ADVERTISEMENT

ಪೂರ್ಣಗೊಳ್ಳದ ಅಂಗನವಾಡಿ ಕಟ್ಟಡ

ಭೈರಾಪುರ ತಾಂಡಾದ ಮಕ್ಕಳಿಗಿಲ್ಲ ಕಲಿಕೆಗೊಂದು ಸೂರು; ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:10 IST
Last Updated 24 ಮಾರ್ಚ್ 2017, 6:10 IST

ಗಜೇಂದ್ರಗಡ: ಸುಮಾರು 15 ವರ್ಷ ಗಳಿಂದ ಇದ್ದ ಕಟ್ಟಡ ಹಾಗೇ ಇದೆ. ಅದರಲ್ಲಿ ಓದಬೇಕಾದ ಪುಟಾಣಿಗಳು ಇಂದಿಗೂ ದೇವಸ್ಥಾನದಲ್ಲಿಯೇ ಅಕ್ಷರ ಕಲಿಯುತ್ತಿವೆ. ಇದು ಪಟ್ಟಣ ಸಮೀಪದ ಗುಡ್ಡದ ಮೇಲಿರುವ ಭೈರಾಪುರ ತಾಂಡಾದ ಕಥೆ.

ರಾಜೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲಕಾಲೇಶ್ವರ ದೇವಸ್ಥಾನದ ಗುಡ್ಡದ ಮೇಲಿರುವ ಲಂಬಾಣಿಗರ ನೆಲೆ ಭೈರಾಪುರ ತಾಂಡಾದಲ್ಲಿರುವ ಅಂಗನ ವಾಡಿ ಅರ್ಧಂಬರ್ಧ ನಿರ್ಮಾಣ ಗೊಂಡು ನಿರುಪಯುಕ್ತವಾಗಿ ನಿಂತಿದೆ.

‘ನಾಗರಿಕ ಸೌಲಭ್ಯದಿಂದ ವಂಚಿತ ರಾದ ನಮ್ಮನ್ನು ಯಾರೂ ಕೇಳುತ್ತಿಲ್ಲ. ನಮ್ಮ ತಾಂಡಾದಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲದೇ ಸುಮಾರು 10 ಕಿ.ಮೀ ದೂರದ ಪಟ್ಟಣಕ್ಕೆ ಹೋಗುವ ಅನಿವಾರ್ಯತೆ ಇದೆ.

ಈವರೆಗೂ ನಮ್ಮೂರಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲ’ ಎನ್ನುತ್ತಾರೆ ತಾಂಡಾ ಯುವಕ ರಮೇಶ ರಾಠೋಡ. ಇನ್ನಾದರೂ ರಾಜಕೀಯ ಮಾಡದೇ ಶೀಘ್ರ ಅಂಗನವಾಡಿ ನಿರ್ಮಣಕ್ಕೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.