ADVERTISEMENT

ಧಾರಾವಾಹಿ ಚಿತ್ರೀಕರಣ: ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:35 IST
Last Updated 31 ಜನವರಿ 2017, 5:35 IST
ಧಾರಾವಾಹಿ ಚಿತ್ರೀಕರಣ: ಸಂಚಾರಕ್ಕೆ ಅಡ್ಡಿ
ಧಾರಾವಾಹಿ ಚಿತ್ರೀಕರಣ: ಸಂಚಾರಕ್ಕೆ ಅಡ್ಡಿ   

ಗಜೇಂದ್ರಗಡ: ಈ ಭಾಗದಲ್ಲಿ ನಡೆಯುತ್ತಿರುವ ‘ಗಂಗಾ’ ಧಾರಾವಾಹಿ ಚಿತ್ರಿಕರಣವನ್ನು ಸೋಮವಾರ ಇಲ್ಲಿನ ರೋಣ ರಸ್ತೆಯಲ್ಲಿ ಚಿತ್ರೀಕರಿಸುವಾಗ ಸಂಚಾರಕ್ಕೆ ತೊಂದರೆ ಉಂಟಾಯಿತು.

ಪಟ್ಟಣದಿಂದ ರೋಣ ರಸ್ತೆಯಲ್ಲಿರುವ ಹೊಟೇಲ್ಲೊಂದರ ಬಳಿ ಚಿತ್ರೀಕರಿಸುತ್ತಿರುವಾಗ ಜನರು ಅದ ನ್ನು ನೋಡಲು ಜನರು ರಸ್ತೆ ಮಧ್ಯದ ವರೆಗೆ ನಿಂತ ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು. ‘ಚಿತ್ರೀಕರಣ ಮಾಡುವಾಗ ಪೊಲೀಸರ ನೆರವನ್ನು ಪಡೆದುಕೊಳ್ಳಬೇಕು ಇಲ್ಲದಿದ್ದರೆ ಸಂಚಾರಕ್ಕೆ ತಡೆಯಾಗುವುದಲ್ಲದೇ, ಅಪಾಯವು ಸಂಭವಿಸಬಹುದು.ಚಿತ್ರ ತಂಡವು ಗಮನಿಸಿ ಮುಖ್ಯ ರಸ್ತೆಗಳಲ್ಲಿ ಚಿತ್ರಿಕರಿಸುವಾಗ ಜಾಗೃತಿಯನ್ನು ವಹಿಸಬೇಕೆಂದು’ ಎಂದು ಶಿವು ಅರಳಿ, ಕೆ.ಎಸ್.ಸಾಲಿಮಠ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.