ಕಾಟ ಬೇರೆ. ಈಗ ಜ್ವರದಿಂದ ಬಳಲು ವವರನ್ನು ತೋರಿಸಲು ₹ 10–15 ಸಾವಿರ ಕಳಕೊಳ್ಳಾಕತ್ತೀವಿ. ಇಲ್ಲಿ ಯಾರೂ ದಾದ ಮಾಡವಲ್ಲರು.ಇಲೆಕ್ಸನ್ ಬಂದಾಗ ಕೈಕಾಲು ಹಿಡಕೊಂತಾರ ಆರಿಸಿ ಬಂದ ಮ್ಯಾಲೆ ಅಲ್ಲೆ ನಾರಿಕೊಂತ ಸಾಯ್ರಿ ಎಂದು ಹೇಳ್ತಾರ’ ಎನ್ನುತ್ತಾರೆ ತಾಂಡಾದ ಕಮಲವ್ವ ರಾಠೋಡ, ಮಂಜುಳಾ ಚವ್ಹಾಣ, ದೇವಕ್ಕ ಬಾಣೋತ್ತರ, ಹಾಗೂ ಪಾರವ್ವ ರಾಠೋಡ.

‘ಇಲ್ಲಿನ ಗಟಾರ ತುಂಬಿ ಹರಿಯು ವಾಗ ಮಾತ್ರ ಮುನ್ಸಿಪಾಲಟಿಯವರು ಬರ್ತಾರ. ಈಗ ಜಡ್ಡಿಗೆ ಬಿದ್ದವರನ್ನ ಇಲ್ಲಿನ ಸರ್ಕಾರ ದವಾಖಾನಿಗೆ ಹಾಕಿದರೆ ಅವ್ರು ಏನೂ ಹೇಳೂದಿಲ್ಲ. ಅದಕ್ಕ ಗದಗ ದವಾಖಾನಿಗೆ ಹೋಗಿ ತೋರಿಸಿಕೊಂಡು ಬರುವದು ಅನಿವಾರ್ಯ’ಎಂದು ತಮ್ಮ ಅಸಹಾಯಕತೆಯನ್ನು ತಾಂಡಾದ ಮಹಿಳೆಯರು ತೋಡಿಕೊಂಡರು. ಈ ತಾಂಡಾ ದಲ್ಲಿ ಈಗಾಗಲೇ ರಾಜೇಶ ಗುಗಲೊತ್ತರ, ಸಾವಿತ್ರಿ ರಾಠೋಡ, ವಿರೇಶ ದಾರೋ ತ್ತರ ಗದಗದಲ್ಲಿ ಚಿಕಿತ್ಸೆಯನ್ನು ಪಡೆದು ಕೊಂಡು ಬಂದಿದ್ದಾರೆ.

ಈ ಬಗ್ಗೆ ಮುಖ್ಯಾಧಿಕಾರಿ ಹನು ಮಂತಮ್ಮ ನಾಯಕ, ನಾವು ಆಗಾಗ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದೇವೆ. ನಮ್ಮಲ್ಲಿ ಫಾಗಿಂಗ್ ಯಂತ್ರವಿಲ್ಲ. ಅದನ್ನು ಬೇರೆಕಡೆಯಿಂದ ತಂದು ಮಂಗಳವಾರ ದಿಂದ ತಾಂಡಾದಿಂದ ಆರಂಭಿಸಿ ಎಲ್ಲಾ ಕಡೆ ಫಾಗಿಂಗ್ ಮಾಡುತ್ತೇವೆ. ರೋಗ ಬರದಂತೆ ಸಾಕಷ್ಟು ನಿಗಾವಹಿಸಲಾಗು ತ್ತದೆ. ಜನರು ಕೂಡಾ ಈ ಕಾರ್ಯದಲ್ಲಿ ನಮಗೆ ಕೈಜೋಡಿಸಬೇಕು’ ಎಂದರು.

ಇಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯಾಧಿ ಕಾರಿ ಡಾ.ಪ್ರಶಾಂತ ಮಲ್ಲಾಪೂರ ಮಾತನಾಡಿ, ‘ನಮ್ಮಲ್ಲಿ ಒಬ್ಬರು ಡೆಂಗಿ ಶಂಕಿತ ರೋಗಿ ಬಂದಿದ್ರು. ಅವರನ್ನು ಗುಣಪಡಿಸಿ ಕಳುಹಿಸಲಾಗಿದೆ. ಜ್ವರ ತಡೆಯುವ ನಿಟ್ಟಿನಲ್ಲಿ ಲಾರ್ವಾ ಸರ್ವೆ ಕಾರ್ಯ, ಜನ ಜಾಗೃತಿ ಕಾರ್ಯವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕೈಗೊಂಡಿ ದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.